ಮೊದಲ ಬಜೆಟ್-ನಲ್ಲಿ ಸೂಟ್‍ಕೇಸ್ ಸಂಸ್ಕೃತಿ ಕೈ ಬಿಟ್ಟು, ದೇಸಿ ಸಂಸ್ಕೃತಿಯನ್ನು ಎತ್ತಿಹಿಡಿದ ನಿರ್ಮಲಾ ಸೀತಾರಾಮನ್​..

0
266

ಬಿಜೆಪಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿ ಬಜಟ್ ಮಂಡನೆಯಾಗಲಿದ್ದು, ದೇಶದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿರ್ಮಲಾ ಸೀತಾರಾಮನ್​ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. 2019-20ನೇ ಸಾಲಿನ ವಿಶೇಷತೆಯಿಂದ ಕೂಡಿದ್ದು, ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಪಾಶ್ಚಾತ್ಯ ಸಂಸ್ಕೃತಿ, ಸೂಟ್‌ಕೇಸ್‌ ಬಜೆಟ್ ಪರಂಪರೆಗೆ ನಿರ್ಮಲಾ ಅವರು ಅಂತ್ಯ ಹಾಡಿದ್ದು, ಬಜೆಟ್ ಪ್ರತಿಗಳನ್ನು ಕೆಂಪು ರೇಷ್ಮೆ ವಸ್ತ್ರದಲ್ಲಿ ಬಾಹಿ ಖಾತಾ (ಲೆಡ್ಜರ್)ದಂತೆ ಬಜೆಟ್ ಪ್ರತಿಗಳನ್ನು ತರಲಾಗಿದೆ. ಈ ಮೂಲಕ ದೇಸಿ ಸಂಸ್ಕೃತಿಯನ್ನು ಅನುಸರಿಸಿದ್ದಾರೆ.

Also read: ಬಿಗ್ ಬ್ರೆಕಿಂಗ್; ಕನ್ನಡಿಗರ ಹೋರಾಟಕ್ಕೆ ಕಡೆಗೂ ಫಲ, ಇನ್ಮುಂದೆ ಕನ್ನಡದಲ್ಲೂ ಬ್ಯಾಕಿಂಗ್ ಪರೀಕ್ಷೆ ಬರೆಯಲು ಅನುಮತಿ..

ಹೌದು ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಇಂದಿರಾ ಗಾಂಧಿ ನಂತರ ಇದೇ ಮೊದಲ ಬಾರಿಗೆ ಮಹಿಳಾ ವಿತ್ತ ಸಚಿವೆಯೊಬ್ಬರು ಬಜೆಟ್ ಮಂಡಿಸುತ್ತಿದ್ದಾರೆ. ಮಹಿಳೆಯೊಬ್ಬರು ಈ ಬಾರಿ ಬಜೆಟ್ ಮಂಡಿಸುತ್ತಿರುವುದರಿಂದ ನಿರೀಕ್ಷೆಗಳೂ ಹಲವಿದೆ. ಇದೇ ವೇಳೆ ಬಜೆಟ್ ಮಂಡಿಸುತ್ತಿರುವ ಮಗಳಿಗೆ ಸಾಥ್ ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂದೆ ನಾರಾಯಣ ಸೀತಾರಾಮನ್ ಹಾಗೂ ತಾಯಿ ಸಾವಿತ್ರಿ ಸಂಸತ್ತಿಗೆ ಆಗಮಿಸಿದ್ದಾರೆ. ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

Also read: ಟೋಲ್-ಗಳಲ್ಲಿ ಉದ್ದದ ಕ್ಯೂ ಇರುವಾಗ ಕ್ಯಾಶ್ ಮೂಲಕ ಹಣ ಪಾವತಿಸಲು ಮುಂದಾದರೆ ಬೀಳುತ್ತೆ ಭಾರಿ ದಂಡ!! ಇನ್ಹೇಗೆ ಪಾವತಿಸಬೇಕು ಅಂತ ಇಲ್ಲಿ ಓದಿ!!

ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಖರ್ಚನ್ನು ಹೆಚ್ಚಿಸಿ, ತೆರಿಗೆ ವ್ಯವಹಾರಗಳ ಬಗ್ಗೆ ಪ್ರಮುಖ್ಯತೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದರಂತೆ ಕೆಂಪುಬಟ್ಟೆಯಲ್ಲಿ ಬಜೆಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್‍ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಬಟ್ಟೆಯಲ್ಲಿ ಕಟ್ಟುವುದು ನಮ್ಮ ದೇಶದ ಸಂಪ್ರದಾಯ. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬರಲು ಈ ಬಾರಿ ಬ್ರೀಫ್‍ಕೇಸ್ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಬಜೆಟ್ ಮುಖ್ಯಾಂಶ : 05-07-2019

Also read: ಮತ್ತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ; ಹೇಗಿದೆ ನೋಡಿ ಹೊಸ ಪ್ರಶ್ನೆಪತ್ರಿಕೆ ಸ್ವರೂಪ..

ಕಾರ್ಪೋರೇಟ್ ಬಾಂಡ್ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ, ಪ್ರಧಾನಮಂತ್ರಿ ‘ಕರ್ಮಯೋಗಿ ಮಾನ್ ಸಮ್ಮಾನ್’ ಯೋಜನೆಗೆ ಚಾಲನೆ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್, ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ , ಎಂಎಸ್ ಎಂಇಗಳಿಗೆ 350 ಕೋಟಿ ಸಾಲ ನೀಡಿಕೆ, ಎಂಸ್ ಎಂ ಇಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ, ‘ಒನ್ ನೇಶನ್ ಒನ್ ಗ್ರಿಡ್’ ಮೂಲಕ ವಿದ್ಯುತ್ ಸೌಕರ್ಯ, ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೆ ನಿರ್ಧಾರ.ಜಲಮಾರ್ಗ ಯೋಜನೆಗೆ ಒತ್ತು. ಗಂಗಾನದಿಯಲ್ಲಿ ಒಳನಾಡು ಜಲಸಾರಿಗೆಗೆ ಆಧ್ಯತೆ. ಸರಕು ಸಾಗಣೆಗೆ ಅನುಕೂಲಕಾರಿ ವಾತಾವರಣ ನಿರ್ಮಾಣ. ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ಧನ ಘೋಷಣೆ.
ಮುಂದಿನ 3 ವರ್ಷಕ್ಕೆ 10 ಸಾವಿರ ಕೋಟಿ ಪ್ರೋತ್ಸಾಹ ಧನ,ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ಪ್ರೇಮಿ ವಾಹನ ವ್ಯವಸ್ಥೆ ಸಾಗರ್ ಮಾಲಾ, ಭಾರತ್ ಮಾಲಾ ಮೂಲಕ ಸಾರಿಗೆ ಕ್ಷೇತ್ರಕ್ಕೆ ಕೊಡುಗೆ. ಸಾರಿಗೆ ವೆಚ್ಚವನ್ನು ಕಡಿಮಗೊಳಿಸೋ ಉದ್ದೇಶದಿಂದ ಯೋಜನೆ. ಗ್ರಾಮ ಹಾಗೂ ನಗರಗಳ ಅಂತರ ಕಡಿಮೆಗೊಳಿಸುವ ನಿಟ್ಟಿನಿಂದ ಸಾರಿಗೆ ಕಾಂತ್ರಿ.300 ಕಿ. ಮೀ. ಮೆಟ್ರೋ ಯೋಜನೆಗೆ ಅನುಮೋದನೆ, ಮುದ್ರಾ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ, ಸೇರಿದಂತೆ ಹಲವು ಯೋಜನೆಗಳನ್ನು ಈಗಾಗಲೇ ಮಂಡಿಸಿದ್ದಾರೆ.