ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಬಜಟ್; ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ..

0
544

ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​, ನಾಗರಿಕ, ಅಭಿವೃದ್ಧಿ ಸ್ನೇಹಿ ಮತ್ತು ದೂರದೃಷ್ಟಿಯ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಬಜೆಟ್ ನಾಗರಿಕ , ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ ಆಗಿದೆ,ಎಂದು ನರೇಂದ್ರ ಮೋದಿಯವರು ಹೇಳಿದ್ದು. ಈ ಬಜೆಟ್ ಗೆ ಹಲವು ರೈತರು ಅಸಮಾದಾನ ವ್ಯಕ್ತಿಯ ಪಡಿಸಿದರೆ ವಾಹನ ಸವಾರರಿಗೆ ಶಾಕ್ ನೀಡಿದೆ.

Also read: ಮೂರು ಮಕ್ಕಳನ್ನು ಹೆತ್ತ ಪಾಲಿಕೆ ಸದಸ್ಯೆಯನ್ನು ಅನರ್ಹ ಗೊಳಿಸಿದ ಕೋರ್ಟ್; ಚುನಾವಣೆ ನಿಲ್ಲುವುದಕ್ಕೆ ಅರ್ಹತೆಗಿಂತ ಫ್ಯಾಮಿಲಿ ಪ್ಲಾನಿಂಗ್ ಮುಖ್ಯವೆಂದ ಸುಪ್ರಿಂ ಕೋರ್ಟ್!!

ಹೌದು 2019-20 ರ ಬಜೆಟ್ ಬಡವರ ಸಬಲೀಕರಣ ಹಾಗೂ ಯುವಕರಿಗೆ ಉತ್ತಮ ಭವಿಷ್ಯವನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ. ಹಸಿರು ಬಜೆಟ್ ಎಂದು ವರ್ಣಿಸಿದ ಪ್ರಧಾನಿ ಮೋದಿ, ಪರಿಸರ ಹಾಗೂ ಶುದ್ಧ ಇಂಧನದ ಬಗ್ಗೆ ಗಮನ ಹರಿಸಿದೆ. ಸರ್ಕಾರದ ನೀತಿಗಳು ದೀನ ದಲಿತರಿಗೆ ಅಧಿಕಾರವನ್ನು ನೀಡಲಿದ್ದು, ದೇಶದ ಅಭಿವೃದ್ಧಿಗೆ ಅವರನ್ನು ಶಕ್ತಿಯ ಕೇಂದ್ರಗಳಾಗಿ ಪರವರ್ತಿಸಲಿವೆ ಎಂದು ಪ್ರಧಾನಿ ಹೇಳಿದರೆ ಚಿನ್ನ ಕೊಳ್ಳುವವರಿಗೆ ಹೊರೆಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾದ್ರೆ ಏನಿದೆ ಬಜೆಟ್ ಅಲ್ಲಿ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಯಾವುದು ಅಗ್ಗ ಯಾವುದೇ ದುಬಾರಿ?

Also read: ಮೊದಲ ಬಜೆಟ್-ನಲ್ಲಿ ಸೂಟ್‍ಕೇಸ್ ಸಂಸ್ಕೃತಿ ಕೈ ಬಿಟ್ಟು, ದೇಸಿ ಸಂಸ್ಕೃತಿಯನ್ನು ಎತ್ತಿಹಿಡಿದ ನಿರ್ಮಲಾ ಸೀತಾರಾಮನ್​..

ಬಜೆಟ್ ಮುಖ್ಯಾಂಶಗಳು:

1. ಬಂಗಾರದ ಮೇಲಿನ ಆಮದು ಸುಂಕ ಶೇ. 10ರಿಂದ 12.5ಕ್ಕೆ ಏರಿಕೆ.
2. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್ ಏರಿಕೆ
3. ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ, ಆಮದಾಗುವ ಪುಸ್ತಕಗಳಿಗೆ ಶೇ, 5 ರಷ್ಟು ತೆರಿಗೆ
4. ಡಿಜಿಟಲ್‌ ಪೇಮೆಂಟ್‌ ಗೆ ಉತ್ತೇಜನ. ಕ್ರೆಡಿಕ್‌ ಕಾರ್ಡ್‌ ಪೇಮೆಂಟ್‌ಗಳ ಮೇಲೆ ಶುಲ್ಕ ಇಲ್ಲ.
5. ಮಧ್ಯಮ ವರ್ಗದವರ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ. 7 ಲಕ್ಷದವರೆಗಿನ ಗೃಹ ಸಾಲಕ್ಕೆ 15 ವರ್ಷ ತೆರಿಗೆ ವಿನಾಯಿತಿ.

ಗ್ರಾಮೀಣ ಕುಟುಂಬಗಳಿಗೆ ಸೌಲಭ್ಯ, ಮೆಟ್ರೋ ಯೋಜನೆ, ರಸ್ತೆಗಳ ಅಭಿವೃದ್ಧಿ, ಉಜ್ವಲ, ಮುದ್ರಾ ಯೋಜನೆ, ಉಡಾನ್ ಯೋಜನೆ, ೫ ಟ್ರಿಲಿಯನ್ ಆರ್ಥಿಕತೆ ಯೋಜನೆ, ಎಲೆಕ್ಟ್ರಾನಿಕ್ ವಾಹನಗಳಿಗೆ ಅನುದಾನ, ಉದಯ್‌ ಯೋಜನೆ, ಕರ್ಮಯೋಗಿ ಮಾನ್‌ ಸಮ್ಮಾನ್ ಯೋಜನೆ, ರೆಲ್ವೆ ರಾಷ್ಟ್ರೀಯ ಹೆದ್ದಾರಿಗೆ ಅನುದಾನ, ಗಾಂವ್‌, ಕಿಸಾನ್‌ ಗರೀಬ್, ಸಣ್ಣ ಉದ್ಯೋಗಿಗಳಿಗೆ ಸಾಲ, ಸ್ಪೇಸ್‌ ಇಂಡಿಯಾ ಲಿಮಿಟೆಡ್‌, ಗ್ರಾಮೀಣ ಕುಟುಂಬಗಳಿಗೆ ಸೌಲಭ್ಯ, ಸರ್ವಋತು ಸಾರಿಗೆ ಸೌಲಭ್ಯ, ಸಾಂಪ್ರದಾಯಿಕ ಉದ್ಯಮಕ್ಕೆ ಉತ್ತೇಜನ, ಶೂನ್ಯ ಬಂಡವಾಳ ಕೃಷಿ, ಆವಾಸ್‌ ಯೋಜನೆಗೆ ಒತ್ತು, ಜಲ ಜೀವನ ಮಿಷನ್‌ ಯೋಜನೆ, ಜಲ ಶಕ್ತಿ ಸಚಿವಾಲಯ ಸ್ಥಾಪನೆ.

Also read: ಬಿಗ್ ಬ್ರೆಕಿಂಗ್; ಕನ್ನಡಿಗರ ಹೋರಾಟಕ್ಕೆ ಕಡೆಗೂ ಫಲ, ಇನ್ಮುಂದೆ ಕನ್ನಡದಲ್ಲೂ ಬ್ಯಾಕಿಂಗ್ ಪರೀಕ್ಷೆ ಬರೆಯಲು ಅನುಮತಿ..

ವಿಶ್ವಮಾನ್ಯತೆ ವಿದ್ಯಾಸಂಸ್ಥೆಗಳು, ಗ್ಯಾನ್ ಯೋಜನೆ, ಗಾಂಧೀಪಿಡಿಯಾ ಅಭಿವೃದ್ಧಿ. ಕ್ರೀಡಾ ಶಿಕ್ಷಣ ಪ್ರಾಧಿಕಾರ, ಸ್ಟ್ಯಾಂಡ್ ಅಪ್, ಸ್ಟಾರ್ಟ್ಅಪ್ ಯೋಜನೆ, ಚಿನ್ನ, ಪೆಟ್ರೋಲ್
ತುಟ್ಟಿ, ಜಿಎಸ್ಟಿ ನೀತಿ ಸಡಿಲಿಕೆ, ಪ್ಯಾನ್‌ ಕಡ್ಡಾಯವಲ್ಲ, 100 ಲಕ್ಷ ಕೋಟಿ ಅನುದಾನ, ನಾರಿ ತು ನಾರಾಯಣಿ ಯೋಜನೆ, ಹಿರಿಯರಿಗೆ ಪಿಂಚಣಿ, ಎಲ್ ಇಡಿ ಬಳಕೆ ಉತ್ತೇಜನ ಬಡ್ಡಿ ವಿನಾಯಿತಿಯ ಸಾಲ, ಎನ್ಪಿಎ, ತೆರಿಗೆದಾರರಿಗೆ ಬಂಪರ್, ಎಲೆಕ್ಟ್ರಿಕ್ ವಾಹನಗಳ ಜಿಎಸ್ಟಿ ಇಳಿಕೆ, 7 ಲಕ್ಷ ಸಹಾಯಧನ, ಪ್ಯಾನ್‌ ಕಡ್ಡಾಯವಲ್ಲ, ಜಿಎಸ್ಟಿ ನೀತಿ ಸಡಿಲಿಕೆ, ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ, ಚಿನ್ನ, ಪೆಟ್ರೋಲ್ ತುಟ್ಟಿ.