ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವ ಭಯದಲ್ಲಿ ಪ್ರವಾಹಕ್ಕೆ ಸೆಡ್ಡು ಹೊಡೆದು 2.5 ಕಿಮೀ ಈಜಿ, ಬೆಳ್ಳಿ ಪದಕ ಗೆದ್ದ ಬೆಳಗಾವಿಯ ಬಾಕ್ಸರ್!

0
204

ಪ್ರವಾಹದಿಂದ ಜನರು ತಮ್ಮ ನೆಲೆಯನ್ನು ಕಳೆದುಕೊಂಡರೆ ಇನ್ನೂ ಯುವಕರಂತು ಹಲವು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇರುವ ಸ್ಥಳವೆಲ್ಲ ನೀರಲ್ಲಿ ಮುಳುಗಿ ರಸ್ತೆಯಾವುದು, ನದಿ ಯಾವುದು ಎನ್ನುವುದು ತಿಳಿಯದಾಗಿದೆ. ಇಂತಹ ದೊಡ್ಡ ಪ್ರವಾಹದಲ್ಲಿ ಸಂಪೂರ್ಣ ಮುಳುಗಿದ ಬೆಳಗಾವಿಯ ಚಿಕ್ಕ ಹಳ್ಳಿಯ ಯುವಕ ಪ್ರವಾಹವನ್ನು ಮೆಟ್ಟಿ ಸಾಧನೆ ಮಾಡಿದ್ದಾನೆ. ಸ್ವಂತ ಊರು ನೀರಲ್ಲಿ ಮುಳುಗಿದ್ದರು 2.5 km ಪ್ರವಾಹದಲ್ಲಿ ಈಜಿ ಬೆಂಗಳೂರಿಗೆ ಬಂದು ಬೆಳ್ಳಿ ಗೆದ್ದು, ತನ್ನ ಛಲವನ್ನು ತೋರಿಸಿದ್ದಾನೆ.

Also read: ಪ್ರವಾಹದಿಂದ ಪಾರು ಮಾಡಿ ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ವಿದಾಯ ಹೇಳಿದ ಸಂತ್ರಸ್ತರು.!

ಹೌದು ಛಲಯೊಂದಿದ್ದರೆ ಯಾವ ಪ್ರವಾಹ, ಕಷ್ಟ ಯಾವುದು ಸಾಟಿಯಲ್ಲ ಎನ್ನುವುದಕ್ಕೆ ಈ ಯುವಕ ಸಾಕ್ಷಿಯಾಗಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಮಣ್ಣೂರು ಗ್ರಾಮದ 19 ವರ್ಷದ ಯುವಕ ನಿಶಾನ್ ಗೆ ಮೊದಲ ಬಾರಿಗೆ ನ್ಯಾಷನಲ್ ಲೆವೆಲಿನಲ್ಲಿ ಬಾಕ್ಸಿಂಗ್ ಮಾಡುವ ಅವಕಾಶ ಸಿಕ್ಕಿತ್ತು, ಇದೆ ಸಮಯಕ್ಕೆ ಇಡಿ ಬೆಳಗಾಂ ಪ್ರವಾಹದಲ್ಲಿ ಮುಳುಗಿ ಬೆಂಗಳೂರಿಗೆ ಬರುವುದು ಹೇಗೆ ಎನ್ನುವ ಚಿಂತೆ ಮೂಡಿತು, ಅವನ ಊರಿಂದ ಬೆಳಗಾಂ ರೈಲ್ವೆ ನಿಲ್ದಾಣಕ್ಕೆ 3 km ದೂರವಿತ್ತು, ಈ ಸಮಯದಲ್ಲಿ ಇವನಿಗೆ ಒಂದೇ ದಾರಿ ಎಂದರೆ ಈಜಿ ಬೆಳಗಾಂ ಸೇರುವುದು. ಇದು ಸಣ್ಣ ಕೆಲಸವಲ್ಲ ಪ್ರವಾಹದಲ್ಲಿ 2 km ಈಜುವುದು ಸುಲಭದ ಮಾತಲ್ಲ ಎಂದು ಹಲವು ಹೇಳಿದರು,

ರೈತನ ಮಗನಾಗಿರುವ ನಿಶಾನ್ ಕಡು ಬಡತನದಲ್ಲೇ ಬೆಳೆದ ಪ್ರತಿಭಾವಂತ. ಯುವಕ. ದೈರ್ಯ ಕಳೆದುಕೊಳ್ಳದೆ ಇಷ್ಟು ವರ್ಷ ಅಭ್ಯಾಸ ಮಾಡಿದ್ದು, ಮೊದಲ ಬಾರಿಗೆ ನ್ಯಾಷನಲ್ ಲೆವೆಲಿನಲ್ಲಿ ಬಾಕ್ಸಿಂಗ್ ಮಾಡುವ ಅವಕಾಶವನ್ನು ಕಳೆದುಕೊಂಡರೆ ಹೇಗೆ ಎನ್ನುವ ಪ್ರಶ್ನೆ ಮೂಡಿ. ಒಂದು ಕ್ಷಣವೂ ಹಿಂದು ಮುಂದು ನೋಡದೆ ನಿಶಾನ್ ಲಗ್ಗೆಜ್ ಸಮೇತ ಪ್ರವಾಹದ ನೀರಿನಲ್ಲೇ ಈಜಿಕೊಂಡು ಬೆಳಗಾವಿ ಸೇರಲು ನಿರ್ಧಾರ ಮಾಡಿದ್ದರು. ನಿಶಾನ್ ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕೆಂದು ಹಠವನ್ನು ನೋಡಿದ ಅವರ ತಂದೆ. ಮನೋಹರ್ ಮಗನ ಆಸೆಗೆ ತಣ್ಣಿರೆರೆಚಲು ಬಯಸದೆ ಸರಿ ಹೋಗೆಂದು ಹುರಿದುಂಬಿಸಿದರು. ಬಾಕ್ಸಿಂಗ್ ಕಿಟ್ ಅನ್ನು ಬಿಗಿಯಾಗಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ತಂದೆ, ಮಗ 45 ನಿಮಿಷ, 2.5 ಕಿಮೀ ಈಜಿ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ತಲುಪಿದರು, 3.45ಕ್ಕೆ ತಂದೆಯೊಂದಿಗೆ ಈಜಲು ಆರಂಭಿಸಿದ್ದ ನಿಶಾನ್ 4.3ಕ್ಕೆ ರಸ್ತೆಗೆ ತಲುಪಿ. ಅಂದು ರಾತ್ರಿ ಇತರ 6 ಜನರೊಂದಿಗೆ ಬೆಂಗಳೂರಿಗೆ ಹೋಗಲು ರೈಲನ್ನೇರಿದ್ದರು. ಕೊನೆಗೂ ಬೆಂಗಳೂರು ತಲುಪಿದ ನಿಶಾನ್ ಭಾನುವಾರ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಾಕ್ಸಿಂಗ್ ರಿಂಗ್‌ಗೆ ಇಳಿದಿದ್ದಾನೆ. ಒಂದೆಡೆ ನಿದ್ದೆ ಇಲ್ಲ, ಪ್ರವಾಹದಲ್ಲಿ ಈಜಿದ ಆಯಾಸ, ಪ್ರಯಾಣ ಎಲ್ಲರದ ನಡುವೆ ನಿಶಾನ್, ತಾನು ಕಷ್ಟ ಪಟ್ಟ ದಾರಿಯನ್ನು ನೆನಸಿಕೊಂಡು ಏನಾದರು ಮಾಡಿ ಸಾಧನೆ ಮಾಡಲೇಬೇಕು ಎಂದ ಛಲಗಾರ ಬಾಕ್ಸರ್ ನಿಶಾನ್ ಲೈಟ್ ಪ್ಲೈ ವೇಟ್ ವಿಭಾಗದಲ್ಲಿ ಫೈನಲ್ ತಲುಪಿ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Also read: ಪ್ರವಾಹ ಸಂತ್ರಸ್ತರು ಯಾವುದೇ ದಾಖಲೆಗಳಿಲ್ಲದೆ ಜೀವ ವಿಮೆ, ವಾಹನ ವಿಮೆ ಮತ್ತು ಗೃಹ ವಿಮೆಯ ಕ್ಲೇಮ್ ಮಾಡಿಕೊಳ್ಳಬಹುದು ಹೇಗೆ ಅಂತ ಇಲ್ಲಿದೆ ನೋಡಿ..

ಈ ಕುರಿತು ಮಾತನಾಡಿದ ಅವರು ನಾನು ಈ ಸ್ಪರ್ಧೆಗೆಂದು ಬಹಳ ದಿನಗಳಿಂದ ಕಾದಿದ್ದೆ. ಆದರೆ ಕಲ್ಪನೆಗೂ ಬರದ ಸಂಕಷ್ಟವೊಂದು ಎದುರಾಗಿಬಿಟ್ಟಿತು. ಪ್ರವಾಹಕ್ಕೆ ಸಿಲುಕಿದ್ದ ನಮ್ಮೂರಿಗೆ ವಾಹನಗಳು ಬರಲು ಅವಕಾಶವೇ ಇರಲಿಲ್ಲ. ಹೀಗಾಗಿ ಈಜುವುದು ಅನಿವಾರ್ಯವಾಗಿತ್ತು. ದುರಾದೃಷ್ಟದಿಂದ ನಾನು ಈ ಬಾರಿ ನಾನು ಚಿನ್ನದ ಪದಕವನ್ನು ಮಿಸ್ ಮಾಡಿಕೊಂಡೆ. ಮುಂದಿವ ವರ್ಷ ನಿಜಕ್ಕೂ ಬಂಗಾರವನ್ನು ಗೆದ್ದೇ ಗೆಲ್ಲುತ್ತೇನೆ ಎಂದವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.