ನಿತ್ಯ ಭವಿಷ್ಯ 14 ಮಾರ್ಚ್ 2017

0
614

ಮಾರ್ಚ್ 14, 2017 (ಮಂಗಳವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ವಸಂತ  ಋತು, ಕುಂಭ ಮಾಸ,
ಕೃಷ್ಣ ಪಕ್ಷ, ಬಿದಿಗೆ ತಿಥಿ,
ಹಸ್ತ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 3:26 pm- 04:53 pm
ಗುಳಿಕಕಾಲ: ಮಧ್ಯಾಹ್ನ 12:32 pm – 01:59 pm
ಯಮಗಂಡಕಾಲ: ಬೆಳಿಗ್ಗೆ 09:37 am- 11:05 am

ಮೇಷ.

01-Mesha

ಸಾಮಾಜಿಕವಾಗಿ ಗುರು, ಧಾರ್ಮಿಕ ವರಿಷ್ಠರ ಭೇಟಿಯ ಅವಕಾಶವಿರುತ್ತದೆ. ಆರ್ಥಿಕವಾಗಿ ಸಮಸ್ಯೆಗಳ ಪರಿಹಾರಾರ್ಥ ಯಶಸ್ವೀ ಕಾರ್ಯತಂತ್ರಗಳ ರೂಪಣೆ ಸಫ‌ಲತೆ ತಂದುಕೊಡಲಿದೆ. ವಾಹನ, ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕ ರೂಪದಲ್ಲಿ ತೋರಿಬಂದಾವು. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನಗೊಳ್ಳಲಿರುವ ಸೂಚನೆ ಕಂಡುಬರುತ್ತದೆ.ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದು ನೋಡುವ ನೀಡಿ ಉತ್ತಮ. ಸಾಂಸಾರಿಕವಾಗಿ ಚಿಕ್ಕ – ಪುಟ್ಟ ಸಮಸ್ಯೆಗಳಿದ್ದರೂ ಹೊಂದಾಣಿಕೆಯಿಂದ ಮುಂದುವರಿದಲ್ಲಿ ಉತ್ತಮ.

ವೃಷಭ
02-Vrishabha;
ಕುಟುಂಬ ವರ್ಗದ ಶುಭಕಾರ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಸಂತಸ ತರಲಿವೆ. ಬಂಧು, ಕುಟುಂಬಿಕರ ಮಿಲನದ ಅವಕಾಶದಿಂದ ಇಚ್ಛಿತ ಕೆಲಸ ಕಾರ್ಯಗಳು ನಡೆಯಲಿವೆ. ವಾಣಿಜ್ಯ ವಿತ್ತ ಖಾತೆಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಪ್ರಗತಿ ತೋರಿಬರುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯವಾದೀತು. ಕೀಳರಿಮೆ ದೌರ್ಬಲ್ಯಗಳಿಂದ ಚೇತರಿಸಿಕೊಳ್ಳುವ ಶುಭ ಸೂಚನೆ ಕಂಡೀತು. ವಾಹನ, ಭೂ ಖರೀದಿ, ಮನೆ ನಿರ್ಮಾಣ ಕಾರ್ಯ ಹಾಗೂ ಶುಭಮಂಗಳ ಕಾರ್ಯಗಳಿವೆ.

ಮಿಥುನ
03-Mithuna

ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿಬರುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಒಳವರ್ಗದ ಸಹೋದ್ಯೋಗಿಗಳಿಂದ ಇಷ್ಟ ವಿರೋಧಿ ವರ್ತನೆಯಿಂದ ಮಾನಸಿಕವಾಗಿ ಉದ್ವೇಗ ತಂದೀತು. ಸಮಾಧಾನವಿರಲಿ. ಧನಾರ್ಜನೆಯಲ್ಲಿ ಪ್ರಗತಿ ಇರುತ್ತದೆ. ವಿವಿಧ ಮೂಲಗಳಿಂದ ಕೂಡಾ ಧನ ಸಂಗ್ರಹಕ್ಕೆ ಸಾಧ್ಯತೆ ಇದೆ. ಆದರೂ ಹಿಡಿತವಿರಲಿ.

ಕಟಕ
04-Kataka

ಧನಾರ್ಜನೆಯ ವಿಫ‌ುಲ ಅವಕಾಶಗಳು ಸದ್ಯದಲ್ಲೇ ತೋರಿಬರಲಿವೆ. ಪೂರ್ವ ಯೋಜಿತ ಕೆಲಸ ಕಾರ್ಯಗಳ ಮುನ್ನಡೆಗಾಗಿ ನಡೆಯುವ ಪ್ರಯತ್ನ ಗಳು ಫ‌ಲ ನೀಡಲಿವೆ. ಬಂಧು-ಮಿತ್ರರ ಸಹಕಾರ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾದೀತು. ಸಾಮಾಜಿಕ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ಹೋಗ ಲಿವೆ. ಗೃಹಕೃತ್ಯದಲ್ಲಿ ಅಡಚಣೆಗಳು ಮನಸ್ಸಿಗೆ ನೆಮ್ಮದಿ ಕಡಿಮೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಕಠಿಣ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ.

ಸಿಂಹ
05-Simha

ಕೆಲಸ ಕಾರ್ಯಗಳ ಚಿಂತನೆ ಕಾರ್ಯರೂಪಕ್ಕೆ ಇಳಿಯಲಿವೆ. ಧನಾರ್ಜ ನೆಯಲ್ಲಿ ಪ್ರಗತಿ, ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಓಡಾಟ ತಂದೀತು. ಧಾರ್ಮಿಕ ಗುರುಗಳ ಭೇಟಿಯ ಅಪೂರ್ವ ಅವಕಾಶಗಳಿಂದ ಮಾನಸಿಕ ನೆಮ್ಮದಿ ತಂದೀತು. ದೈವಾನುಗ್ರಹ ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಮೇಲೆ ಹತೋಟಿ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಸಹವಾಸ ದೋಷದಿಂದ ಅನಗತ್ಯ ಅಪವಾದವಿದೆ. ವಾರಾಂತ್ಯ ಅತಿಥಿಗಳ ಆಗಮನವಿದೆ.

ಕನ್ಯಾ
06-Kanya

ಶುಭಮಂಗಲ ಕಾರ್ಯಗಳಿಗೆ ಪ್ರಯಾಣ ಅನಿವಾರ್ಯವಾದೀತು. ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭ್ಯಾಸ ಕಂಡುಬಂದೀತು. ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕು ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅತೀ ಅಗತ್ಯವಿರುತ್ತದೆ. ಪ್ರತಿಷ್ಠೆ ಗೌರವದ ಕಾರಣವಾಗಿ ಕೆಲವೊಂದು ಖರ್ಚುವೆಚ್ಚಗಳು ಅನಿವಾರ್ಯ ತಂದಾವು. ಸಾಂಸಾರಿಕವಾಗಿ ಸಮಾಧಾನ ತಂದೀತು.

ತುಲಾ
07-Tula

ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಸಫ‌ಲತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಿರೋಧಗಳಿಂದ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಆರ್ಥಿಕವಾಗಿ ಸಾಲ ಮರುಪಾವತಿಯ ಬಗ್ಗೆ ಒತ್ತಡ ತಂದೀತು. ಸಾಂಸಾರಿಕವಾಗಿ ವಿಶ್ರಾಂತಿ ಸುಖಾಪೇಕ್ಷೆಯಾದೀತು. ವ್ಯಾಪಾರ, ವ್ಯವಹಾರದಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ. ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ ಜಾಗ್ರತೆ ಇರಲಿ.

ವೃಶ್ಚಿಕ
08-Vrishika

ವೃತ್ತಿರಂಗದ ಇತರರೊಂದಿಗೆ ಹೊಂದಾಣಿಕೆ ಅಗತ್ಯವೆನಿಸಲಿದೆ.ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ದೈವಾನುಗ್ರಹ ಒದಗಿ ಬರಲಿದೆ. ದೇಹಾರೋಗ್ಯದಲ್ಲಿ ಕೂಡ ಸುಧಾರಣೆ ಸಮಾಧಾನ ತಂದೀತು. ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಗೆ ಬರಲಿದೆ. ಸದುಪಯೋಗಿಸಿಕೊಳ್ಳಿ ಧನಾರ್ಜನೆಯ ವಿವಿಧ ರೀತಿಯ ಸಂಗ್ರಹ ಯತ್ನಿದಲ್ಲಿ ಸಫ‌ಲತೆ ತಂದೀತು. ಶತ್ರು ಭಯ ನಿವಾರಣೆ, ಉದ್ದೇಶಿತ ಕಾರ್ಯಸಿದ್ಧಿ . ಗೃಹ, ಭೂ, ವಾಹನಾದಿಗಳಿಗಾಗಿ ಧನ ವ್ಯಯವಾಗಲಿದೆ. ವಾರಾಂತ್ಯದಲ್ಲಿ ಸಿಹಿ ವಾರ್ತೆ.

ಧನು
09-Dhanussu

ತುಸು ನಿಧಾನಗತಿಯಲ್ಲಿ ಸಾಗಲಿರುವ ಕಾರ್ಯ ಯೋಜನೆ ಕಿರಿಕಿರಿ ಎನಿಸಿದರೂ ಸಮಾಧಾನ ತರಲಿದೆ. ಗೃಹದಲ್ಲಿ ತುಸು ನೆಮ್ಮದಿ. ಶ್ರೇಯಸ್ಸು ಉಂಟಾಗುವುದು. ಕಾರ್ಯಾಂತರದಿಂದ ಮನೆಯಲ್ಲಿ ದೂರ ಉಳಿಯ ಬೇಕಾದ ಪರಿಸ್ಥಿತಿ ತೋರಿಬಂದರೂ ನಿರೀಕ್ಷಿತ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ವಾರಾಂತ್ಯದಲ್ಲಿ ಸಿಹಿಸುದ್ದಿ ನಿಮಗಿರುತ್ತದೆ.

ಮಕರ
10-Makara

ಅಪೂರ್ವ ಅವಕಾಶವೊಂದು ಎದುರಾಗಲಿರುವ ಸೂಚನೆ ಕೊಡಲಿದೆ. ವಿಶಿಷ್ಟ ಕಾರ್ಯವೈಖರಿಯಿಂದ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗ ಲಿದ್ದೀರಿ. ಸಾಂಸಾರಿಕವಾಗಿ ಸಮಸ್ಯೆಯೊಂದರ ಮೇಲೆ ಹತೋಟಿ ಸಾಧಿಸುವ ಅವಕಾಶ ಒದಗಿ ಬಂದೀತು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿಮ್ಮ ಕಾರ್ಯಸಾಧನೆ ಗುರು ತಿಸಲ್ಪಡುತ್ತದೆ. ಧಾರ್ಮಿಕ ಕಾರ್ಯಸಕ್ತಿ ತೋರಿಬಂದು ಮಾನಸಿಕ ನೆಮ್ಮದಿ, ಶಾಂತಿ, ಸಮಾಧಾನ ತಂದುಕೊಡಲಿದೆ. ನಿರುದ್ಯೋಗಿಗಳು ಉಸಿರು ಬಿಡುವಂತಾದೀತು. ಮುಂದುವರಿಯಿರಿ.

ಕುಂಭ
11-Kumbha

ಅನ್ಯ ಕಾರ್ಯಗಳ ಒತ್ತಡದಿಂದ ಮನೋ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ. ಮನಸ್ತಾಪದ ಪ್ರಸಂಗ ತೋರಿಬಂದೀತು. ಸಾಮಾಜಿಕವಾಗಿ ಮುಂದಾಳತ್ವ ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಆರೋಗ್ಯ ಭಯ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರಗಳು, ವಿವಾದಗಳು ಕಂಡುಬರಲಿವೆ. ಹೊಂದಾಣಿ ಕೆಗಾಗಿ ಪ್ರಯತ್ನ ಅಗತ್ಯವಿದೆ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ವಿದೇಶ ಸಂಚಾರದ ಸಾಧ್ಯತೆ ಇದ್ದು ಕಾರ್ಯ ಸಾಧನೆಯಾಗಲಿವೆ.

ಮೀನ
12-Meena

ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯೊಂದರ ಅನುಭವವಾಗಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಬಿಗು ವಾತಾವರಣ ಅಸಮಾಧಾನಕ್ಕೆಕಾರಣವಾದೀತು. ಕೌಟುಂಬಿಕ ವಿವಾದ, ಕಲಹಗಳು ಹಂತ ಹಂತವಾಗಿ ಉಪಶಮನವಾಗಲಿವೆ. ಹಿತಶತ್ರುಗಳಿಂದ ವಿರೋಧಿಗಳಿಗೆ ಅಮಿಷ ಪ್ರಲೋಭನೆಯಿಂದ ರಾಜಕೀಯ ವರ್ಗದವರಿಗೆ ಆತಂಕ ತಂದೀತು. ಮಕ್ಕಳ ಆರೋಗ್ಯ ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಸಾಂಸಾರಿಕ ನೆಮ್ಮದಿ ಇದ್ದು ವಾರಾಂತ್ಯ ನೆಮ್ಮದಿ ಕಂಡು ಬರುತ್ತದೆ.

ಸುಂದರ್ ರಾಜ್, ದೂ: 9844101293 / 9902345293
Consulting Hours:

1 PM – 9 PM

10 AM -4 PM (Sunday)