ನಾನೇ ಪರಮಶಿವ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಯಾವುದೇ ಮೂರ್ಖ ನ್ಯಾಯಾಲಯವೂ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ನಿತ್ಯಾನಂದನ ವಿಡಿಯೋ ವೈರಲ್.!

0
245

ದಕ್ಷಿಣ ಅಮೇರಿಕಾದಲ್ಲಿ ಸ್ವಂತ ಸಾಮ್ರಾಜ್ಯ ಸ್ಥಾಪಿಸುವ ಕುರಿತು ಸುದ್ದಿ ಹರಡಿಸಿದ ಅತ್ಯಾಚಾರಿ ಆರೋಪಿ ನಿತ್ಯಾನಂದ ಸ್ವಾಮಿ ಮತ್ತೊಂದು ವೀಡಿಯೋ ಹರಿಬಿಟಿದ್ದು, ”ನನ್ನನ್ನು ಯಾರೂ ಟಚ್‌ ಮಾಡಲು ಸಾಧ್ಯವಿಲ್ಲ. ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ.ಸತ್ಯವೇನೆಂದು ನಾನು ಜಗತ್ತಿಗೆ ತೋರಿಸುತ್ತೇನೆ. ನಾನು ಪರಮಶಿವ” ಎಂದು ನಿತ್ಯಾನಂದ. ಎನ್ನುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದು ದೇಶಬಿಟ್ಟು ಓಡಿ ಹೋಗಿದ್ದಾನೆ.

ಹೌದು ದಿನಕ್ಕೊಂದು ಸುದ್ದಿಯಲ್ಲಿರುವ ಬಿಡದಿಯ ನಿತ್ಯಾನಂದ ಅಜ್ಞಾತ ಸ್ಥಳದಿಂದ ನಿತ್ಯಾನಂದ ವಿಡಿಯೋ ಮಾಡಿದ್ದು, ‘ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಯಾವ ನ್ಯಾಯಾಲಯ ಕೂಡ ನನ್ನನ್ನು ದಂಡಿಸಲು ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸತ್ಯವೇನೆಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ತೋರಿಸುತ್ತೇನೆ. ಈಗ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ನಿಜವನ್ನು ಹೇಳುತ್ತೇನೆ. ನಾನು ಪರಮಶಿವ- ಅರ್ಥವಾಯಿತೇ? ಇಲ್ಲಿರುವ ಮೂಲಕ ನೀವು ನಿಮ್ಮ ಸಮಗ್ರತೆ ಹಾಗೂ ನಿಷ್ಠೆಯನ್ನು ಪ್ರದರ್ಶಿಸಿದ್ದೀರಿ. ನಿಮ್ಮೆಲ್ಲರಿಗೂ ಇನ್ನು ಸಾವು ಸಂಭವಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತನ್ನ ಅನುಯಾಯಿಗಳಿಗೆ ಸಂದೇಶ ತಿಳಿಸಿದ್ದಾನೆ.

Also read: ದೇಶಬಿಟ್ಟು ತಲೆಮರೆಸಿಕೊಂಡ ನಿತ್ಯಾನಂದ; ಅಮೆರಿಕದಲ್ಲಿ ದ್ವೀಪ ಖರೀದಿಸಿ ಹೊಸ ದೇಶವನ್ನೇ ಕಟ್ಟಿ ಪೌರತ್ವ ಪಡೆಯುವುದು ಸದವಕಾಶ ನೀಡಿದ್ದಾನೆ.!

ನಾನೇ ಪರಮಶಿವ

‘ಸತ್ಯ ಮತ್ತು ವಾಸ್ತವವನ್ನು ನಿಮಗೆ ತಿಳಿಸುವ ಮೂಲಕ ನಾನು ನನ್ನ ಶಕ್ತಿಯನ್ನು ಬಹಿರಂಗಪಡಿಸಲಿದ್ದೇನೆ. ಈಗ ನನ್ನನ್ನು ಯಾರೂ ಮುಟ್ಟಲಾರರು. ನಾನು ನಿಮಗೆ ಸತ್ಯದರ್ಶನ ಮಾಡಿಸುತ್ತೇನೆ- ನಾನು ಪರಮಶಿವ. ಅರ್ಥವಾಯಿತೇ? ಸತ್ಯ ಹೇಳಿದ ಕಾರಣಕ್ಕೆ ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲ. ನಾನು ಪರಮಶಿವ’ ಎಂದು ಕಂದು ಬಣ್ಣದ ಟರ್ಬನ್ ಮತ್ತು ನಿಲುವಂಗಿ ಧರಿಸಿದ್ದ ನಿತ್ಯಾನಂದ ತನ್ನ ಶಿಷ್ಯರಿಗೆ ಹೇಳಿದ್ದಾನೆ.

ನಿತ್ಯಾನಂದನ ವೀಸಾ ಅವಧಿ ಮುಕ್ತಾಯವಾಗಿದ್ದು, ನವೀಕರಿಸುವ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದರ ನಡುವೆಯೂ ನಿತ್ಯಾನಂದ ಈಕ್ವೇಡಾರ್ ನಲ್ಲಿ ಅವಿತುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅಲ್ಲಿಯೇ ದೇಶವನ್ನೂ ನಿರ್ಮಿಸಲು ಸಿದ್ಧತೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಅದರಂತೆ ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿಕೊಂಡಿದ್ದ.

Also read: ಅತ್ಯಾಚಾರ ಆರೋಪ ಹೊತ್ತಿರುವ ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ; ಪಾಸ್‌ಪೋರ್ಟ್ ಇಲ್ಲದೆ ವಿದೇಶಕ್ಕೆ ಮಾಯವಾಗಿ ಹೋದ್ರಾ??

ಈಕ್ವೆಡಾರ್ ರಾಯಭಾರ ಹೇಳಿರುವ ಪ್ರಕಾರ ನಿತ್ಯಾನಂದನಿಗೆ ಈಕ್ವೆಡಾರ್ ಆಶ್ರಯ ಕಲ್ಪಿಸಿದೆ ಏನ್ನುವುದು ಸುಳ್ಳು, ಈಕ್ವೆಡಾರ್‌ ಅಥವಾ ಅದರ ಸುತ್ತಮುತ್ತ ಎಲ್ಲಿಯೂ ಜಮೀನು ಅಥವಾ ದ್ವೀಪ ಖರೀದಿಗೆ ಈಕ್ವೆಡಾರ್ ಸರ್ಕಾರ ಸಹಾಯ ಮಾಡಿದೆ ಎಂಬುದು ಸುಳ್ಳು. ಆತನಿಗೆ ಆಶ್ರಯ ನೀಡಲು ನಿರಾಕರಿಸಲಾಗಿತ್ತು. ಆತ ಹೈಟಿಗೆ ತೆರಳಿದ್ದಾನೆ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಹೇಳಿಕೆ ನೀಡಿದೆ.