ಈ ಹೊಸ ನೋಟು ಪ್ರಿಂಟ್ ವೆಚ್ಚಾ ಎಷ್ಟು ಗೊತ್ತಾ..?

0
1882

ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, 500, 1000 ನೋಟು ಚಲಾವಣೆಯನ್ನು ಬಂದ್ ಮಾಡಿರುವುದರಿಂದ ಅಕ್ರಮ ಹಣವನ್ನು ಹೊಂದಿರುವವರಿಗೆ ತಲೆನೋವು ಉಂಟಾಗಲಿದ್ದು, ಇದರಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಕೂಡ.

ಕಪ್ಪು ಹಣದ ಸಂಹಾರದ ಬಗ್ಗೆ ಭಾಷೆ ಕೊಟ್ಟಿದ್ದ ಮೋದಿ, ನುಡಿದಂತೆ ನೆಡೆದಿದ್ದರೆ ಆದ್ರೆ ಇದು ಎಲ್ಲರ ಮನಸ್ಸಿನಲ್ಲಿ ಇರುವ ಯಕ್ಷ ಪ್ರೆಶ್ನೆಯಾಗಿದೆ, ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹಳೆ ನೋಟುಗಳನ್ನು ವಾಪಸ್ ಪಡೆದು ಹೊಸ ನೋಟು ಮಾರುಕಟ್ಟೆಗೆ ಬರುವಾಗಲೆಲ್ಲಾ ಹುಟ್ಟಿಕೊಳ್ಳುವ ಕುತೂಹಲಕಾರಿ ಪ್ರಶ್ನೆ ಎಂದರೆ ಒಂದು ನೋಟು ಪ್ರಿಂಟ್ ಮಾಡೋದಕ್ಕೆ ಎಷ್ಟು ಖರ್ಚು ಆಗುತ್ತೆ ಅನ್ನೋದು. ಅದರ ಲೆಕ್ಕಾಚಾರ ಹೀಗಿದೆ.

ಆಶ್ಚರ್ಯಕರ ವಿಚಾರ ಎಂದರೆ 2014-15ರ ಅವಧಿಯಲ್ಲಿ 500, 1000 ರೂ. ನೋಟುಗಳ ಮುದ್ರಣಕ್ಕೆ ಆಗಿರುವ ಒಟ್ಟು ವೆಚ್ಚ- 2,770 ಕೋಟಿ ರೂಪಾಯಿ. ಜೊತೆಗೆ ಸದ್ಯ 5 ರೂಪಾಯಿ ನೋಟು ಮುದ್ರಣವಾಗುತ್ತಿಲ್ಲ ಕೂಡ, ಮತ್ತು 5 ರೂ. ಮುಖ ಬೆಲೆಯ ಒಂದು ನೋಟು ಪ್ರಿಂಟ್ ಮಾಡೋಕೆ 0.48 ಪೈಸೆ ವೆಚ್ಚವಾಗುತ್ತದೆ. ಅಂದ್ರೆ ಈ ಹಿಂದೆ ಮುದ್ರಣವಾಗಿದ್ದ 5 ರೂಪಾಯಿ ನೋಟನ್ನು ಆರ್‍ಬಿಐ ಹಣದ ಮಾರುಕಟ್ಟೆಯಿಂದ ಹಿಂಪಡೆದಿಲ್ಲ. ಅದರ ಬದಲಿಗೆ ಅದೇ ಮುಖಬೆಲೆಯ ನಾಣ್ಯವನ್ನು ಟಂಕಿಸಲಾಗುತ್ತಿದೆ. ಹಾಗೆ 10 ರೂ ನೋಟಿಗೆ 0.96 ಪೈಸೆ ಆಗುತ್ತದೆ. 20 ರೂ ನೋಟಿಗೆ 1.5 ರೂ., 50 ರೂ ನೋಟಿಗೆ 1.81 ರೂ., 100 ರೂ ನೋಟಿಗೆ 1.79 ರೂ., 500 ರೂ ನೋಟಿಗೆ 2.5 ರೂ. ಹಾಗೂ 1000 ರೂ ನೋಟಿಗೆ 3.17 ರೂ. ಮುದ್ರಣಾ ವೆಚ್ಚ ತಗುಲುತ್ತದೆ.

ಭ್ರಷ್ಟ ಜನರು ಇಂದು ಕಣ್ಣೀರಿಡುತ್ತಿದ್ದು, ಭ್ರಷ್ಟರ ಸುಖಭರಿತ ನಿದ್ರೆಗೆ ಇದೀಗ ಭಂಗಯುಂಟಾಗಿದೆ, ಕಪ್ಪು ಹಣದ ವಿರುದ್ಧ ಯುದ್ಧ ಈಗ ಪ್ರಾರಂಭವಾಗಲಿದ್ದು, ಸರ್ಜಿಕಲ್ ಸ್ಟ್ರೈಕ್ ಮುಂದುವರೆಯಲಿದೆ