ಇನ್ನು ಮುಂದೆ ISI ಮಾರ್ಕ್ ಹೆಲ್ಮೆಟ್ ಹಾಕದಿದ್ದರೆ ಇನ್ಶೂರೆನ್ಸ್ ಕಂಪನಿಯವರು ಹಣ ನೀಡಲ್ವಂತೆ…!!

0
705

ಜನರಿಗೆ ನಿತ್ಯ ಕೇಳುವ ಒಂದು ಸಾಮಾನ್ಯ ಪದ ಎಂದರೆ ಅದು “ಹೆಲ್ಮೆಟ್”. ಸರ್ಕಾರ, ಪೊಲೀಸ್ ಇಲಾಖೆ, ನಟ-ನಟಿಯರು ಮತ್ತು ಎಲ್ಲ ಸೆಲೆಬ್ರಿಟಿಗಳು ಹೆಲ್ಮೆಟ್ ಧರಿಸಿ, ಸೀಟ್ ಬೆಲ್ಟ್ ಹಾಕಿ ಅಂತ ಒತ್ತಿ-ಒತ್ತಿ ಹೇಳಿದರು, ಜನ ತಲೇನೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಸುಪ್ರೀಂಕೋರ್ಟ್ ನ ಈ ಹೊಸ ನಿಯಮದ ನಂತರ ಅವರು ಖಂಡಿತ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಾರೆ.

ಕೆಲ ಬೈಕ್ ಸವಾರರು ಹೆಲ್ಮೆಟ್ ಹಾಕಲ್ಲ, ಇನ್ನು ಸಾಕಷ್ಟು ಜನ ಕಳಪೆ ಗುಣಮಟ್ಟದ ISI ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕುತ್ತಾರೆ. ಆದರೆ ಇನ್ನು ಮುಂದೆ ನೀವು ಹೆಲ್ಮೆಟ್ ಹಾಕದಿದ್ದರೆ ಅಥವಾ ಕಳಪೆ ಗುಣ ಮಟ್ಟದ ISI ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕಿಕೊಂಡರೆ ನಿಮಗೆ ಇನ್ಶೂರೆನ್ಸ್ ಕ್ಲೇಮ್ ಆಗುವುದಿಲ್ಲ ಹೀಗೆಂದು ಖುದ್ದು ಸುಪ್ರೀಂಕೋರ್ಟ್ ನ್ಯಾಯಾಧೀಶರೆ ಹೇಳಿದ್ದಾರೆ.

ಹೌದು, ಇನ್ನು ಮುಂದೆ ಇನ್ಶೂರೆನ್ಸ್ ಖರೀದಿ ಮಾಡಲು ಮತ್ತು ಅಪಘಾತವಾದ ಮೇಲೆ ಇನ್ಶೂರೆನ್ಸ್ ಹಣ ಕ್ಲೇಮ್ ಮಾಡಲು ಅಥವಾ ಪಡೆಯಲು, ನೀವು ISI 4151: 1993 ಮುದ್ರೆಯೇ ಇರುವ ಹೆಲ್ಮೆಟ್ ಹೊಂದಿರಬೇಕು ಮತ್ತು ಅಪಘಾತವಾದಾಗ ನೀವು ಅದೇ ಗುಣ ಮಟ್ಟದ ಹೆಲ್ಮೆಟ್ ಅನ್ನು ಧರಿಸಿರಬೇಕು.

ಇನ್ನು ಹೆಲ್ಮೆಟ್ ನ ಮೇಲೆ, ಹೆಲ್ಮೆಟ್ ತಯಾರಿಕಾ ಕಂಪನಿಯ ಹೆಸರು, ತಯಾರಿಕಾ ದಿನಾಂಕ, ತಯಾರಿಕಾ ವರ್ಷ, ಗಾತ್ರದ ವಿವರ ನಮೂದಾಗಿರಬೇಕು. ಇದರಲ್ಲಿ ನಂಬರ್, ಹೆಸರು ಅಥವಾ ಇನ್ನಾವುದೇ ಅಳಿಸಿರಬಾರದು ಮತ್ತು ಸುಲಭವಾಗಿ ಓದುವಂತಿರಬೇಕು ಎಂದು ಕೋರ್ಟ್ ಆದೇಶಿಸಿದೆ.

ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ವಿಮಾ ಕಂಪೆನಿಯವರ ವಾದ ಸರಿಯಾಗಿದೆ, ISI ಗುಣ ಮಟ್ಟದ ಹೆಲ್ಮೆಟ್ ಧರಿಸದೇ ಅಥವಾ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಅಪಘಾತವಾದಾಗ ಅದರಿಂದ ವ್ಯಕ್ತಿ ಮತ್ತು ವಾಹನ ಇಬ್ಬರಿಗು ಹೆಚ್ಚು ಹಾನಿಯಾಗುತ್ತದೆ, ಅಲ್ಲದೆ ಇದಕ್ಕೆ ಆ ವ್ಯಕ್ತಿಯ ಅಜಾಗರೂಕತೆಯೇ ಕಾರಣವಾಗಿರುತ್ತದೆ.

ಆ ವ್ಯಕ್ತಿಯ ಅಜಾಗರೂಕತೆಯಿಂದ ಕೇವಲ ಆ ವ್ಯಕ್ತಿಗೆ ಮಾತ್ರವಲ್ಲ ವಿಮಾ ಕಂಪೆನಿಯವರಿಗೂ ನಷ್ಟವಾಗುತ್ತದೆ, ಆದರಿಂದ ಇನ್ನು ಮುಂದೆ ISI ಗುಣ ಮಟ್ಟದ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುವ ಚಾಲಕರಿಗೆ ಇನ್ಶೂರೆನ್ಸ್ ಹಣ ಕ್ಲೇಮ್ ಮಾಡುವ ಹಕ್ಕಿರುವುದಿಲ್ಲ ಮತ್ತು ವಿಮಾ ಕಂಪನಿಯವರು ಸಹ ಇಂತಹ ಗ್ರಾಹಕರಿಗೆ ಹಣ ನೀಡುವ ಅವಶ್ಯಕತೆಯಿಲ್ಲ ಎಂದು ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.