ಪ್ರೇಮಿಗಳ ದಿನದಂದು ಇತಿಹಾಸ ಸೃಷ್ಟಿಸಲಿರುವ ವಿದ್ಯಾರ್ಥಿಗಳು; ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ ಎಂದು 10 ಸಾವಿರ ವಿದ್ಯಾರ್ಥಿಗಳು ಪ್ರಮಾಣ..

0
378

ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು ಫೆಬ್ರುವರಿ ತಿಂಗಳು ಅಂದರೆ ಮೊದಲು ನೆನಪಿಗೆ ಬರುವುದು ಪ್ರೇಮಿಗಳ ದಿನ ಈ ದಿನಕ್ಕಾಗಿ ಅದೆಷ್ಟೋ ಯುವಕ ಯುವತಿಯರು ತಮ್ಮ ಪ್ರೇಮವನ್ನು ಹಿಡಿದಿಟ್ಟುಕೊಂಡು ಫೆಬ್ರವರಿ 14 ರಂದು ಪ್ರಸ್ತಾಪ ಮಾಡುತ್ತಾರೆ. ಈ ದಿನ ಯಾರಿಗೆ ಯಾರು ಇಷ್ಟವಾದರೂ ಅವರು ಯಾವುದೇ ಭಯವಿಲ್ಲದೆ prapose ಮಾಡಬಹುದು. ಇದಕ್ಕೆ ಯಾರದು ತಕರಾರು ಇರುವುದಿಲ್ಲ, ಇದೆ ಕಾರಣಕ್ಕೆ ಹಲವು ಲವ್ ಸ್ಟೋರಿಗಳು ಈ ದಿನದಿಂದ ಹುಟ್ಟುತ್ತೇವೆ. ಹಾಗೆಯೇ ಮೊದಲೇ ಲವರ್ಸ್ ಆದವರು ಕೂಡ ಈ ದಿನ ಆಚರಣೆಯಲ್ಲಿ ತೊಡಗುತ್ತಾರೆ. ಮತ್ತು ತಮ್ಮ ಪ್ರೀತಿಯ ಸಂಕೇತವಾಗಿ ಹೆಚ್ಚಿನ ಬೆಲೆಯುಳ್ಳ ಉಡುಗರೆಯನ್ನು ನೀಡುತ್ತಾರೆ. ಇದು ಹಳೆಯ ವಿಷಯವಾದರೆ ಪೋಷಕರ ಒಪ್ಪಿಗೆ ಪಡೆಯದೇ ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ.

ಹೌದು ಬರಿ ಪ್ರೀತಿಯಿಂದ ನಾವಷ್ಟೇ ಸಂತೋಷ್-ದಿಂದ ಇರಬಹುದು ಆದರೆ ತಂದೆ- ತಾಯಿಗಳು ಹೇಗೆ ಮತ್ತು ಎಷ್ಟೊಂದು ನೆಮ್ಮದಿಯಿಂದ ಇರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಲವ್ ಎನ್ನುವ ಮಾಯೆಯಿಂದ ಎಷ್ಟೊಂದು ಕುಟುಂಬಗಳು, ಯುವಕ ಯುವತಿಯರು ನಡು ರಸ್ತೆಯಲ್ಲಿ ಸತ್ತಿದ್ದಾರೆ. ಮತ್ತು ಪತಿನಿತ್ಯವು ಇದಕ್ಕೆ ಹರಯದೆ ಮನಸ್ಸುಗಳು ಸುಸೈಡ್ ಮಾಡಿಕೊಳ್ಳುತ್ತಿವೆ. ಇಂತಹ ಪದ್ದತಿಯನ್ನು ತಪ್ಪಿಸಲು ಯೋಚಿಸಿದ ಲಾಫ್ಟರ್ ಥೆರಪಿಸ್ಟ್ ಕಮಲೇಶ್ ಮಸಾಲಾವಾಲಾ ನಡೆಸುತ್ತಿರುವ ಹಾಸ್ಯಮೇವ ಜಯತೆ ಎಂಬ ಸ್ವಯಂಪ್ರೇರಿತ ಸಂಘಟನೆ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದು ಇದರಲ್ಲಿ ಹರೆಯದ ಮುಗ್ದ ಜೀವಿಗಳಿಗೆ ತಿಳುವಳಿಗೆ ಹೇಳಿ ಸ್ವಯಂ ಇಚ್ಛೆಯಿಂದ ಪ್ರಮಾಣ ಮಾಡಿಸುತ್ತಿದೆ.

ಇಂತಹ ಹೊಸ ಪ್ರಯತ್ನ ನಡೆಯುತ್ತಿರುವುದು ಎಲ್ಲಿ?

ಈ ಪ್ರಮಾಣ ನಡೆಯಿತ್ತಿರುವುದು ಸೂರತ್‍ನಲ್ಲಿ ಅದರಂತೆ ಸುಮಾರು 15 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಲ್ಲಿ ತಾವು ಪ್ರೇಮ ವಿವಾಹವಾಗಲ್ಲ ಎಂದು ಪ್ರಮಾಣ ಮಾಡಲು ಮುಂದಾಗಿದ್ದು, ಸಂಸ್ಕಾರ ಭಾರತಿ, ಪ್ರೆಸಿಡೆನ್ಸಿ ಹೈಸ್ಕೂಲ್ ಸೇರಿ 15 ಶಾಲೆಗಳಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಮಾಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇವರು ತಮ್ಮ ಪ್ರೀತಿ, ಪ್ರೇಮವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೇ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ.

ವಿದ್ಯಾರ್ಥಿಗಳ ಅಭಿಪ್ರಾಯ ಏನು?

ಈ ಪ್ರಮಾದ ಹಿಂದೆ ಯಾರ ಬಲವಂತವು ಇಲ್ಲ ಈಗೀಗ ನಡೆಯುತ್ತಿರುವ ಪ್ರೇಮ ಪ್ರಕರಣ ನೋಡಿ. ನಮ್ಮ ಪೋಷಕರಿಗೋಸ್ಕರ ನಾವು ಈ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮಾಡಿರುವಷ್ಟು ತ್ಯಾಗ ಈ ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಹೀಗಾಗಿ ಅವರ ನಿರ್ಧಾರಗಳಿಗೆ ನಾವು ಗೌರವ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ಬಗ್ಗೆ ಆಯೋಜಕರು ಏನ್ ಅಂತಾರೆ?

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಯುವಕ ಯುವತಿಯರು ಪ್ರೀತಿಯಲ್ಲಿ ಬೀಳುತ್ತಾರೆ ಅಲ್ಲದೆ ತಾವು ಪ್ರೀತಿಸಿದವರನ್ನೇ ಮದುವೆಯಾಗುವ ದೃಢ ನಿರ್ಧಾರ ಮಾಡುತ್ತಾರೆ. ಆದರಲ್ಲಿ ಮನೆಬಿಟ್ಟು ಓಡಿ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಮದುವೆಯಾದವರ ಸಂಬಂಧ ಬೇಗನೇ ಮುರಿದುಬೀಳುತ್ತವೆ. ಇಂತಹ ನಿರ್ಧಾರ ಮಾಡುವಾಗ ಪೋಷಕರ ಸಲಹೆ ಅವಶ್ಯಕ ಎಂಬ ಸಂದೇಶ ನೀಡಲು ಈ ಹೊಸ ಕಾರ್ಯಕ್ರಮವನ್ನು ನಡೆಸಲು ಹೊರಟಿದ್ದೇವೆ” ಅಷ್ಟೇ ಅಲ್ಲದೆ ಈಗ “ಹಲವು ಯುವಕರು ಪೋಷಕರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗುತ್ತಾರೆ. ಯಾಕೆ ಪೋಷಕರು ತಮ್ಮ ಮಕ್ಕಳ ಪ್ರೀತಿಯನ್ನು ವಿರೋಧಿಸುತ್ತಾರೆ ಎಂದು ಯುವಕರಿಗೆ ತಿಳಿದಿರೋದಿಲ್ಲ. ಹೀಗಾಗಿ ಈ ರೀತಿ ಪ್ರಮಾಣ ಮಾಡಿದಾಗ ತಮ್ಮ ಪೋಷಕರ ಭಾವನೆಗಳಿಗೆ ಗೌರವ ಕೊಡಲು ಯುವಕರು ನಿರ್ಧಾರ ಮಾಡುತ್ತಾರೆ” ಎಂದು ಕಾರ್ಯಕ್ರಮದ ಆಯೋಜಕರು ಅಭಿಪ್ರಾಯ ಪಟ್ಟಿದ್ದಾರೆ.