ಭಾರತದ ನೋಟು ಮುದ್ರಣಕ್ಕೆ ಪೇಪರ್ ಪೂರೈಕೆ ಮಾಡುವುದಿಲ್ಲ-ಲಂಡನ್ ಕಂಪೆನಿ

0
1119

ಭಾರತಕ್ಕೆ ನೋಟು ಮುದ್ರಣ ಮಾಡಲು ಅಗತ್ಯವಾದ ಪೇಪರ್ ನ್ನು ಈ ವರೆಗೆ ಲಂಡನ್ ನಿಂದ ತರಿಸಲಾಗುತ್ತಿತ್ತು ಆದರೆ ಇನ್ನು ಮುಂದೆ ಪೇಪರ್ ಪೂರೈಕೆ ಮಾಡುವುದಿಲ್ಲ ಎಂದು ಲಂಡನ್ ಮೂಲದ ಬ್ಯಾಂಕ್ ನೋಟು ಮುದ್ರಣ ಮಾಡುವ ಡೆಲಾರೋ ಕಂಪೆನಿ ಹೇಳಿದೆ.

ನೋಟುಗಳ ಬ್ಯಾನ್ ಬಳಿಕ 2.000 ಹಾಗೂ ಹೊಸ 5.00 ರು ನೋಟು ಮುದ್ರಣಕ್ಕಾಗಿ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಒಪ್ಪಂದವನ್ನು ಕಂಪೆನಿ ಮುರಿದಿದೆ ಎಂದು ತಿಳಿದು ಬಂದಿದೆ.

ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಶಾಮೀಲಾಗಿರುವ ಕಂಪನಿಗೆ ಹೊಸ ನೋಟುಗಳ ಮುದ್ರಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ನಮ್ಮ ಕಂಪನಿ ಬಗ್ಗೆ ಮಾನಹಾನಿಯಾಗುವಂತ ಆರೋಪ ಮಾಡಲಾಗಿದೆ, ನಮ್ಮನ್ನು ಭಾರತದಲ್ಲಿ ಬ್ಲಾಕ್ ಲಿಸ್ಟ್ ನಲ್ಲಿ ಸೇರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗೀ ನಾವು ಭಾರತದ ನೋಟು ಮುದ್ರಣ ಮಾಡಲು ಪೇಪರ್ ಪೂರೈಸುವುದಿಲ್ಲ ಎಂದು ಕಂಪೆನಿ ಸ್ಪಷ್ಟ ಪಡಿಸಿದೆ.