ಈ ಸಂಚಾರಿ ನಿಯಮ ನಿಮಗೆ ಗೊತ್ತಿಲ್ಲ ಅಂದ್ರೆ ವಿನಾ ಕಾರಣ ದುಬಾರಿ ದಂಡ ತೆರಬೇಕಾಗುತ್ತೆ..

0
1509

ನೋ ಪಾರ್ಕಿಂಗ್ ಜಾಗದಲ್ಲಿ ಇರುವ ವಾಹನವನ್ನು ಪೊಲೀಸರ ಟೋಯಿಂಗ್‌ ಮಾಡುವ ಮುನ್ನ ಈ ರೀತಿಯ ನಿಯಮಗಳನ್ನು ಪಾಲಿಸಬೇಕು..!

ಹೌದು ನಿಮ್ಮ ವಾಹನಗಳು ನೋ ಪಾರ್ಕಿಂಗ್ ಜಾಗದಲ್ಲಿ ಇರುವ ವಾಹನಗಳನ್ನು ಪೊಲೀಸರು ನಿಮ್ಮ ವಾಹನಗಳನ್ನು ಹೇಳದೆ ಕೇಳದೆ ಮುಟ್ಟುವ ಅಧಿಕಾರವಿರುವುದಿಲ್ಲ. ಯಾಕೆ ಅಂದ್ರೆ ಅದಕ್ಕೆ ಆದಂತ ನೀತಿ ನಿಯಮಗಳು ಇವೆ ಆ ರೀತಿಯಾಗಿ ಪೊಲೀಸರು ಕಾರ್ಯನಿರ್ವಹಿಸಬೇಕು.

ಇರುವ ನೀತಿ ನಿಯಮಗಳು ಇಲ್ಲಿವೆ ನೋಡಿ:

ನೋ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸುವ ವಾಹನಗಳನ್ನು ಪೊಲೀಸರು ತೆಗೆದುಕೊಂಡು ಹೋಗುವಾಗ ನಿಮ್ಮ ವಾಹನದ ಮೇಲಿನ ನಂಬರ್ ತೆಗೆದುಕೊಂಡು ಅದನ್ನು ಮೈಕ್ ನಲ್ಲಿ ಕೂಗಿ ಹೇಳಬೇಕು ಇದು ಕಡ್ಡಾಯ.

ಈ ರೀತಿಯ ಸೂಚನೆಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಪ್ರವೀಣ್ ಸೂದ್ ರವರು ಈ ನಿಯಮವನ್ನು ಸಂಚಾರಿ ಪೊಲೀಸರಿಗೆ ಆದೇಶ ಹೊರಡಿಸಿದ್ದರು.

ಸಂಚಾರಿ ಪೊಲೀಸರು ಈ ಆದೇಶದಿಂದ ಟೋಯಿಂಗ್‌ ವಾಹನದೊಂದಿಗೆ ಸುತ್ತಾಡುವ ಸಂಚಾರ ಪೊಲೀಸರು ಮೈಕ್‌ ಜತೆಗಿಟ್ಟುಕೊಂಡು ಹೋಗಬೇಕಿದೆ.

ಸಂಚಾರಿ ಪೊಲೀಸರು ನೋ ಪಾರ್ಕಿಂಗ್ ಜಾಗದಲ್ಲಿ ಇದ್ದ ವಾಹನಗಳನ್ನು ತೆಗೆದುಕೊಂಡು ಹೋಗಿ ತಮ್ಮ ಠಾಣೆಯ ಬಳಿ ನಿಲ್ಲಿಸಿ ಕೊಂಡು ದ್ವಿಚಕ್ರ ವಾಹನಗಳಿಗೆ ೭೫೦ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ೧,೧೦೦ ದಂಡ ವಿಧಿಸುತ್ತಾರೆ.

ಈ ದಂಡದಲ್ಲಿ ಕೇವಲ ೧೦೦ ಮಾತ್ರ ನೀವು ನೋ ಪಾರ್ಕಿಂಗ್ ದಂಡ ಕಟ್ಟುತ್ತೀರಾ ಆದ್ರೆ ಇನ್ನು ಉಳಿದ ಹಣ ಟೋಯಿಂಗ್‌ ಶುಲ್ಕವಾಗಿರುತ್ತದೆ.

ಆದ್ರೆ ನಗರ ಪೊಲೀಸ್ ಕಮಿಷನರ್ ನೀಡಿರುವ ಆದೇಶದಂತೆ ವಾಹನವನ್ನು ತೆಗೆದುಕೊಂಡು ಹೋಗುವ ಮುನ್ನ ನಿಮ್ಮ ವಾಹನದ
ಸಂಖ್ಯೆಯನ್ನು ಜೋರಾಗಿ ಮೈಕ್ ನಲ್ಲಿ ಕೂಗಬೇಕು ಮತ್ತು ಕೂಗಿ ೫ ನಿಮಿಷ ಅಲ್ಲಿಯೇ ಕಾಯಬೇಕು. ೫ ನಿಮಿಷದ ನಂತರ ವಾಹನದ ಮಾಲೀಕರು ಬರದೇ ಇದ್ದಾಗ ಆ ವಾಹನವನ್ನು ಪೊಲೀಸರು ತೆಗೆದುಕೊಂಡು ಹೋಗಬಹುದು.

ಐದು ನಿಮಿಷದಲ್ಲಿ ವಾಹನದ ಮಾಲೀಕರು ಬಂದ್ರೆ ಅವರಿಂದ ಅಲ್ಲಿಯೇ ೧೦೦ ರೂ ದಂಡವನ್ನು ಕಟ್ಟಿಸಿಕೊಳ್ಳಬೇಕು ನಂತರ ವಾಹನವನ್ನು ನೀಡಬೇಕು. ಈ ರೀತಿಯಲ್ಲಿ ಸಂಚಾರಿ ಪೊಲೀಸರು ನಡೆದುಕೊಳ್ಳದಿದ್ದರೆ ಅವರ ವಿರುದ್ಧ ಕಠಿಣಕ್ರಮ ಜರುಗಿಸಲಾಗುತ್ತದೆ ಎಂದು ಕಮಿಷನರ್ ತಿಳಿಸಿದ್ದರು.

ಒಂದು ವೇಳೆ ನೀವು ಬಂದರೂ ಅದನ್ನು ಸ್ಟೇಷನ್ ಹತ್ರ ತೆಗೆದುಕೊಳ್ಳಿ ಅಂತ ಸಂಚಾರಿ ಪೋಲಿಸ್ ಸಿಬ್ಬಂದಿ ಹೇಳಿದ್ರೆ, ಸಂಚಾರಿ ಕಮಿಷನರ್ ರವರಿಗೆ ನೀವು ಟ್ವಿಟ್ಟರ್ ಮೂಲಕ ತಿಳಿಸಬಹುದು..