ಸುಮ್ನೆ ಶೋಕಿಗೆ ಅಂತ No Shave November ಅಥವಾ movember  ಆಚರಣೆ ಮಾಡೋದಲ್ಲ ಅದರ ಮಹತ್ವ ಏನು ತಿಳಿದುಕೊಳ್ಳಿ

0
1020

No Shave November ಫೌಂಡೇಶನ್

ಆಸ್ಟ್ರೇಲಿಯಾದ ಮೆಲ್ಬೋರ್ನ್ನ  ಕೆಲವು ಯುವಕರು 1999 ರಲ್ಲಿ   “No Shave ನವೆಂಬರ್” ಅಥವಾ “movember ” ಪದವನ್ನು ಸೃಷ್ಟಿಸಿದರು ನಂತರ

2004 ರಲ್ಲಿ ಮೋವೆಂಬರ್ ಫೌಂಡೇಶನ್ ಪ್ರಾರಂಭಿಸಲ್ಪಟ್ಟಿತು  ಮತ್ತು ಅದೇ ಸಮಯದಲ್ಲಿ ಪುರುಷರ ಆರೋಗ್ಯದ ಕುರಿತು ಮುಖ್ಯವಾಗಿ ಪ್ರೊಸ್ಟೇಟ್( prostate ) ಮತ್ತು ವೃಷಣ ಕ್ಯಾನ್ಸರ್( testicular cancer )   ಬಗ್ಗೆ ಅರಿವು ಮೂಡಿಸಲು ಹಣವನ್ನು ಸಂಗ್ರಹಿಸಲು ಶುರು ಮಾಡಿತು .

ಮೋವೆಂಬರ್ ಫೌಂಡೇಶನ್ 2013 ರಲ್ಲಿ ಸುಮಾರು $ 21 ದಶಲಕ್ಷ ಮೊತ್ತದ ಹಣವನ್ನು ಸಂಗ್ರಹಿಸಿತು  ,

21 ದೇಶಗಳಲ್ಲಿ ಶಿಬಿರಗಳನ್ನು ಹೊಂದಿದೆ ಹಾಗೂ ಪುರುಷರ ಮಾನಸಿಕ ಆರೋಗ್ಯ ಮತ್ತು ಪುರುಷರ ದೈಹಿಕ ಅರೋಗ್ಯವೂಸಹ ಈ ಸಂಸ್ಥೆಯ ಮುಖ್ಯ ಉದ್ದೇಶ .

120315-sb-lpdbeardssub

No Shave November ಎಂದರೆ ಏನು ?

No Shave ನವೆಂಬರ್ ಅಭಿಯಾನದಲ್ಲಿ ಭಾಗವಹಿಸುವ ಪುರುಷರು ನವೆಂಬರ್ ತಿಂಗಳಿನಲ್ಲಿ ಕ್ಷೌರ  ಮಾಡಿಸದೆ

ಮೀಸೆ ಮತ್ತು ಗಡ್ಡವನ್ನು ಬೆಳೆಸುತ್ತಾರೆ ಸತತ ಮೂವತ್ತು ದಿನಗಳ ಕಾಲ ಕತ್ತರಿಗೆ ವಿರಾಮ ಬೀಳುತ್ತದೆ .ಮತ್ತು ಯಾರಾದ್ರೂ ಯಾಕೆ ಹೀಗೆ ಹುಚ್ಚು ಹುಚ್ಚಾಗಿ ಗಡ್ಡ ಮೀಸೆ ಬಿಟ್ಟಿದ್ಯ ?ಅಂತ ಕೇಳಿದ್ರೆ  No Shave ನವೆಂಬರ್ ಅಭಿಯಾನದ
ಅರಿವು ಮೂಡಿಸುತ್ತಾರೆ ಭಾಗವಹಿಸುವವರು .

funny-shave-november-game

ಹೀಗೆ ಶೇವ್ ,ಕಟಿಂಗ್ ,ಗ್ರೂಮ್ ಯಿಂಗ್ ಮಾಡದೆ ಉಳಿಸಿಟ್ಟ ಹಣವನ್ನು ಅಮೇರಿಕಾದ ಕ್ಯಾನ್ಸರ್ ಇನ್ಸಿಟಿಟ್ಯೂಟ್ ಗೆ ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶ .

ಮಹಿಳೆಯರು ಸಹ  ಈ ಅಭಿಯಾನದಲ್ಲಿ ಭಾಗವಹಿಸಬಹುದು ಹೇಗೆಂದರೆ ತಮ್ಮ ನವೆಂಬರ್ ತಿಂಗಳ ಕೇಶಾಲಂಕಾರ , ಕೇಶ ವಿನ್ಯಾಸ , ಥ್ರೆಡ್ಡಿಂಗ್ ,ವಾಕ್ಸಿಂಗ್ , ಕೂದಲ ಮಸಾಜ್ , ಸ್ಪಾ  ಹಣವನ್ನು ದೇಣಿಗೆಯಾಗಿ ನೀಡಬಹುದು .

movember

 

ಕ್ಯಾನ್ಸರ್ ಬಗ್ಗೆ ನಾವು ಯಾಕೆ ತಿಳ್ಕೊಬೇಕು ?

ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಪ್ರಕಾರ

ಅಂದಾಜು 1.665.540 ಜನರು  2014 ರಲ್ಲಿ  ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು 585.720 ಜನರು ಕ್ಯಾನ್ಸರ್ ಸಾಯುತ್ತಾರೆ ಎಂದು ಅಂದಾಜಿಸಲಾಗಿತ್ತು

ಪ್ರೊಸ್ಟೇಟ್ ಕ್ಯಾನ್ಸರ್ :

ಪ್ರೊಸ್ಟೇಟ್ ಕ್ಯಾನ್ಸರ್ ಬಹಳವಾಗಿ ಇತ್ತೀಚಿಗೆ ಕಾಣುತ್ತಿದ್ದು ,

137

ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಪ್ರಕಾರ 2014 ರಲ್ಲಿ ಅಮೇರಿಕಾ ಒಂದರಲ್ಲೇ

ಅಂದಾಜು 233,000 ಜನರು ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ,

ಅಂದಾಜು 29,000 ಜನರು ಪ್ರತಿ ವರ್ಷ ಪ್ರಾಸ್ಟೇಟ್ ಕ್ಯಾನ್ಸರ್ನಿಂದ  ಸಾಯುತ್ತಾರೆ

ವೃಷಣ ಕ್ಯಾನ್ಸರ್:

Prostate cancer awareness
 

 

 

8.820 ಜನರು 2014 ರಲ್ಲಿ ವೃಷಣ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.

ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಆರಂಭವಾಗಿರುವ ಈ  No Shave november ಅಭಿಯಾನ ವಿಶ್ವ ವ್ಯಾಪಿಯಾಗಿ ಹರಡಲಿ ಎಂದು ದಿ ನ್ಯೂಸಿಸ್ಮ್ ತಂಡ ಹಾರೈಸುತ್ತದೆ