ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆ ಇಲ್ಲ.!

0
301

ಹೆಮ್ಮೆಯ ಮತ್ತು ಜವಾಬ್ದಾರಿಯ ಹುದ್ದೆಯಾದ ಪೊಲೀಸ್ ಹುದ್ದೆಗೆ ಸೇರಲು ಯುವಕ-ಯುವತಿರು ಹೆಚ್ಚಿನ ಆಸಕ್ತ ಹೊಂದಿದ್ದಾರೆ. ಅದರಂತೆ ಪಿಎಸ್ಐ ಹುದ್ದೆಯ ಕನಸು ಕಂಡು ಹಗಲು ರಾತ್ರಿ ಎನ್ನದೆ ಓದುತ್ತಿದ್ದಾರೆ, ಇಂತಹ ನೇಮಕಾತಿ ಪ್ರಕ್ರಿಯೆಯಲ್ಲಿ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮಥ್ಯೇ ಪರೀಕ್ಷೆ, ಲಿಖಿತ ಪರೀಕ್ಷೆ, ಸೇರಿದಂತೆ ಮೌಖಿಕ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು ಅದರಲ್ಲಿ ಮೌಖಿಕ ಪರೀಕ್ಷೆ ನಡೆಸುವುದನ್ನು ಕೈಬಿಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಇನ್ನುಮುಂದೆ ಮೌಖಿಕ ಪರೀಕ್ಷೆ ಇಲ್ಲ?

ಹೌದು ಸರ್ಕಾರದ ಆದೇಶದಂತೆ ರಾಜ್ಯ ಸಬ್‌-ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆ ನಡೆಸುವುದನ್ನು ಕೈಬಿಡಲಾಗಿದ್ದು, ನಿರ್ಣಯವನ್ನು ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ ವೃಂದದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮೌಖಿಕ ಪರೀಕ್ಷೆ ನಡೆಸುವುದನ್ನು ಕೈಬಿಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ವಿವಿಧ ಹಂತಗಳ ಪರೀಕ್ಷೆಗಳಲ್ಲಿ, ಈ ಹಿಂದೆ 10 ಅಂಕಗಳಿಗೆ ಮೌಖಿಕ ಪರೀಕ್ಷೆಯು (ಸಂದರ್ಶನ) ಒಂದಾಗಿತ್ತು. ‘ಸಿ’ ಗ್ರೂಪ್ ನಾಗರಿಕ ಸೇವಾ ಹುದ್ದೆಗಳಿಗೆ ಮೌಖಿಕ ಪರೀಕ್ಷೆ ನಡೆಸಬಾರದೆಂಬ ತಿದ್ದುಪಡಿ ನಿಯಮ ಜಾರಿಗೆ ಬಂದಿದ್ದು.

ಅದರಂತೆ ಪ್ರಸ್ತುತ ನೇಮಕಾತಿ ಕಛೇರಿಯಿಂದ ಪ್ರಕಟಿಸಲಾಗಿರುವ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳೆ) ಹಾಗೂ ಸೇವಾನಿರತರನ್ನೊಳಗಂಡಂತೆ 200 ಹುದ್ದೆಗಳು, ಸಶಸ್ತ್ರ ಮೀಸಲು ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್(CAR/DAR) (ಪುರುಷ) 40 ಹುದ್ದೆಗಳು ಹಾಗೂ ವಿಶೇಷ ಮೀಸಲು ಸಬ್‌-ಇನ್ಸ್‌ಪೆಕ್ಟರ್ (KSRP) (ಪುರುಷ) 40 ಹುದ್ದೆಗಳಿಗೆ ಸರ್ಕಾರದ ನಿರ್ದೇಶನದಂತೆ ಮೌಖಿಕ ಪರೀಕ್ಷೆಯನ್ನು ನಡೆಸದಿರಲು ನಿರ್ಣಯ ಕೈಗೊಂಡು ಪ್ರಕಟಣೆ ಹೊರಡಿಸಲಾಗಿದೆ.
ಮೌಖಿಕ ಪರೀಕ್ಷೆ ಹೊರತುಪಡಿಸಿ, ಉಳಿದಂತೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಸಲಾಗುವ ಇತರೆ ಪರೀಕ್ಷೆಗಳು ಮುಂದುವರೆಯಲಿದ್ದು, ಯಾವುದೇ ಬದಲಾವಣೆ ಆಗಿರುವುದಿಲ್ಲ.
ಗೊಂದಲ ಏನೆಂದರೆ ದಿನಾಂಕ 18-07-2019 ಮತ್ತು 29-08-2019 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ್ದ ನೇಮಕಾತಿ ಅಧಿಸೂಚನೆಯಲ್ಲಿ, “ಸಬ್‌-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಮೆರಿಟ್ ಅನುಸಾರ ಹಾಗೂ ಹುದ್ದೆಗಳ ಮೀಸಲಾತಿಗನುಗುಣವಾಗಿ 1:2 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆಗೆ ಆಹ್ವಾನಿಸಿ 10 ಅಂಕಗಳ ಮೌಖಿಕ ಪರೀಕ್ಷೆಯನ್ನು ನಡೆಸಲಾಗುವುದು” ಎಂದು ತಿಳಿಸಲಾಗಿತ್ತು.

ಸರ್ಕಾರವು ಅಧಿಸೂಚನೆ ಸಂಖ್ಯೆ: DPAR 191 SRR 2015, ದಿನಾಂಕ 01-07-2019 ರಲ್ಲಿ ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು 2019 ಅನ್ನು ಪ್ರಕಟಿಸಿದ್ದು, ಅದರಲ್ಲಿ ” ಕರ್ನಾಟಕ ರಾಜ್ಯ ಸಿವಿಲ್‌ ಸೇವೆ ಕಾಯ್ದೆ 1978 (Karnataka Act 14 of 1990) ರಲ್ಲಿ ಗ್ರೂಪ್‌ ಸಿ ನಾಗರಿಕ ಸೇವೆಗಳಿಗೆ ಯಾವುದೇ ಮೌಖಿಕ ಪರೀಕ್ಷೆ, ಸಂದರ್ಶನಗಳು ಇರುವುದಿಲ್ಲ’ ಎಂದು ತಿಳಿಸಲಾಗಿದೆ.