ಎರಡು ದಿನ ATM ಬಂದ್..! ಮೋದಿ ಗೂಗ್ಲಿ effect

0
587

ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ನಿರ್ಧಾರವನ್ನು ಮಂಗಳವಾರ ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದು ಭಾರತೀಯ ಆರ್ಥಿಕ ಇತಿಹಾಸದಲ್ಲಿಯೇ ಇಂತಹ ಕ್ರಮ ಎರಡನೇ ಬಾರಿಯದು.

ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಇಂತಹ ಧೀರ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಕೈಗೊಂಡಿರುವ ನಿರ್ಧಾರ ಅತ್ಯಂತ ವಿವೇಚನಾಯುಕ್ತ ಮತ್ತು ಧೀಮಂತ ನಡೆ.

hqdefault-1

ಸಾರ್ವಜನಿಕರಿಗೆ ಡಿಸೆಂಬರ್ 31ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅಫಿಡವಿಟ್ ಸಲ್ಲಿಸಿ 2017ರ ಮಾರ್ಚ್ ವರೆಗೂ ರಿಸರ್ವ್ ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ. ಇನ್ನು ದಿನಕ್ಕೆ ಬರೀ 2 ಸಾವಿರ ಮೊತ್ತದ ನೋಟುಗಳನ್ನು ಬದಲಿಸಿಕೊಳ್ಳಬಹುದು.

ಇನ್ನು ನೂತನವಾಗಿ 2000 ಹಾಗೂ 500 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಅವಕಾಶ ನೀಡಲಾಗಿದ್ದು ಮುಂದಿನ ದಿನಗಳಲ್ಲಿ 500 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ.

500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಬಂದ್ ಹಿನ್ನೆಲೆ 1 ರುಪಾಯಿಯಿಂದ 100 ರುಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಾಗಲಿವೆ.

ನವದೆಹಲಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಹಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

 1. ಹೊಸ 500 ಹಾಗೂ 200೦ ರು ನೋಟು ಶೀಘ್ರವೇ ಚಾಲನೆ
 2. 500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್
 3. ಮೋದಿ ನವೆಂಬರ್ 19ರ ಮಧ್ಯರಾತ್ರಿ ತನಕ ರಿಯಾಯಿತಿ
 4. ನವೆಂಬರ್ 10ರಿಂದ ಡಿಸೆಂಬರ್ 30 ರೊಳಗೆ 500 ಹಾಗೂ 1000 ರು ಬದಲಾಯಿಸಿಕೊಳ್ಳಿ
 5. ನವೆಂಬರ್ 9 ಹಾಗೂ 10 ಎಲ್ಲಾ ಎಟಿಎಂಗಳು ಬಂದ್ ಆಗಲಿವೆ
 6. ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಿತಿ ದಿನವೊಂದಕ್ಕೆ 2,000 ರು ಮಾತ್ರ
 7. ಬ್ಯಾಂಕುಗಳು, ಎಟಿಎಂ, ಅಂಚೆ ಕಚೇರಿಗಳಲ್ಲಿ ನೋಟು ಬದಲಾವಣೆಗೆ ಕ್ರಮ
 8. ನಗದು ರಹಿತ ವ್ಯವಹಾರದಲ್ಲಿ ಯಾವುದೇ ತೊಂದರೆಯಿಲ್ಲ.
 9. ನವೆಂಬರ್ ೧೦ ರಿಂದ ಆರ್‌ಬಿಐ ಹೊಸ ನೋಟು
 10. ಕಪ್ಪು ಹಣ, ನಕಲಿ ನೋಟು ತಡೆಗೆ ಸರ್ಕಾರ ನಿರ್ಧಾರ
 11. ಭಯೋತ್ಪಾದಕರಿಗೆ ನಕಲಿ ನೋಟುಗಳ ಮೂಲಕ ಹಣ ಹೋಗುತ್ತಿದೆ.