ನೊಬೆಲ್​ ಪ್ರಶಸ್ತಿ ಸ್ವೀಕರಿಸಿದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಮತ್ತು ಅವರ ಪತ್ನಿ ಉಟ್ಟ ಉಡುಗೆಯಲ್ಲಿತ್ತು ನಿಜವಾದ ಭಾರತೀಯ ಸಂಪ್ರದಾಯ.!

0
237

ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ ಈ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದ್ದು, ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯವನ್ನ ಅನಾವರಣಗೊಳಿಸಿ ವೈಶಿಷ್ಟ್ಯ ಮೆರೆದಿದ್ದಾರೆ. ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದ ಅಭಿಜಿತ್ ಜೊತೆಗೆ ಅವರ ಪತ್ನಿ ಕೂಡಾ ನೊಬೆಲ್ ಪುರಸ್ಕಾರ ಪಡೆದುಕೊಂಡಿದ್ದಾರೆ ಇವರಿಬ್ಬರು ಈ ವರ್ಷ ಆರ್ಥಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪ್ರಾಧ್ಯಾಪಕ ಮೈಕೆಲ್ ಕ್ರೆಮರ್ ಜೊತೆ ಹಂಚಿಕೊಂಡಿದ್ದಾರೆ.


Also read: ವಯಸ್ಸಲ್ಲಿ ಸುಧಾ ಮೂರ್ತಿಯವರಿಗಿಂತ ದೊಡ್ಡವರಾಗಿದ್ದರೂ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿದ ಅಮಿತಾಬ್ ಬಚ್ಚನ್!!

ಹೌದು “2019ರ ಅರ್ಥಶಾಸ್ತ್ರ ನೊಬೆಲ್ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧರಿಸಿದ ವಿಧಾನವು ವು ಅಭಿವೃದ್ಧಿ ಅರ್ಥಶಾಸ್ತ್ರದ ಕಲ್ಪನೆಯನ್ನು ಬದಲಿಸಿದೆ.ಇದೀಗ ಆ ಕ್ಷೇತ್ರ ಮತ್ತಷ್ಟು ಬೆಳವಣಿಗೆ ಸಾಧಿಸುವತ್ತ ಹೊರಟಿದೆ.” ನೊಬೆಲ್ ಆಯ್ಕೆ ಸಮಿತಿ ಹೇಳಿಕೆ ತಿಳಿಸಿದೆ. “ಜಾಗತಿಕ ಬಡತನದ ವಿರುದ್ಧ ಹೋರಾಡುವ ಅತ್ಯುತ್ತಮ ಮಾರ್ಗಗಳ ಬಗ್ಗೆ ವಿಶ್ವಾಸಾರ್ಹ ಉತ್ತರಗಳನ್ನು ಪಡೆಯಲು ಈ ವರ್ಷದ ಪ್ರಶಸ್ತಿ ವಿಜೇತರು ಹೊಸ ವಿಧಾನವನ್ನು ಪರಿಚಯಿಸಿದ್ದಾರೆ.


Also read: ಸೈನಿಕರಿಗೆ ಶತ್ರುಗಳಿಂದ ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್; ಈ ಆವಿಷ್ಕಾರ ಹೇಗೆ ರಕ್ಷಣೆ ಮಾಡುತ್ತೆ ಗೊತ್ತಾ??

ಇದು ಈ ಸಮಸ್ಯೆಯನ್ನುಸಣ್ಣ,ಮತ್ತು ಹೆಚ್ಚು ಸುಕ್ಷೇಮವಾಗಿ ನಿರ್ವಹಿಸಬಹುದಾದ ಪ್ರಶ್ನೆಗಳಾಗಿ ವಿಂಗಡಿಸುತ್ತದೆ – ಉದಾಹರಣೆಗೆ, ಮಕ್ಕಳ ಆರೋಗ್ಯವನ್ನು ಸುಧಾರಿಸುವ ಅತ್ಯಂತ ಪರಿಣಾಮಕಾರಿ ಮಧ್ಯಸ್ಥಿಕೆ” ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಡೆಯುತ್ತಿರುವ ಭಾರತೀಯರ ಪೈಕಿ ಅಭಿಜಿತ್ ಬ್ಯಾನರ್ಜಿ ಎರಡನೆಯವರಾಗಿದ್ದಾರೆ. ಈ ಹಿಂದೆ ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ಈ ಪುರಸ್ಕಾರ ಲಭಿಸಿತ್ತು.


Also read: ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ನೆರವಾಗಲು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾದ ಮಹಿಳೆ ಪೊಲೀಸ್.!

ಅದರಂತೆ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಬಂಗಾಳ ಶೈಲಿಯಲ್ಲಿ ದೋತಿ, ಕೋಟು ಧರಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅಭಿಜಿತ್ ಪಾತ್ರರಾಗಿದ್ದಾರೆ. ಅವರ ಪತ್ನಿ ಎಸ್ತರ್ ಡುಫ್ಲೋ ಕೂಡ ನೀಲಿ ಹಸಿರು ಮಿಶ್ರಿತ ಸೀರೆ ಧರಿಸಿ ನೊಬೆಲ್ ಸ್ವೀಕರಿಸಿದರು. ಇನ್ನು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದು ನೆಟಿಗರು ಪ್ರಶ್ನಿಸಿದ್ದಾರೆ. ಅಭಿಜಿತ್ ಜೊತೆಗೆ ಅವರ ಪತ್ನಿ ಕೂಡಾ ನೊಬೆಲ್ ಪುರಸ್ಕಾರ ಪಡೆದುಕೊಂಡಿದ್ದಾರೆ ಇವರಿಬ್ಬರು ಈ ವರ್ಷ ಆರ್ಥಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪ್ರಾಧ್ಯಾಪಕ ಮೈಕೆಲ್ ಕ್ರೆಮರ್ ಜೊತೆ ಹಂಚಿಕೊಂಡಿದ್ದಾರೆ.
ಈ ಮೂವರಿಗೂ ನೊಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಭಾರತೀಯ ಸಂಪ್ರದಾಯದ ಉಡುಗೆಯಲ್ಲಿ ಕಾಣಿಸಿಕೊಂಡು ಎಲ್ಲರನ್ನೂಆಕರ್ಷಿಸಿದರು. ಅಭಿಜಿತ್ ಬಿಳಿ ಪಂಚೆ ಮತ್ತು ಕಪ್ಪು ಕೋಟಿನಲ್ಲಿ ಕಾಣಿಸಿಕೊಂಡರು. ಎಸ್ತರ್ ಹಸಿರು ಮತ್ತು ನೀಲಿ ಮಿಶ್ರಿತ ಬಣ್ಣದ ಸೀರೆ ಧರಿಸಿದ್ದರು ಉಳಿದಂತೆ ಪ್ರಾಧ್ಯಾಪಕ ಮೈಕೆಲ್ ಕ್ರೆಮರ್ ಸೂಟ್ ಧರಿಸಿದ್ದರು.