ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ನೋಕಿಯಾ 3310 !!ನೀವು ತೊಗೊಳ್ತಿರಾ??

0
916

ನಮ್ಮ ಕೈಯಲ್ಲಿ ಈಗ ಬಗೆ ಬಗೆಯ ಫೋನ್‌ಗಳು ಇವೆ. ಏನುಬೇಕಾದ ತಂತ್ರಜ್ಞಾನವನ್ನು ನಾವು ಬಳಸಬಹುದು. ಆದರೆನೋಕಿಯಾ ಅಂದ ತಕ್ಷಣ ಏನೋ ಪ್ರೀತಿ. ೩೩೧೦ ಹಾಗೂ ೧೧೦೦ಮೊಬೈಲ್‌ಗಳು ನೆನಪಾಗುತ್ತವೆ. ಅಷ್ಟರ ಮಟ್ಟಿಗೆ ಈಸೆಲ್‌ಫೋನ್‌ಗಳು ಜನಮಾನಸದಲ್ಲಿ ಮನ್ನಣೆ  ಗಣಿಸಿದ್ದವು.ಕಾರಣ ಅದರ ಬಾಳಿಕೆ. ಮೇಲಿನಿಂದ ಬಿದ್ದರೂ ಸಹ ಹಿಂಬದಿಕವರ್ ಹಾಗೂ ಮುಂಬದಿಯ ಕವರ್ ಜೋಡಿಸಿ, ಆನ್ ಮಾಡಿದರೆಕೆಲಸ ನಿರ್ವಹಿಸುತ್ತಿತ್ತು.

Image result for nokia 3310

ಈಗ ಮತ್ತೆ ೩೩೧೦ ಮೊಬೈಲ್ ೧೭ ವರ್ಷಗಳ ಬಳಿಕೆಮಾರುಕಟ್ಟೆಗೆ ಬರಲಿದೆ. ಅದು ಸಂಪೂರ್ಣ ಹೊಸತಂತ್ರಜ್ಞಾನದೊಂದಿಗೆ. ಹಾಗಿದ್ದರೆ ಆ ಮೊಬೈಲ್‌ಗಳಲ್ಲಿ ಏನಿದೆಎಂಬ ಮಾಹಿತಿ ಇಲ್ಲಿದೆ ನೋಡಿ.

ಕಲರ್ ಸ್ಕ್ರೀನ್, ೨.೪ ಇಂಚಿನ ಟಿಎಫ್‌ಟಿ, ೧೬೭ ಪಿಪಿಐ,ಹೊಂದಿರುವ ಫೋನ್ ಸೀರೀಸ್ ೩೦+ ಆಪರೇಟಿಂಗ್ ಸಿಸ್ಟಂಹೊಂದಿದೆ. ೧೨.೮ ಮಿ ಮೀಟರ್ ದಪ್ಪ, ೭೯.೬ ಗ್ರಾಂ ತೂಕಇದರದ್ದಾಗಿದೆ. ಹಳೆಯ ಫೋನ್ ೨೨ ಮಿ.ಮೀ ದಪ್ಪ, ೧೩೩ ಗ್ರಾಂತೂಕವನ್ನು ಹೊಂದಿತ್ತು. ಎಫ್‌ಎಂ ರೇಡಿಯೋ, internal memory ೧೬ ಎಂಬಿ ಇದ್ದು, ಗ್ರಾಹಕ ೩೨ ಜಿಬಿ ಎಸ್‌ಡಿ ಕಾರ್ಡ್ ವರೆಗೂಮೆಮೊರಿಯನ್ನು ವಿಸ್ತರಿಸಬಹುದು. ಹೊಸ ಫೋನ್‌ನಹಿಂಬಾಗದಲ್ಲಿ ೨ ಎಂಪಿ ಕ್ಯಾಮೆರಾ ಇದ್ದು, ಫ್ಲಾಶ್ ಲೈಟ್ ಸಹನೀಡಲಾಗಿದೆ. ಅಲ್ಲದೆ ಈ ಫೋನ್‌ನಲ್ಲಿ ಕಂಪನಿಯ ಪ್ರಸಿದ್ಧಗೇಮ್ ಸ್ನೇಕ್ ಸಹ ಅಳವಡಿಸಲಾಗಿದ್ದು, ನಿಲಿ, ಹಳದಿ, ಕೆಂಪು,ಬೂದು ಬಣ್ಣದಲ್ಲಿ ಗ್ರಾಹಕರ ಕೈ ಸೇರಲಿವೆ. ಅಲ್ಲದೆ ೨ ಜಿನೆಟ್‌ವರ್ಕ್ ಸಹ ಅಳವಡಿಕೆಯಾಗಿದೆ.

Image result for nokia 3310

ಫಿನ್ಲೆಂಡ್ ಮೂಲದ ಎಚ್‌ಎಂಡಿ ಕಂಪನಿ ನೋಕಿಯಾಕಂಪನಿಯ ಹೆಸರಿನ ಮೊಬೈಲ್ ಬಿಡುಗಡೆ ಮಾಡಲಿದೆ. ಹೊಸಮೊಬೈಲ್‌ಗೆ ೪೦ ಡಾಲರ್ ನಿಗದಿ ಪಡಿಸಲಾಗಿದೆ. ಅಂದರೆಭಾರತದಲ್ಲಿ ಸುಮಾರು ೨೬೦೦ ರೂ.ಗೆ ಸಿಗಬಹುದು. ಈಮೊಬೈಲ್‌ಗಳು ಎರಡನೇ ತ್ರೈಮಾಸಿಕದಲ್ಲಿ ಗ್ರಾಹಕರಿಗೆತಲುಪಲಿವೆ. ಈ ಬಗ್ಗೆ ಇನ್ನು ಖಚಿತ ದಿವನ್ನು ಬಹಿರಂಗಪಡಿಸಿಲ್ಲ.