ಮರು ಜನ್ಮ ಪಡೆದು ಮಾರುಕಟ್ಟೆಗೆ ಲಗ್ಗೆಇಡುತ್ತಿದೆ NOKIA 3310!!

0
755

ನೋಕಿಯಾ  ೩೩೧೦ವಿನ  ಮರುಜನ್ಮ !!!!

ನೋಕಿಯಾ  ೩೩೧೦  ಈಗ  ಮಾರುಕಟ್ಟೆಗೆ  ಮರುಕಳಿಸುತ್ತಿದೆ . ಮೊಬೈಲ್  ಜಗತ್ತಿನಲ್ಲಿ  ಕ್ರಾಂತಿ  ಉಂಟು  ಮಾಡಿದ  ಹ್ಯಾಂಡ್ಸೆಟ್  ಇದು . ಈಗ  ನಾವೆಷ್ಟೇ  ಮುಂದುವರಿದಿದ್ದರು  4G ಸಂಪರ್ಕ  ನಮಗೆ  ದೊರಕುತ್ತಿದರು  ಸಹ  ನೋಕಿಯಾ  ೩೩೧೦  ಗೆ  ನಮ್ಮ  ಹೃದಯದಲ್ಲಿ  ಒಂದು  ವಿಶೇಷ  ಸ್ಥಾನವಿದೆ .

Image result for nokia 3310

ಹಿಂದೆ  ಇದೇ  ಫೋನ್  ಬಿಡುಗಡೆಯಾದಾಗ , 100 ದಶಲಕ್ಷ  ಹ್ಯಾಂಡ್ಸೆಟ್ಗಳು  ಮಾರಾಟವಾಗಿದ್ದವು . ಈಗ  ಈ  ಹ್ಯಾಂಡ್ಸೆಟ್  ಮತ್ತೆ  ಮರುಹುಟ್ಟು  ಪಡೆಯುತ್ತಿದೆ . ಇದರ  ಪ್ರಮುಖ   ಆಕರ್ಷಣೆ  ಎಂದರೆ  ಇದರ  ಬ್ಯಾಟರಿ  ಬಾಳಿಕೆ . ಇದನ್ನು ಒಂದು  ವಾರ  ಅಥವಾ  ಅದಕ್ಕಿಂತಲೂ  ಹೆಚ್ಚು  ದಿನ  ಚಾರ್ಜ್  ಮಾಡದೆ  ಸಹ  ಬಳಸಬಹುದಿತ್ತು .

Image result for nokia 3310

ಇದು  ಎಷ್ಟೇ  ಬಾರಿ  ಕೆಳಗೆ  ಬಿದ್ದರು , ಎಷ್ಟೇ  ಎತ್ತರದಿಂದ  ಬಿದ್ದರು  ಇದಕ್ಕೆ  ಏನು  ಆಗುತಿರಲಿಲ್ಲ . ಅಂತಹ  ದಂತಕಥೆ  ಇದು . ಈಗ  ಮತ್ತೆ  ಮಾರುಕಟ್ಟೆಗೆ  ಬರುತ್ತಿದೆ . Evan  Blass, ಇವರು  ಕೊಟ್ಟಿರುವ  ಮಾಹಿತಿಯ  ಪ್ರಕಾರ , ಪುನಃ  ಮಾರುಕಟ್ಟೆಗೆ  ಬರುತ್ತಿರುವ  ಈ  ನೋಕಿಯಾ  ೩೩೧೦  ಫೋನಿನ  ಬೆಲೆ , ಅಂದಾಜು  €59 ರಿಂದ  €62  ರವರೆಗಿರಬಹುದು . ಇದನ್ನು  ಫೆಬ್ರವರಿ  ೨೬ರರಂದು   ಮೊಬೈಲ್  ವರ್ಲ್ಡ್  ಕಾಂಗ್ರೆಸ್ ನಲ್ಲಿ , ನೋಕಿಯಾ  ತನ್ನ  ಇತರೆ  ಸ್ಮಾರ್ಟ ಫೋನ್ ಗಳೊಂದಿಗೆ  ಬಿಡುಗಡೆ  ಮಾಡುತ್ತಿದೆ .