ನೋಕಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ!

0
2388

ಒಂದೊಮ್ಮೆ ಮೊಬೈಲ್ ಕ್ಷೇತ್ರದ ಸಾಮ್ರಾಟನಾಗಿದ್ದ ನೋಕಿಯಾ ಬ್ರಾಂಡ್ ಮತ್ತೆ ರಾರಾಜಿಸಲಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ನೋಕಿಯಾದ ಆ್ಯಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ ಬರಲಿದೆ. ಈ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದರೊಂದಿಗೆ ನೋಕಿಯಾ, ಸ್ಮಾರ್ಟ್ ಫೋನ್ ಲೋಕಕ್ಕೆ ರೀ ಎಂಟ್ರಿ ಪಡೆದುಕೊಳ್ಳಲಿದೆ.

2003ರ ಕಾಲಾವಧಿಯಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟಕ್ಕೊಳಗಾದ ಮೊಬೈಲ್ ಫೋನ್ ನೋಕಿಯಾ ಆಗಿತ್ತು. ಆರಂಭಿಕ 2010 ರಲ್ಲಿ, ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಒಂದು ತೀಕ್ಷ್ಣವಾದ ಇಳಿಕೆಯನ್ನು ಕಂಡಿತ್ತು.

294500387

ನೋಕಿಯಾ ಕಂಪನಿಯ ಸ್ಮಾರ್ಟ್ಫೋನ್ ವಿಭಾಗವನ್ನು ಫಿನ್ಲ್ಯಾಂಡ್ ಮೂಲದ ಕಂಪೆನಿ HMD ಜಾಗತಿಕವಾಗಿ 10 ವರ್ಷ ಪರವಾನಗಿಯನ್ನು ಪಡೆದುಕೊಂಡಿದೆ. ನೋಕಿಯಾ ಕಂಪನಿಯ ಪ್ರಮುಖರ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಮೈಕ್ರೋಸಾಫ್ಟ್ ಕಂಪನಿಯ ಜೊತೆಗಿನ ಕರಾರು ಪ್ರಕಾರ ನೋಕಿಯಾ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಿನ ಟ್ರೆಂಡ್ ಗೆ ತಕ್ಕಂತೆ ರೂಪಿಸಲಾಗಿರುವ ಸ್ಮಾರ್ಟ್ ಫೋನ್ 2017 ರಲ್ಲಿ ಬರಲಿದೆ. 5-in ಫುಲ್ HD ಸ್ಕ್ರೀನ್, 3 ಜಿ.ಬಿ. RAM, 13 MP ಪ್ರೈಮರಿ ಕ್ಯಾಮೆರಾ, snapdragon 430 ಪ್ರೊಸೆಸರ್, 1080p ಡಿಸ್ ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳು ಇದರಲ್ಲಿವೆ.

nokia4