10ನೇ ತರಗತಿ ಪಾಸಾದವರಿಗೆ ಉತ್ತರ ರೈಲ್ವೆ ಹಲವು ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ

0
347

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಉತ್ತರ ರೈಲ್ವೆ (ನಾರ್ಥನ್ ರೈಲ್ವೆ) ಇಲಾಖೆಯು ಹಲವು ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಕಮರ್ಷಿಯಲ್ ವಿಭಾಗದಲ್ಲಿ ಕೆಟರಿಂಗ್, ಯುನಿಟ್ ಮತ್ತು ಕೆಟರಿಂಗ್ ಯುನಿಟ್ ಭಾಗದಲ್ಲಿ ಭರ್ತಿ ನಡೆಯಲಿದೆ. ಈ ಹುದ್ದೆಗಳ ಅರ್ಜಿ ಪ್ರಕ್ರಿಯೆಯು ಇಂದಿನಿಂದ (ಸೆಪ್ಟೆಂಬರ್ 16) ಪ್ರಾರಂಭವಾಗಿದೆ. ಇಲ್ಲಿ ಒಟ್ಟು 118 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅಕ್ಟೋಬರ್ 15 ರೊಳಗೆ ಅರ್ಜಿ ಸಲ್ಲಿಸಬೇಕು.

Also read: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗ್ರೇಡ್ -ಬಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಕೆಟರಿಂಗ್, ಯುನಿಟ್

ಸಂಸ್ಥೆ: ಉತ್ತರ ರೈಲ್ವೆ

ವಿದ್ಯಾರ್ಹತೆ: ಸರ್ವೀಸ್ ಸೈಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು. ಅಲ್ಲದೆ ಐಟಿಐ ಡಿಪ್ಲೊಮಾ ಪದವಿ ಪಡೆದಿರಬೇಕು. ಇದರೊಂದಿಗೆ ಅತಿಥಿ ಸತ್ಕಾರದಲ್ಲಿ ಪರಿಣಿತಿಯನ್ನು ಹೊಂದಿರಬೇಕು.

ಕುಕ್ಕಿಂಗ್ ಸೈಟ್: ಈ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ತರಗತಿ ಪಾಸ್ ಜೊತೆಗೆ ಐಟಿಐ ಮಾಡಿರಬೇಕು. ಹಾಗೆಯೇ ಆಹಾರ ಉತ್ಪಾದನೆಯಲ್ಲಿ ತರಬೇತಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಉತ್ತರ ರೈಲ್ವೆ www.rrcnr.org ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗೆ ಸಂಬಂಧಪಟ್ಟ ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಕೆ ಆರಂಭ- ಸೆಪ್ಟೆಂಬರ್ 16, 2019
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- ಅಕ್ಟೋಬರ್ 15, 2019
ನೇಮಕಾತಿ ಲಿಖಿತ ಪರೀಕ್ಷೆ- ಅಕ್ಟೋಬರ್ 31 ರಂದು ನಡೆಸುವ ಸಾಧ್ಯತೆಯಿದೆ.

ಹೆಚ್ಚಿನ ಮಾಹಿತಿಗಾಗಿ: www.rrcnr.org ಕ್ಲಿಕ್ ಮಾಡಿ.