ಉತ್ತರ ಭಾರತದ ವರು ಊಟದಲ್ಲಿ ಈ ಒಂದು ಪದಾರ್ಥ ಜಾಸ್ತಿ ಉಪಯೋಗಿಸೋದ್ರಿಂದ, ದಕ್ಷಿಣದವರ ಥರ ಜಾಸ್ತಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಲ್ವಂತೆ!!

0
1997

ಉತ್ತರ ಭಾರತದ ಜನರಿಗೆ ಹೃದಯದ ಖಾಯಿಲೆಗಳು ಬರುವುದು ತುಂಬಾ ಕಡಿಮೆ ಅಂತೆ ಇದೆಕೆಲ್ಲ ಅವರು ಲಕ್ಷ ಲಕ್ಷ ಹಣ ಕರ್ಚು ಮಾಡುವುದೇ ಇಲ್ಲ ಅಂತೆ ಕೇವಲ ಬರಿ “ಮನೆ ಮದ್ದುನಿಂದ ಅವರ ಹೃದಯ ತುಂಬಾನೇ ಗಟ್ಟಿ ಅಂತೆ” ಹಾಗಾದ್ರೆ ಆ ಮನೆಮದ್ದು ಯಾವುದು? ಅಂದ್ರೆ ಇಲ್ಲಿದೆ ನೋಡಿ.

Also read: ಹೃದಯಾಘಾತ ಆಗಬಾರದು ಅಂದ್ರೆ ಈ ಸುಲಭ ಸಲಹೆಗಳನ್ನು ಪಾಲಿಸಿ, ಆರಾಮಗಿರಿ…

ಹೃದಯ ಖಾಯಿಲೆ ಬಂತು ಅಂದ್ರೆ ಮುಗಿತ್ತು ಜೀವಂತ ಇರುವುದೇ ಅನುಮಾನ ಯಾವ ಸಮಯದಲ್ಲ್ಲಿ ಏನು ಆಗುತ್ತೆ ಎಂಬ ಭಯದಲ್ಲಿ ಉಸಿರಾಡ ಬೇಕಾಗುತ್ತೆ ಹೃದಯ ಆಘಾತ ಸಂಭವಿಸಿದಾಗ ಆಸ್ಪತ್ರೆಗೆ ಕರೆದೊಯಿವುದು ಸ್ವಲ್ಪ ತಡವಾದರು ಪ್ರಾಣವೇ ಹೋಗುತ್ತೆ ಇಂತಹ ಘಟನೆಗಳು ಪ್ರತಿನಿತ್ಯವೂ ನಡಿತ್ತಾನೆ ಇರುತ್ತೆ ಮತ್ತು ಈ ಹೃದಯಾಘಾತ ದಿಂದ ನಮ್ಮ ಸಂಬಂಧಿಕರನ್ನು ಅಪ್ಪ-ಅಮ್ಮ ಸ್ನೇಹಿತರನ್ನು ಕಳೆದುಕೊಂಡ ಉದಾಹರಣೆ ಗಳು ತುಂಬಾನೇ ಇವೆ. ಇಂತಹ ಹೃದಯ ಖಾಯಿಲೆಗೆ ಮಹತ್ವದ ಮನೆಮದ್ದು ಅಂದ್ರೆ ಹಸುವಿನ ‘ತುಪ್ಪ’ ಈ ತುಪ್ಪದಲ್ಲಿದೆ ಹತ್ತಾರು ಲಾಭ, ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆದರೆ ಇದು ಸತ್ಯ. ತುಪ್ಪದ ಸೇವನೆಯಿಂದ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು ಮತ್ತು ಹೃದಯದ ಖಾಯಿಲೆಯನ್ನು ತಡೆಗಟ್ಟ ಬಹುದಾದ ವಿಧಾನ ಇಲ್ಲಿದೆ.

Also read: ಹೃದಯದ ಕುರಿತ ಈ ಐದು ಎಚ್ಚರಿಕೆಗಳನ್ನು ಎಂದು ನಿರ್ಲಕ್ಷಿಸದಿರಿ…!

ಸಮಪ್ರಮಾಣದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಸ್ವಲ್ಪ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ಸ್ನಾನದ ಬಳಿಕ ಈ ತುಪ್ಪವನ್ನು ತೆಳುವಾಗಿ ಹಚ್ಚಿ ಮಸಾಜ್ ಮೂಲಕ ಸೂಕ್ಷ್ಮಭಾಗಗಳನ್ನು ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಿ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಈ ಅಭ್ಯಾಸದಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್ ಸಡಿಲಗೊಂಡು ಹೃದಯದ ಮೇಲಿನ ಪೋರೆಯನ್ನು ತಗ್ಗಿಸಿ ಹೃದಯ ಸಂಬಂಧಿ ಖಾಯಿಲೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ. ಇದಕ್ಕೆ ಉದಾಹರಣೆ ಉತ್ತರ ಭಾರತದಲ್ಲಿ ಜನರು ಎಣ್ಣೆಗೆ ಬದಲಾಗಿ ಹೆಚ್ಚಾಗಿ ತುಪ್ಪವನ್ನೇ ಸೇವಿಸುತ್ತಾರೆ ಆದರಿಂದ ಹೃದಯಸಂಬಂಧಿ ಕಾಯಿಲೆಗಳು ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ.

ತುಪ್ಪದಿಂದ ಇನ್ನೂ ನೂರಾರು ಉಪಯೋಗಗಳು ಹೀಗಿವೆ ನೋಡಿ.

1. ಆಯುರ್ವೇದದ ಪ್ರಕಾರ ಖಾಳಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು. ಜೀವಕೋಶವನ್ನು ಪುನಃ ಚೈತನಗೊಲಿಸುತ್ತೆ.
2. ಚರ್ಮದ ಕಾಂತಿ ಹೆಚ್ಚುವುದು ಜೀವಕೋಶಗಳ ಪೋಷಣೆ ಮತ್ತು ಪುನರ್ಜೀವನ ಗೊಳಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುತ್ತದೆ ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ, ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
3. ಸೋರಿಯಾಸಿಸ್‍ನಂತಹ ಚರ್ಮ ರೋಗಗಳನ್ನು ಇದು ತಡೆಯುವುದು.
4. ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ ಆದರಿಂದ ಸಂಧಿವಾತವನ್ನು ತಡೆಯುತ್ತದೆ ಕೀಲುಗಳಿಗೆ ಉತ್ತಮ ಆರೈಕೆ ಮಾಡುತ್ತದೆ. ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡಬಹುದು
5. ತುಪ್ಪದ ಸೇವನೆಯಿಂದ ಆಸ್ಟಿಯೊಪೊರೋಸಿಸ್ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ.
6. ಮಿದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ,ಕಲಿಕೆ,ಜ್ಞಾನ ಗ್ರಹಣ ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ.
7. ಬುದ್ಧಿಮಾಂಧ್ಯತೆ ಅಲ್ಝಮೈರ್ ನಂತಹ ಕಾಯಿಲೆ ಬರದಂತೆ ತಡೆಯುವುದು.
8. ತೂಕ ಇಳಿಸುವುದು ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ 5-10 ಮಿಲಿಯಷ್ಟು ತುಪ್ಪವನ್ನು ಸೇವಿಸಿದರೆ ನಿಮ್ಮ ಚಯಾಪಚಯ ಕ್ರಿಯೆ ಸುಧಾರಣೆ ಕಾಣುತ್ತದೆ.
9. ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಅದು ಕೇಶರಾಶಿಯ ಸಂರಕ್ಷಣೆಗೆ ಸಹಾಯವಾಗುತ್ತದೆ. ಕೂದಲಿನ ಫೋಲಿಸೆಲ್ಸ್ ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ ಇದರಿಂದ ಹೊಳಪಿನಿಂದ ಕೂಡಿರುವ ದಟ್ಟವಾದ ಕೂದಲನ್ನು ನೀವು ಹೊಂದಬಹುದು.

Also read: ಹೃದಯಾಘಾತದಿಂದ ತಪ್ಪಿಸಿಕೊಂಡು ಲವಲವಿಕೆಯಿಂದಿರಲು ಇಲ್ಲಿವೆ ನೋಡಿ ಕೆಲವು ಸೂತ್ರಗಳು…!

10. ಲ್ಯಾಕ್ಟೋಸ್‍ಗಳನ್ನು ಸುಧಾರಿಸುತ್ತದೆ ಕೆಲವರಿಗೆ ಹಾಲು ಅಥವಾ ಹಾಲಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಸೇವಿಸದಾಗ ಸೂಕ್ತ ರೀತಿಯ ಜೀರ್ಣಕ್ರಿಯೆ ಉಂಟಾಗುವುದಿಲ್ಲ ಅದೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸ್ವೀಕರಿಸಿದರೆ ಲ್ಯಾಕ್ಟೋಸ್ ಸಮಸ್ಯೆಯು ಸುಧಾರಣೆ ಕಾಣುತ್ತದೆ. ಜೀರ್ಣ ಕ್ರಿಯೆಯೂ ಉತ್ತಮವಾಗುತ್ತದೆ.
11. ಆಯುರ್ವೇದದ ಪ್ರಕಾರ ತುಪ್ಪ ಕ್ಯಾನ್ಸರ್ ವಿರೋಧಿ ಲಕ್ಷಣವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಕ್ಯಾನ್ಸರ್ ನಿಂದ ದೂರ ಇಡುವುದು ನೈಸರ್ಗಿಕವಾದ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಯಿಂದ ದೂರ ಇರಬಹುದು.
12. ಮುಖದ ಕಾಂತಿಗೆ ಕಡ್ಲೆಹಿಟ್ಟು ಅಪ್ಪಟ ತುಪ್ಪ ಮಿಕ್ಸ್ಮಾಡಿ ಮುಖವನ್ನು ತಣ್ಣೀರಿನಿಂದ ತೊಳೆದುಕೊಂಡ ನಂತರ ಮುಖಕ್ಕೆ ತೆಳುವಾಗಿ ಹಚ್ಚಿಕೊಂಡು ಒಣಗಲು ಬಿಡಿ. ಒಣಗಿದ ಬಳಿಕ ಈ ಲೇಪನ ಬಿರಿಬಿಡಲು ಪ್ರಾರಂಭಿಸುತ್ತದೆ ಆಗ ಸೋಪು ಬಳಸದೆ ತಣ್ಣೀರಿನಿಂದ ತೊಳೆದುಕೊಳ್ಳಿ ಮುಖದ ತ್ವಚೆ ನೋಡಿ.