ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬ ವಿಚಾರಕ್ಕೆ ಕೊನೆಗೂ ದರ್ಶನ ಹೇಳಿಕೆ ನೀಡಿದ್ದಾರೆ ನೋಡಿ..!

0
658

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬ ವದಂತಿಗಳ ಕುರಿತಂತೆ ಕೊನೆಗೂ ದರ್ಶನ್ ಹೇಳಿಕೆ ನೀಡಿದ್ದಾರೆ.

ಇದೀಗ ತಮ್ಮ ರಾಜಕಿಯ ಎಂಟ್ರಿ ಬಗ್ಗೆ ಮಾಧ್ಯಮಗಳೊಂದಿಗೆ ಮಾತುಗಳನ್ನಾಡಿರುವ ದರ್ಶನ್, ತಮ್ಮ ರಾಜಕೀಯ ಪ್ರವೇಶವನ್ನು ತಳ್ಳಿಹಾಕಿದ್ದಾರೆ.

ಇದೇವೇಳೆ ರಾಜಕೀಯ ಸೇರುವ ಆಸಕ್ತಿ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಕಂಡ ಕಂಡವರಿಗೆ ಸಲಾಮು ಹೊಡೆಯಲು ನನಗೆ ಬರೋದಿಲ್ಲ, ಸಲಾಮು ಸಂಸ್ಕೃತಿಯನ್ನು ರಾಜಕಾರಣ ಒಳಗೊಂಡಿದೆ, ಹೀಗಾಗಿ ರಾಜಕಾರಣಕ್ಕೂ ನನಗೂ ಆಗಿಬರಲ್ಲ ಅಂತ ಖಡಕ್​ ಆಗಿ ಹೇಳಿದ್ರು.

ನನಗೆ ಈಗ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಹೋಗೋದಾದ್ರೆ ಎಲ್ಲರಿಗೂ ತಿಳಿಸುವೆ. ಗುಟ್ಟಾಗಿ ರಾಜಕೀಯಕ್ಕೆ ಹೋಗುವ ಅನಿರ್ವಾಯ ನನಗಿಲ್ಲ ಅಂತ ಹೇಳಿ ರಾಜಕೀಯ ಪ್ರವೇಶದ ಬಗೆಗಿನ ಎಲ್ಲಾ ವದಂತಿಗಳಿಗೆ ತೆರೆ ಎಳೆದ್ರು.

ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರು ಪ್ರತಿಕ್ರಿಯೆ ನೀಡಿ. ದರ್ಶನ್ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಸೇರ್ಪಡೆಗೊಳ್ಳುವುದು ಹಾಗೂ ಸೇರ್ಪಡೆಯಾಗದೆ ಇರುವುದು ಅವರ ವೈಯಕ್ತಿಯ ವಿಚಾರ. ಈ ಬಗ್ಗೆ ದರ್ಶನ್ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಅವರ ತಾಯಿ ಹೇಳಿದ್ದಾರೆ.