12ಗಂಟೆ ಕೆಲ್ಸ ಮಾಡಲು ಗುಲಾಮರಲ್ಲ : ಆರ್‍ಬಿಐ ನೋಟ್ ಮುದ್ರಣಕಾರರು!

0
1800

ಆರ್‍ಬಿಐನ ಸಾಲ್ಬೋನಿಯ ನೋಟು ಮುದ್ರಣ ಕಾರ್ಯಲಯದಲ್ಲಿ ಕೆಲಸ ಮಾಡುವ ನೌಕರರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ದಿನದ 12 ಗಂಟೆ ಕೆಲಸ ಮಾಡಲು ನಾವು ಗುಲಾಮರಲ್ಲ ಅಂತಾ ಹೇಳಿದ್ದಾರೆ.

ಡಿಸೆಂಬರ್ 14ರ ಬಳಿಕ 9 ಗಂಟೆಗೂ ಹೆಚ್ಚು ಕೆಲಸ ಮಾಡಿ ಅನೇಕ ನೌಕರರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಇನ್ನ್ಮುಂದೆ ಓವರ್ ಟೈಮ್ ಕೆಲಸ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ನವೆಂಬರ್ 8 ರಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಮೈಸೂರು ಮತ್ತು ಸಾಲ್ಬೋನಿ ಮುದ್ರಾಲಯದ ನೌಕರರು ಪ್ರತಿನಿತ್ಯ 12 ಗಂಟೆ ಕೆಲಸ ಮಾಡುತ್ತಿದ್ದು, ಪ್ರತಿ ದಿನ ಅಂದಾಜು 9.6 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಈ ಮೂಲಕ ಆರ್‍ಬಿಐ ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ನೋಟುಗಳನ್ನು ಪ್ರಿಂಟ್ ಮಾಡಲು ಪ್ರಯತ್ನಿಸುತ್ತಿದೆ.

demonetisation-printing-rs-2000-note

ದಿನದ 12 ಗಂಟೆಯ ಬದಲು 9 ಗಂಟೆಗಳ ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೆ ಒಟ್ಟು 6.8ಕೋಟಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗುತ್ತದೆ. ಆದ್ರೆ ದಿನಪೂರ್ತಿ ದುಡಿಯಲು ನಾವು ರೋಬೊಟ್‍ಗಳಲ್ಲ. 12 ಗಂಟೆ ಕೆಲಸ ಮಾಡುವುದು ದೇಶಕ್ಕೆ ಒಳ್ಳೆಯದಾಗುತ್ತದೆ ಅಂತಾ ಹೇಳ್ಬೋದು. ಆದ್ರೆ ನಾವು ಮನುಷ್ಯರು, ನಮಗೂ ವಿಶ್ರಾಂತಿ ಬೇಕು, ನಮ್ಮ ಕುಟುಂಬಕ್ಕೂ ಕೆಲ ಸಮಯ ನೀಡುವ ಅವಶ್ಯಕತೆ ಇದೆ ಅಂತಾ ಮುದ್ರಣ ನೌಕರರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.