ಹಣ ವಿನಿಮಯದ ಬಳಿಕ ಬೆರಳಿಗೆ ಶಾಹಿ ಹಚ್ಚಲು ಕೇಂದ್ರ ಸರ್ಕಾರ ಸೂಚನೆ

0
598

ದೆಹಲಿ: ದೆಹಲಿಯಲ್ಲಿ ಈ ಕುರಿತು ಶಶಿಕಾಂತ್ ದಾಸ್ ಹೇಳಿಕೆ ನೀಡಿದ್ದು, ಬ್ಯಾಂಕ್, ಅಂಚೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, 500 ರೂ ಮತ್ತು 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಂಡವರ ಕೈ ಬೆರಳಿಗೆ ಶಾಯಿ ಹಾಕಬೇಕು.

500 ರೂ ಮತ್ತು 1000 ರೂ ನೋಟುಗಳ ಬದಲಾವಣೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯುವ ಸಲುವಾಗಿ ಒಂದು ಬೆರಳಿಗೆ ಶಾಯಿ ಹಚ್ಚಲು ಸೂಚನೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸೂಚಿಸಿದ್ದಾರೆ ಎನ್ನಲಾಗಿದೆ. ಕಪ್ಪು ಹಣ ಹೊಂದಿರುವವರು ಸಮಾನ್ಯ ಜನರನ್ನು ಬಳಸಿ ಕೊಳ್ಳುತ್ತಿದ್ದಾರೆ. ಹಾಗೂ ಒಂದು ಬಾರಿ ಹಣವನ್ನು ವಿನಿಮಯ ಮಾಡಿಕೊಂಡವರು ಮತ್ತೆ ಹಣ ಬದಾಲಾವಣೆಗೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ದುರುಪಯೋಗವಾಗುತ್ತಿದೆ ಈ ಕಾರಣದಿಂದಾಗಿ ಅಕ್ರಮ ಹಣ ಬದಲಾವಣೆ ತಡೆಗೆ ಹೊಸ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ದೆಹಲಿಯಲ್ಲಿ ಈ ಕುರಿತು ಶಶಿಕಾಂತ್ ದಾಸ್ ಹೇಳಿಕೆ ನೀಡಿದ್ದು, ಬ್ಯಾಂಕ್, ಅಂಚೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, 500 ರೂ ಮತ್ತು 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಂಡವರ ಕೈ ಬೆರಳಿಗೆ ಶಾಯಿ ಹಾಕಬೇಕು.

ಈ ಮೂಲಕ ಒಬ್ಬರೇ ಹಲವು ಬಾರಿ ನೋಟು ಬದಲಾವಣೆ ಮಾಡುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಒಬ್ಬರಿಗೆ ಒಂದು ಬ್ಯಾಂಕ್ ನಲ್ಲಿ ಬಿರಿ ನಾಲ್ಕು ಸಾವಿರ ರೂ. ಮಾತ್ರ ಬದಲಾವಣೆ ಕೊಡಲಾಗಿದೆ. ಇದರಿಂದ ಜನಸಾಮನ್ಯರಿಗೆ ತುಂಬಾ ತೊಂದರೆ ಉಂಟಾಗಲಿದೆ.

ಒಂದು ಕಡೆ ಬ್ಯಾಂಕ್ ಮತ್ತು ಎಟಿಎಂ ಮುಂದೆ ಜನ ಸೇರಿದ್ದು, ಇಂತಹ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಮಧ್ಯಮ ವರ್ಗದವಿರಿಗೆ ಮತ್ತೊಮ್ಮೆ ಗಾದ ಪ್ರಾಹಾರ  ಹಾಗೇ ಆಗಿದೆ.