ಜನಸಾಮಾನ್ಯರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬಿಗ್ ರಿಲೀಫ್

0
849

ಫೆ.1ರಿಂದ ATMನಿಂದ ಹಣ ವಿತ್ ಡ್ರಾ ಮಾಡಲು ನಿರ್ಬಂಧವಿಲ್ಲ..

ಫೆಬ್ರವರಿ 1ರಿಂದ ಆರ್ ಬಿ ಐ, ಎಟಿಎಂನಿಂದ ಹಣ ವಿತ್ ಡ್ರಾ ಮೇಲೆ ಹೇರಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಕರೆಂಟ್ ಅಕೌಂಟ್, ಕ್ಯಾಶ್ ಕ್ರೆಡಿಟ್ ಅಕೌಂಟ್ ಮತ್ತು ಓವರ್ ಡ್ರಾಫ್ಟ್ ಅಕೌಂಟ್ ಗಳಿಂದ ಹಣ ವಿತ್ ಡ್ರಾಗೆ ಹೇರಿದ್ದ ನಿರ್ಬಂಧವನ್ನು ಈಗಾಗ್ಲೇ ತೆರವು ಮಾಡಿರೋದಾಗಿ ಆರ್ ಬಿ ಐ ತಿಳಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಅಷ್ಟೇ ಅಲ್ಲ ನಿಷೇಧಿತ ನೋಟುಗಳ ಒಟ್ಟಾರೆ ಸಂಖ್ಯೆಯ ಶೇ.60ರಷ್ಟು ಅಂದ್ರೆ 9.2 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳನ್ನು ಈಗಾಗ್ಲೇ ಬ್ಯಾಂಕ್ ಗಳಿಗೆ ವಿತರಿಸಿರುವುದಾಗಿ ಆರ್ ಬಿ ಐ ಹೇಳಿದೆ.

500 ಮತ್ತು 1000 ರೂಪಾಯಿ ನೋಟು ನಿಷೇಧದ ಬಳಿಕ ಹಣ ವಿತ್ ಡ್ರಾ ಮೇಲೆ ಆರ್ ಬಿ ಐ ನಿರ್ಬಂಧ ಹೇರಿತ್ತು. ಕರೆಂಟ್ ಅಕೌಂಟ್ ಹೊಂದಿರುವವರಿಗೆ ದಿನಕ್ಕೆ 50,000 ರೂಪಾಯಿ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಬಳಿಕ ಈ ಮಿತಿಯನ್ನು 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿತ್ತು. ಈಗ ಬುಧವಾರದಿಂದ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಒಂದು ಬಾರಿಗೆ ಕೇವಲ 10,000 ರೂಪಾಯಿ ಮಾತ್ರ ವಿತ್ ಡ್ರಾ ಮಾಡಬೇಕೆಂಬ ಅನಿವಾರ್ಯತೆಯಿಲ್ಲ. ಒಮ್ಮೆಲೇ ಅವರು ಎಟಿಎಂನಿಂದ 24,000 ರೂಪಾಯಿ ವಿತ್ ಡ್ರಾ ಮಾಡಬಹುದು. ಆದ್ರೆ ವಾರಕ್ಕೆ 24,000 ರೂಪಾಯಿ ಮಾತ್ರ ಪಡೆಯಬಹುದು.