ಹೊಸ ನೋಟುಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ 8 ವಿಚಾರಗಳು…

0
2003

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದೇಶದಲ್ಲಿ ಕಪ್ಪು ಹಣದ ಚಲಾವಣೆ ಮಿತಿ ಮೀರಿತ್ತು. ಕೊನೆಗೆ ಒಂದು ನಿರ್ಧಾರಕ್ಕೆ ಬಂದ ಪ್ರಧಾನಿ ಮೋದಿಯವರು ಕಪ್ಪು ಕುಳಗಳ ವಿರುದ್ಧ ಸಮರಕ್ಕೆ ನಿಂತರು. ಅದು ಹೇಗಿತ್ತು ಅಂದ್ರೆ ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲೇ ಕಪ್ಪು ಉಗ್ರ ಹಣದ ವಿರುದ್ಧ ನಡೆಯಿತು.ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ಅಚ್ಚರಿಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದೆ.

ಆದರೆ ಎಷ್ಟೋ ಜನಕ್ಕೆ ಹೊಸ ನೋಟುಗಳ ಬಗ್ಗೆ ತಿಳಿದೇ ಇಲ್ಲ!! ಹಾಗಾದ್ರೆ ತಿಳಿದುಕೊಳ್ಳಲು ಇದನೊಮ್ಮೆ ಓದಿ.

ನೋಟಿನ ವಿಶೇಷತೆಗಳು :

1  ಬಲಭಾಗದ ಅಂಚಿನಲ್ಲಿ ರಾಷ್ಟ್ರಲಾಂಛನವಿದೆ. ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಬೆಳಕಿನಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತೆ. ಅಂಧರಿಗೂ ನೋಟಿನ ಮೌಲ್ಯ ಅರ್ಥವಾಗಲು ಬ್ರೈಲ್ ಲಿಪಿ ಬಳಕೆ ಮಾಡಲಾಗಿದೆ.

2  ಎತ್ತರ 66 ಮಿಮಿ, ಅಗಲ 166 ಮಿಮಿ, ಬಣ್ಣ-ಗುಲಾಬಿ. ಎಡಭಾಗದಲ್ಲಿ ಹಿಂದಿ ಹಾಗೂ ಬಲಭಾಗದಲ್ಲಿ ಆಂಗ್ಲ ಸಂಖ್ಯೆಯಲ್ಲಿ ರೂಪಾಯಿ ಬರಹವಿದೆ.

2000-note-a

3  ಎಡಭಾಗದಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವಿದ್ದು, ನಡುಭಾಗದಲ್ಲಿ ಆರ್‍ಬಿಐ ಗವರ್ನರ್ ಸಹಿ ಇದೆ.

4  ನೋಟುಗಳನ್ನು ನಕಲು ಮಾಡದೆ ಇರುವ ರೀತಿಯಲ್ಲಿ ನೋಟುಗಳನ್ನು ಸಿದ್ದಪಡಿಸಲಾಗಿದೆ, ಇದರಿಂದ ಖೋಟ ನೋಟಿನ ಆವಳಿ ತಪ್ಪಿಸಬಹುದು.

500-new-note

5  ನೋಟಿನ ಹಿಂಭಾಗದಲ್ಲಿ ಮಂಗಳ ಗ್ರಹಕ್ಕೆ ರವಾನಿಸಲಾದ ಭಾರತದ ಉಪಗ್ರಹದ ಚಿತ್ರವಿದೆ.

500-new-note-b

7  ಸ್ವಚ್ಛಭಾರತದ ಲಾಂಛನ ಹಾಗೂ ಘೋಷವಾಕ್ಯವಿದೆ, ಜೊತೆಗೆ ಕನ್ನಡ ಸೇರಿ ಒಟ್ಟು 15 ಭಾಷೆಗಳಲ್ಲಿ ರೂಪಾಯಿ ಬರಹವಿದೆ.

8  500 ರೂ ನೋಟಿನ ಹಿಂಭಾಗದಲ್ಲಿ ಕೆಂಪುಕೋಟೆಯ ಚಿತ್ರವಿದೆ.