ಲೋಕಸಭಾ ಚುನಾವಣೆ ದಿನಾಂಕ ಘೋಷಣೆ; whatsapp, facebook, ಟ್ವೀಟ್, ಗಳಲ್ಲಿ ಎಲೆಕ್ಷನ್​​ ಪ್ರಚಾರ ಮಾಡಿದ್ರೆ ಜೈಲು ಪಕ್ಕಾ..

0
282

ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಅದರಂತೆ ನೀತಿ ಸಂಹಿತೆ ಜಾರಿಯಾಗಿದೆ. ಇದರನ್ವಯ ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳ ಮೇಲೂ ಆಯೋಗ ನಿಯಂತ್ರಣ ಹೇರಿದೆ. ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದು. ಒಂದು ಆದೇಶವನ್ನು ಹೊರಡಿಸಿ ಫೆಸ್‍ಬುಕ್, ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತುಗಳನ್ನು ಪ್ರಕಟಿಸಬೇಕಾದರೂ ಆಯೋಗದ ಪೂರ್ವಾನುಮತಿ ಪಡೆಯಬೇಕು.

Also read: ಮಂಡ್ಯದ ಸೊಸೆ ಸುಮಲತಾರವರಿಗೆ ಅವಮಾನ ಮಾಡಿದ ರೇವಣ್ಣ; ಇತ್ತ ಕಾಂಗ್ರೆಸ್-ನಿಂದಲೂ ಟಿಕೆಟ್ ಸಿಗದ ಸುಮಲತಾ ಬಿ.ಜೆ.ಪಿ. ಗೆ ಸೇರಬೇಕಾ??

ಏನಿದು ಆದೇಶ?

ಏನಿದು ಆದೇಶ?

ಫೇಸ್​​​ಬುಕ್​ ಟ್ವೀಟ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕು, ಮತ್ತು ಜಾಲತಾಣಗಳ ಬಳಕೆಯ ಕರ್ಚು ವೆಚ್ಚಗಳನ್ನು ಕೂಡ ಆಯೋಗದ ಮಿತಿಗೊಳಿಸಿದ ಹಣದಲ್ಲಿ ಮಾಡಬೇಕು ಒಂದು ವೇಳೆ ನೀವು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡಿದ್ದಲ್ಲಿ, ಜೈಲು ಕಂಬಿ ಎಣಿಸೋದು ಗ್ಯಾರಂಟಿ ಎನ್ನಲಾಗಿದೆ. ಈಗಾಗಲೇ ಅದರಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಪ್ರಚಾರ ಮಾಡುವಂತಿಲ್ಲ. ವ್ಯಕ್ತಿಯ ಜನಾಂಗಿಯ ನಿಂದನೆ ಮತ್ತು, ವಯಕ್ತಿಕವಾಗಿ ಟಿಕೆ ಮಾಡಿ ಅಪಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಅಂಥವರ ಮೇಲೆ ಕ್ರಮಕ್ಕೆ ಮುಂದಾಗಬಹುದು ಎಂಬುದನ್ನು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ನೀತಿ ಸಂಹಿತೆಯ ಪ್ರಕಾರ ಅಭ್ಯರ್ಥಿ ಪರ ವೈಯಕ್ತಿಕವಾಗಿ ನಡೆಸಲಾಗುವ ಪ್ರಚಾರದ ಮೇಲೂ ಚುನಾವಣಾ ಆಯೋಗ ಕಣ್ಣಿರಿಸಲಿದೆ. ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್, ಗೂಗಲ್, ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಲಾಗುತ್ತಿದೆ ಎಂದು ಅವರು ಹೇಳಿದರು. ಚುನಾವಣಾ ನೀತಿ ಸಂಹಿತೆಯಡಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಅನ್ವಯವಾಗುವ ಷರತ್ತು, ಕಾನೂನು ಸಾಮಾಜಿಕ ಜಾಲತಾಣಕ್ಕೂ ಅನ್ವಯವಾಗಲಿದೆ. ಹಾಗಾಗಿ ಅಭ್ಯರ್ಥಿ ಪರ ನಡೆಸಲಾಗುವ ಪ್ರಚಾರಕ್ಕೆ ನೇರವಾಗಿ ಅಭ್ಯರ್ಥಿ ಹೊಣೆಯಾಗುತ್ತಾರೆ. ಆ ಪ್ರಚಾರದ ಖರ್ಚು ವೆಚ್ಚವೂ ಸಂಬಂಧಪಟ್ಟ ಅಭ್ಯರ್ಥಿಯ ಖಾತೆಗೆ ಸಂಬಂಧಿಸಿದ್ದಾಗಿರುತ್ತದೆ.

Also read: ಕೇಂದ್ರ ಸರ್ಕಾರದಿಂದ ನೌಕರರ ವರ್ಗಕ್ಕೆ ಮತ್ತೊಂದು ಗಿಫ್ಟ್; ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿ ಹೆಚ್ಚಳ..

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ:

ಚುನಾವಣಾ ಆಭ್ಯರ್ಥಿಗಳು ಯಾವುದೇ ರೀತಿಯ ರಾಜಕೀಯ ಜಾಹಿರಾತು ನೀಡಬೇಕಾದರೂ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆಯಬೇಕು. ಸಾಮಾಜಿಕ ಜಾಲ ತಾಣಗಳ ಮೇಲೆ ತೀವ್ರ ನಿಗಾವಹಿಸಲಾಗುವುದು.ಫೆಸ್‍ಬುಕ್, ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತುಗಳನ್ನು ಪ್ರಕಟಿಸಬೇಕಾದರೂ ಆಯೋಗದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿದರು. ದ್ವೇಷದ ಭಾಷಣ ಮತ್ತು ವದ್ಧಂತಿಗಳ ವಿರುದ್ಧ ಸ್ಥಳೀಯಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೆ.

ಯಾವುದೇ ವ್ಯಕ್ತಿಯು ಅಭ್ಯರ್ಥಿ ಪರ ಪ್ರಚಾರ ಮಾಡಿ ಸಂದೇಶ ರವಾನಿಸಿದಾಗ ಅದು ತನಗೆ ಗೊತ್ತಿಲ್ಲ, ನನ್ನ ಅರಿವಿಗೆ ಬಾರದೆ ಪ್ರಚಾರ ಮಾಡಿದ್ದಾರೆಂಬ ಹೇಳಿಕೆಯನ್ನು ಅಭ್ಯರ್ಥಿ ನೀಡಿದ್ದಲ್ಲಿ ಪ್ರಚಾರ ಮಾಡಿದವರೇ ಕಾನೂನಿನಡಿ ಅಪರಾಧಿಗಳಾಗುತ್ತಾರೆ. ಹಾಗಾಗಿ ಅಭ್ಯರ್ಥಿ ಅನುಮತಿ ಇಲ್ಲದೆ ವೈಯಕ್ತಿಕವಾಗಿಯೂ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಚುನಾವಣಾ ನೀತಿ ಸಂಹಿತೆಯಡಿ ಅಪರಾಧವಾಗಿದೆ ಎಂದು ಹೇಳಿದ್ದಾರೆ.

Also read: ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳಿಗೂ ಸಹ ಪಾರ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದ್ದರೂ ಸಹ ದೇವೇಗೌಡರು ಹೇಳುತ್ತಾರೆ “ನಾನು ಕುಟುಂಬ ರಾಜಕಾರಣ ಮಾಡಿಲ್ಲ” ಇವರ ಮಾತನ್ನು ನಂಬುತ್ತೀರಾ??

ದೂರು ನೀಡಲು ಮೊಬೈಲ್ ಆ್ಯಪ್;

ಎಲ್ಲಾ ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ನೀತಿ ಸಂಹಿತೆಯನ್ನು ಅನುಸರಿಸಲೇಬೇಕು. ಒಂದು ವೇಳೆ ಯಾರಾದರೂ ಉಲ್ಲಂಘಿಸಿದರೆ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಹಾಗೂ ಹಣ ಹಂಚಿಕೆ ಬಗ್ಗೆ ನೇರವಾಗಿ ಆಯೋಗಕ್ಕೆ ದೂರು ನೀಡಬಹುದು. ದೂರು ನೀಡಲು ಆಯೋಗ 1950 ಸಹಾಯವಾಣಿ ಹಾಗೂ ಮೊಬೈಲ್ ಆ್ಯಪ್ ಆರಂಭಿಸಿದೆ. ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು.