ಕುಡಿತದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ, ಇದಕ್ಕೆ ಕಾರಣವಾಗಿರುವ ಬಾರ್-ಗಳಿಗೆ ದೇವರ ಹೆಸರು ಇಡುವುದನ್ನು ಬ್ಯಾನ್ ಮಾಡಿದ ಸರ್ಕಾರದ ನಡೆ ಸರಿಯೇ??

0
212

ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ಬಾರ್ ಮತ್ತು ಬಾರ್ ಮತ್ತು ರೆಸ್ಟೋರೆಂಟ್’ಗಳ ನಾಮಕ ಕುರಿತು ಬಹು ದಿನಗಳಿಂದ ಚರ್ಚೆಗಳು ಶುರುವಾಗಿತ್ತು, ಅದಕ್ಕೆ ಸರ್ಕಾರ ಈಗ ಗಂಭೀರ ಚಿಂತನೆ ನಡೆಸಿದ್ದು ಮದ್ಯ ಮಾರಾಟ ಮಳಿಗೆಗಳಿಗೆ ದೇವರ ಹೆಸರು ನಾಮಕರಣ ಮಾಡದಂತೆ ನಿಷೇಧ ಹೇರಲು ತಯಾರಿ ನಡೆಸಿದೆ. ಈ ವಿಚಾರ ಹರಡುತ್ತಿದ್ದಂತೆ ಭಾರಿ ಚರ್ಚೆ ನಡೆಯುತ್ತಿದ್ದು. ಮದ್ಯ ನಿಷೇಧ ಮಾಡುವ ನಿರ್ಧಾರ ಮಾಡಿದರೆ ಒಳ್ಳೆಯದು. ಆದರೆ ದೇವರ ಹೆಸರು ನಿಷೇದ ಮಾಡಿದರೆ ಎಷ್ಟೊಂದು ಒಳ್ಳೆಯದಾಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Also read: ಅನರ್ಹ ಶಾಸಕರಿಗಾಗಿ ಉಪಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಸುಪ್ರೀಂಕೋರ್ಟ್; ಅನರ್ಹ ಶಾಸಕರಿಗೆ ಹೆಚ್ಚಿದ ಸಂಕಷ್ಟ.!

ಬಾರ್​​​ಗಳಿಗೆ ದೇವರ ಹೆಸರು ಇಡುವಂತಿಲ್ಲ?

ಹೌದು ಹಲವು ಕಡೆಯಲ್ಲಿ ಮದ್ಯದ ಅಂಗಡಿಗೆ ದೇವರ ಹೆಸರಿಡುವುದು ನಡೆಯುತ್ತಾನೆ ಇದೆ. ಇದಕ್ಕೆ ಬಹುದಿನಗಳಿಂದ ವಿರೋಧ ಕೂಡ ಇತ್ತು, ಈ ಕುರಿತು ಬಾರ್‌ಗಳಿಗೆ ಸರ್ಕಾರವು ಹೊಸ ಸೂಚನೆ ನೀಡಿದ್ದು. ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಮದ್ಯ ಮಾರಾಟ ಮಳಿಗೆಗಳಿಗೆ ದೇವರ ಹೆಸರು ನಾಮಕರಣ ಮಾಡದಂತೆ ನಿಷೇಧ ಹೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮದ್ಯ ಮಾರಾಟ ಕೇಂದ್ರಗಳ ನಾಮಫಲಕಗಳಿಂದ ದೇವರ ಹೆಸರು ತೆರವುಗೊಳಿಸುವ ಕುರಿತು ಕಾನೂನು ಮತ್ತು ಅಬಕಾರಿ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Also read: ಕರ್ನಾಟಕ ಕ್ರಿಕೆಟ್-ಗೆ ಕರಾಳ ದಿನ; ಫಿಕ್ಸಿಂಗ್ ಆರೋಪ ಹೊತ್ತು ಸಿ.ಎಂ.ಗೌತಮ್, ಅಬ್ರಾರ್ ಕಾಝಿ ಸೇರಿದಂತೆ ೭ ಜನ ಅರೆಸ್ಟ್!

ಸಾಕಷ್ಟು ಬಾರ್ ಅಥವಾ ಮದ್ಯ ಮಾರಾಟ ಕೇಂದ್ರಗಳಿಗೆ ಮಹಾ ಗಣಪತಿ, ರಾಘವೇಂದ್ರ, ಮಂಜುನಾಥ, ವೆಂಕಟೇಶ ಎಂಬಿತ್ಯಾದಿ ದೇವರ ಹೆಸರುಗಳನ್ನು ಇಡಲಾಗಿರುತ್ತದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ ದೇವರಿಗೆ ಅಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಇನ್ನು ಮುಂದೆ ಬಾರ್ ಗಳಿಗೆ ದೇವರ ಹೆಸರು ಇಡದಂತೆ ನಿಷೇಧ ಹೇರಲು ಹಾಗೂ ಹಾಲಿ ಇರುವ ಹೆಸರುಗಳನ್ನು ತೆಗೆಸಿಹಾಕಲು ಸಂಬಂಧ ಪಟ್ಟ ಕಾಯ್ದೆಗೆ ತಿದ್ದುಪಡಿ ಮಾಡಲು ಇಲಾಖೆ ಚಿಂತನೆ ನಡೆಸಿದೆ.

ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಬಳಿಯಿರುವ ಬಾರ್ ಮಾಲೀಕ ಮಂಜುನಾಥ್ ಮಾತನಾಡಿ, ಬಾರ್’ಗೆ ನನ್ನ ಹೆಸರನ್ನೇ ಇಡಲಾಗಿದೆ. ನನ್ನ ಹೆಸರು ದೇವರ ಹೆಸರೂ ಕೂಡ ಹೌದು. ಬಾರ್ ಹೆಸರು ಎಲ್ಲರಿಗೂ ಚಿರಪರಿಚಿತವನಾಗಿದೆ. ಹೆಸರು ಬದಲಾವಣೆ ಮಾಡುವ ಚಿಂತನೆ ಉತ್ತಮ ಆಲೋಚನೆಯಲ್ಲ ಎಂದು ಹೇಳಿದ್ದಾರೆ. ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ದುರ್ಗಾ ವೈನ್ ಶಾಪ್ ಮಾಲೀಕ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಬಾರ್’ಗೆ ದೇವರ ಹೆಸರನ್ನಿಡಲಾಗಿದೆ. ನಮ್ಮ ಮನೆಯ ದೇವರ ಹೆಸರನ್ನು ಇಡಲಾಗಿದೆ. ವ್ಯವಹಾರ ಉತ್ತಮವಾಗಿ ನಡೆಯುವ ಸಲುವಾಗಿ ಇಟ್ಟಿದ್ದೇವೆ.

Also read: ಕ್ಯಾನ್ಸರ್ ಖಾಯಿಲೆಯ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕಾಗಿರುವುದರಿಂದ ಅನೇಕ ಕುಟುಂಬಗಳು ಸಾಲಬಾಧೆಗೆ ಒಳಗಾಗುತ್ತಿದ್ದಾರೆ ಇದನ್ನು ತಪ್ಪಿಸಲು ಈ ಕೂಡಲೇ LICಯ ಈ ವಿಮೆಯನ್ನು ಮಾಡಿಸಿ!!

ಇದೇ ಹೆಸರಿನಲ್ಲೇ ಜನರು ನಮ್ಮ ಅಂಗಡಿಯನ್ನು ಗುರ್ತಿಸುತ್ತಿದ್ದಾರೆ. ಸರ್ಕಾರ ನಿಯಮ ಬದಲಿಸಿದರೆ ಅದು ನಮ್ಮ ಭಾವನೆಗಳಿಗೂ ನೋವುಂಟು ಮಾಡುತ್ತದೆ. ಪರವಾನಗಿ ಕೊಡುವಾಗ ನಮಗೆ ಇಂತಹ ಯಾವುದೇ ನಿಯಮಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಮದ್ಯದಂಗಡಿಗಳಲ್ಲಿ ದೇವರ ಹೆಸರಿದ್ದರೆ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ ದೇವರಿಗೆ ಅಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಇನ್ನುಮುಂದೆ ಬಾರ್‌ಗಳಿಗೆ ದೇವರ ಹೆಸರು ಇಡದಂತೆ ನಿಷೇಧ ಹೇರಲು ಹಾಗೂ ಹಾಲಿ ಇರುವ ಹೆಸರುಗಳನ್ನು ತೆಗೆಸಿ ಹಾಕಲು ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ನಿಮ್ಮ ಅಭಿಪ್ರಾಯ?