ಜನಸಂಖ್ಯೆ ಹಾಗೂ ಸೌಲಭ್ಯಗಳು ಹೆಚ್ಚಾಗುತ್ತಾ ಹೋದಂತೆ ಮತ್ತಷ್ಟು ಉತ್ತಮ ಸೌಕರ್ಯಗಳನ್ನು ನೀಡಲು ಸರ್ಕಾರಗಳು ಮುಂದಾಗುತ್ತಿವೆ. ಸದ್ಯ ವೈಟ್ ಟಾಪಿಂಗ್ ರಸ್ತೆಯನ್ನಾಗಿಸುವ ಸಲುವಾಗಿ ನೃಪತುಂಗ ರಸ್ತೆಯನ್ನು ೪೫ ದಿನಗಳ ಕಾಲ ಸಂಚಾರಕ್ಕೆ ನಿರ್ಭಂದ ಹೇರುವ ಚಿಂತನೆಯನ್ನು ಬಿಬಿಎಂಪಿ ನಡೆಸಿದೆ.
ಈ ಯೋಜನೆ ಜಾರಿಯಾದಲ್ಲಿ ಸಂಚಾರ ದಟ್ಟಣೆ ಇನ್ನು ಹೆಚ್ಚಾಗುತ್ತದೆ. ಹೊಸ ವ್ಯವಸ್ಥೆಯನ್ನು ಅಳವಡಿಸಲು ರಸ್ತೆಯಲ್ಲಿ ಸಂಚಾರಕ್ಕೆ ಬ್ರೇಕ್ ಹಾಕುವದರಿಂದ ವಿಧಾನಸೌಧ, ಮೆಜೆಸ್ಟಿಕ್, ಅರಮನೆ, ರಸ್ತೆಯಂತಹ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಂಭವವಿದೆ. ಈ ರಸ್ತೆಯ ಬದಲು ಕಬ್ಬನ್ ಪಾರ್ಕ್ ಒಳಗಿನಿಂದ ಸಂಚಾರಕ್ಕೆ ಅನುವು ನೀಡಬೇಕೆಂದು ತೋಟಗಾರಿಕಾ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಬಿಬಿಎಂಪಿ ಕೆ.ಆರ್ ಸರ್ಕಲ್ನಿಂದ ಕಾರ್ಪೋರೇಷನ್ ವರೆಗೂ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲು ೪೫ ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದೆ.
ಈ ಮೊದಲು ಹಡ್ಸನ್ ಸರ್ಕಲ್ನಿಂದ ಕಸ್ತೂರಿ ಬಾ ರಸ್ತೆಯನ್ನು 2.40ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗಿತ್ತು. ಆದರೆ ಇಲ್ಲಿ ರಸ್ತೆಗಳು ಅಗಲವಾಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆದರೆ ನೃಪತುಂಗ ರಸ್ತೆ ವಿಸ್ತೀರ್ಣದಲ್ಲಿ ಕಡಿಮೆಯಿದ್ದು, ಕಾಮಗಾರಿಯಿಂದವಾಹನ ಸವಾರರಿಗೆ ಮತ್ತಷ್ಟುಕಿರಿ ಕಿರಿಯಾಗಲಿದೆ.
ವೈಟ್ ಟಾಪಿಂಗ್ ಎಂದರೇನು?
ಕಡಿಮೆ ನಿರ್ವಹಣೆ ಹಾಗೂ ದೀರ್ಘ ಬಾಳಿಕೆ, ಹೆಚ್ಚು ಒತ್ತಡ ತಡೆಯುವ ಸಾಮರ್ಥ್ಯ ಈ ರಸ್ತೆಗೆ ಇರುತ್ತದೆ. ಡಾಬಂರ್ ರಸ್ತೆಯ ಮೇಲೆ ಸಿಮೆಂಟ್ ಕಾಂಕ್ರಿಟ್ ಪದರ ನಿರ್ಮಾಣ ಮಾಡುವದೇ ಇದರ ಉದ್ದೇಶವಾಗಿದೆ.
ದೀರ್ಘ ಬಾಳಿಕೆ: ಈ ರಸ್ತೆಗಳು ದೀರ್ಘ ಬಾಳಿಕೆ ಬರುತ್ತವೆ. ೧೯೩೯ರಲ್ಲಿ ಮುಂಬೈನ್ ಮರಿನಾ ಡ್ರೈವ್ನಲ್ಲಿ ನಿರ್ಮಿಸಿದ ರಸ್ತೆ ಇನ್ನು ಉತ್ತಮವಾಗಿದೆ. ಅಲ್ಲದೆ ತಮಿಳುನಾಡಿನಲ್ಲಿ ಜಲಪ್ರಳಯವಾದಾಗ ಕಾಂಕ್ರೆಟ್ ರಸ್ತೆಗಳಿಗೆ ಏನು ಹಾನಿಯಾಗರಲಿಲ್ಲ.