ನುಗ್ಗೆ ಗಿಡದ ಹೂವಿನ ವಿಶೇಷ

0
1722

ನುಗ್ಗೆ ಗಿಡದಲ್ಲಿ ಎಷ್ಟೋ ಔಷಧೀಯ ಗುಣಗಳಿವೆ. ಆದರೆ ನಮಗೆ ಎಲೆಗಳಿಗಿಂತ ನುಗ್ಗೆಕಾಯಿಯನ್ನು ಹೆಚ್ಚು ಬಳಸುತ್ತವೆ. ನುಗ್ಗೆಕಾಯಿಯ ಜೊತೆಗೆ ಅದರ ಹೂವು, ಕಾಂಡ, ಬೇರು ಭಾಗಗಳಲ್ಲಿ ತುಂಬಾ ಔಷಧೀಯ ಗುಣಗು ಬಹಳಷ್ಟು ಪ್ರಮಾಣದಲ್ಲಿವೆ. ನುಗ್ಗೆ ಗಿಡದ ಹೂವಿನಲ್ಲಿ ವಿಟಮಿನ್ ಎ, ಸಿ, ಗಳ ಜೊತೆಗೆ ಕ್ಯಾಲ್ಸಿಯಂ ಹೆಚ್ಚಾಗಿದೆ.


ದಿನನಿತ್ಯದ ಜೀವನದಲ್ಲಿ ಎದುರಾಗುವ ಅನೇಕ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ನುಗ್ಗೆ ಗಿಡದ ಹೂವಿನಲ್ಲಿದೆ. ಶರೀರದ ನೂರಾರು ಕಾಯಿಲೆಗಳು ನುಗ್ಗೆಕಾಯಿ ಗಿಡದ ಹೂವಿನಿಂದ ಗುಣವಾಗುತ್ತವೆ. ಆರೋಗ್ಯವಾಗಿ ಜೀವಿಸಲು ಬೇಕಾಗುವ ಎಲ್ಲಾ ಪೋಷಕಾಂಶಗಳು ಇದರಲ್ಲಿವೆ.

ಎಲ್ಲದಕ್ಕಿಂತಲ್ಲೂ ಮುಖ್ಯವಾಗಿ ಲೈಂಗಿಕ ಸಮಸ್ಯೆಗಳಿಗೆ ನುಗ್ಗೆಕಾಯಿಯ ಗಿಡ ದಿವ್ಯೌಷಧಿಯಾಗಿ ಕೆಲಸ ಮಾಡುತ್ತದೆ. ಅಂಗಸ್ತಂಭನ ಸಮರ್ಥವಾಗಿ ಇಲ್ಲದವರು ನುಗ್ಗೆಕಾಯಿ ಗಿಡದ ಕಾಂಡವನ್ನು ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಆ ಪುಡಿಯನ್ನು ಹಸುವಿನ ಹಾಲಿನಲ್ಲಿ ಕುದಿಸಿ ಮೂರು ಹೊತ್ತು ಒಂದು ತಿಂಗಳ ಕಾಲ ತೆಗೆದುಕೊಂಡರೆ ವೀರ್ಯವೃದ್ಧಿಯಾಗುತ್ತದೆ. ಅದರ ಹೂಗಳನ್ನು ಬಿಸಿ ಹಾಲಿನ ಜೊತೆಗೆ ಸೇವಿಸಿದರೆ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಮಹಿಳೆಯರು, ಪುರುಷರು ಇಬ್ಬರಿಗೂ ಕೆಲಸ ಮಾಡುತ್ತದೆ.