ಮೇಕ್ ಇನ್ ಇಂಡಿಯಾ ಪ್ರಭಾವದಿಂದ ಭಾರತದಲೇ ನಡೆದಿದೆ ಮೊಬೈಲ್ ತಯಾರಿಕೆ; ಇದರಿಂದ 6.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ.

0
662

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ ದೊರೆತ ನಂತರ ಮೊಬೈಲ್‌ ಫೋನ್‌ಗಳ ಉತ್ಪಾದನೆ ಭರ್ಜರಿಯಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ತಯಾರಾದ ಮೊಟ್ಟ ಮೊದಲ ಇಲೆಕ್ಟ್ರಾನಿಕ್ ವಸ್ತು ಮೊಬೈಲ್ ಎಂಬ ಹೆಗ್ಗಳಿಕೆ ಪಡೆದಿತ್ತು. ಪ್ರಥಮವಾಗಿ ಆಂಧ್ರಪ್ರದೇಶದಲ್ಲಿ ಜಿಯೋಮಿ ಮೊಬೈಲ್ ತಯಾರಿಸಲಾಗಿತ್ತು. ಭಾರತದಲ್ಲಿ ತಯಾರಾದ ಜಿಯೋಮಿ ಸ್ಮಾರ್ಟ್ ಫೋನಿನ ವಿಶೇಷತೆಗಳನ್ನು ತಿಳಿಸಿಕೊಟ್ಟ ಕಂಪನಿಯ ಹುಗೋ ಬರ್ರಾ. ಮೊಬೈಲ್ ಮಾರುಕಟ್ಟೆ ವಿಸ್ತಾರಕ್ಕೆ ಸ್ನ್ಯಾಪ್ ಡೀಲ್ ನೊಂದಿಗೂ ಹೊಂದಾಣಿಕೆ ಮಾತುಕತೆ ಮಾಡಿಕೊಂಡಿತ್ತು. ಇದರಿಂದ 6.7 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು.

Also read: ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ. ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ; ಕೆನರಾ ಬ್ಯಾಂಕ್, SBI ಸೇರಿದಂತೆ 106 ಕಂಪನಿಗಳು ಪಾಲ್ಗೊಳ್ಳಲಿವೆ..

ಮೂಲ ಉದೇಶ?

ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ 2014 ರಲ್ಲಿ ಚಾಲನೆ ನೀಡಿದರು. ಇದರಲ್ಲಿ ಮೊಬೈಲ್ ಫೋನ್ ಗಳನ್ನು ಉತ್ಪಾದಿಸಲು ಉತ್ತೇಜಿಸಲಾಯಿತು. ಮೊಬೈಲ್ ಫೋನ್ ಆಮದು ಹಾಗೂ ಬಿಡಿ ಭಾಗಗಳ ಆಮದಿಗೆ ಸುಂಕವನ್ನು ವಿಧಿಸುವ ಮೂಲಕ, ದೇಶೀಯ ಉತ್ಪಾದನೆಗೆ ಪುಷ್ಟಿ ನೀಡಲಾಯಿತು. ಇದರಿಂದ ರಾಷ್ಟ್ರದಲ್ಲೇ ಉತ್ಪಾದಿಸುವ ಒತ್ತಡ ಕಂಪನಿಗಳ ಮೇಲಿದೆ. ಈ ಯೋಜನೆಯಿಂದ ಸಕಾರಾತ್ಮಕ ಪ್ರಭಾವ ಬೀರಿತು. ಯೋಜನೆಯು ಭಾರೀ ಯಶಸ್ಸನ್ನುಗಳಿಸಿದೆ. ಕಳೆದ ನಾಲ್ಕು ವರ್ಷದಲ್ಲಿ ಮೂರು ಲಕ್ಷ ಕೋಟಿ ವಿದೇಶಿ ವಿನಿಮಯದ ಉಳಿತಾಯವಾಗಿದೆ!! ಈ ಮೊದಲು ಇಷ್ಟು ಪ್ರಮಾಣದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಆಮದಿಗೆ ಭಾರೀ ಪ್ರಮಾಣದ ಭಾರತೀಯ ಹಣವು ವಿದೇಶಕ್ಕೆ ಹೋಗುತ್ತಿತ್ತು!! ಆದರೆ ಯಾವಾಗ ಮೇಕ್ ಇನ್ ಇಂಡಿಯಾ ಆರಂಭವಾಯಿತೋ ಇದರ ಜೊತೆಗೆ ಲಕ್ಷಾಂತರ ಭಾರತೀಯರಿಗೆ ಉದ್ಯೋಗವೂ ದೊರಕಿದೆ.

Also read: ಭಾರತೀಯ ರೈಲ್ವೆ ವಿವಿಧ 2090, ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ವಿಶ್ವದಲ್ಲಿಯೇ ಚೀನಾ ನಂತರ ಅತಿ ಹೆಚ್ಚು ಮೊಬೈಲ್ ಫೋನ್- ಗಳನ್ನು ಉತ್ಪಾದಿಸುವ ದೇಶ ಭಾರತ. ಇಂಡಿಯನ್ ಸೆಲ್ಯೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ICIA ಇತ್ತೀಚಿನ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಮೊಬೈಲ್ ಉತ್ಪಾದನೆಯಿಂದಾಗಿ 6.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ.

ಭಾರತದಲ್ಲಿ ಎಷ್ಟು ಕಂಪನಿಗಳಿವೆ?

ಭಾರತದ ಸುಮಾರು 268 ಕಂಪನಿಗಳು ಮೊಬೈಲ್ ಉತ್ಪಾದನೆಯಲ್ಲಿ ನಿರತವಾಗಿವೆ. ಮತ್ತು 2019 ರ ಮಾರ್ಚ್ ವೇಳೆಗೆ ಮೊಬೈಲ್ ಬಿಡಿಭಾಗ ಉತ್ಪಾದಕರಿಂದ ಭಾರತದಲ್ಲಿ ಅಂದಾಜು ಹೂಡಿಕೆ 1800 ಕೋಟಿ ರೂ ಎಂದು ತಿಳಿಸಿವೆ. ಐಸಿಇಎ ಪ್ರಕಾರ 2025ರ ವೇಳೆಗೆ ಭಾರತದಲ್ಲಿ 1800 ಕಂಪನಿಗಳು ಮೊಬೈಲ್, ಸ್ಮಾರ್ಟ್ ಫೋನ್ ಉತ್ಪಾದಿಸಲಿವೆ. ಇದರಿಂದ 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಳಿವೆ. ಇದರಲ್ಲಿ ಪ್ರಮುಖವಾದ ಕಂಪನಿಗಳು ಎಂದರೆ apple. Samsung, LG, oppo, ಮತ್ತು vivo ಮುಂತಾದ ಪ್ರಮುಖ ಕಂಪನಿಗಳು ಭಾರತದಲ್ಲಿ ಸ್ಮಾರ್ಟ್ ಫೋನ್ ಉತ್ಪಾ ದನೆ ಆರಂಭಿಸಿವೆ. ಇದರಲ್ಲಿ ಇನ್ನೊಂದು ಬೆಳವಣಿಗೆ ನೋಡಿದರೆ Apple ಐಫೋನ್ ಮಾದರಿಗಳ ಉತ್ಪಾದನೆ ಬೆಂಗಳೂರಿನಲ್ಲಿ ನಡೆಯುತ್ತಿದೆ.

Also read: ರಾಜ್ಯದಲ್ಲಿ ಶಿಕ್ಷಕರಾಗಲು ಬಯಸುವವರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ..

ಮೇಕ್ ಇನ್ ಇಂಡಿಯಾದ ಪ್ರಭಾವವು ಮೊಬೈಲ್ ಬಳಕೆಯಲ್ಲಿ ಬೆಳವಣಿಗೆ ತಂದಿದರಿಂದ ಚೀನಾದಲ್ಲಿ ತಯಾರಾಗುವ ಮೊಬೈಲ್- ನಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಭಾರತದಲ್ಲಿ ತಯಾರಿ ಮಾಡುವ ಮೊಬೈಲ್ ನಲ್ಲೂ ಅಳವಡಿಕೆ ಮಾಡಲಾಗುವುದು. ಇದರಿಂದ ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಮೊಬೈಲ್ ಲಭ್ಯವಾಗುತ್ತದೆ. ಹಾಗೆಯೇ ಉದ್ಯೋಗ ಸೃಷ್ಟಿಯಾಗಿ ದೇಶ ಆರ್ಥಿಕವಾಗಿ ಸಬಲವಾಗುತ್ತಿದೆ.