ಸಂಖ್ಯಾ ವಿಶೇಷತೆ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ ಇದೇನಪ್ಪ ಅಂತೀರಾ ಇಲ್ಲಿ ನೋಡಿ..!

0
968

ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ..ಆದರೆ 48 ಯಾಕೆ, 108 ಯಾಕೆ ಅಂತ ಹೇಳೋರು ತುಂಬಾ ಕಮ್ಮಿ. ಇಲಿ ನೋಡಿ ಈ ಸಂಖ್ಯಾಗಳ ವಿವರ ಇಲ್ಲಿದೆ.
48 ಅಂದರೆ 27+9+12=48
27 ನಕ್ಷತ್ರಗಳು
9 ಗ್ರಹಗಳು.
12 ರಾಶಿಗಳು
ಹೀಗೆ 27 ನಕ್ಷತ್ರಗಳಿರುವ ದಿನ 12 ರಾಶಿಗಳಿಗೂ ಅಂದರೆ ಮನೆಯ ಎಲ್ಲರಿಗೂ, 9 ಗ್ರಹಗಳು ಶುಭವನ್ನುಂಟು ಮಾಡಲಿ ಎಂದು ಇದರ ಅರ್ಥ..

ಮತ್ತೆ 108 ಎಂದರೆ ಏನು ಅಂತೀರಾ ಇಲ್ಲಿ ನೋಡಿ.
108 = 60+27+9+12
ಅರವತ್ತು ಸಂವತ್ಸರಗಳು.+ 48 ದಿನಗಳು.

ಅಖಂಡ ಎಂದರೆ ಏನು 128 ದಿನ
128 ರಲ್ಲಿ ಅರ್ಧ 64
64 ಶಿವ ಶಕ್ತಿ ಪೀಠಗಳು.
64 ದೇವಿ ಶಕ್ತಿ ಪೀಠಗಳು.
64 ರಲ್ಲಿ ಅರ್ಧ 32
32 ಗಣಪತಿಯ ಆಕಾರಗಳು
32 ರಲ್ಲಿ ಅರ್ಧ 16
16 ಷೋಡಶ ಸಂಸ್ಕಾರಗಳು
16 ರಲ್ಲಿ ಅರ್ಧ 8
8 – ಅಷ್ಟ ಕಷ್ಟಗಳೂ ನಿವಾರಣೆ, ಅಷ್ಟೈಶ್ವರ್ಯ ಫಲ
8 ರಲ್ಲಿ ಅರ್ಧ 4
4 ವೇದಗಳು..!
4 ರಲ್ಲಿ ಅರ್ಧ 2
ಎರಡು – ಒಂದು ಸೂರ್ಯ, ಇನ್ನೊಂದು ಚಂದ್ರ..!
2 ರಲ್ಲಿ ಅರ್ಧ 1
ಒಂದು ಅದೇ ” ನೀನು” ..! ಅದೇ “ಆತ್ಮ”..!
ಆ ಆತ್ಮವನ್ನು ಜಾಗೃತಗೊಳಿಸಿ, ಪರಮಾತ್ಮನನ್ನು ಒಲಿಸಿಕೊಳ್ಳುವುದೇ ” ಅಖಂಡ”