ಬಿಳಿ ಅಕ್ಕಿಯಲ್ಲಿ ಇರುವ 8 ಆರೋಗ್ಯಕರ ಲಾಭಗಳು ಇಲ್ಲಿದೆ ನೋಡಿ.

0
610

ಕೆಲವರು ಮಾತನಾಡುವಾಗ ಬಿಳಿಯ ಅಕ್ಕಿ ಅಷ್ಟುಂದು ಉತ್ತಮವಲ್ಲ ಎಂದು ಪರಿಗಣಿಸುತ್ತಾರೆ. ಆದರೆ ಇದು ಸತ್ಯವಲ್ಲ ಅದರಲ್ಲು ವಿಷೇಶವಾಗಿ ಬಿಳಿ ಅಕ್ಕಿಯಲ್ಲಿ ಅದರದೆ ಆದ ಶಕ್ತಿಯಿದೆ. ಆದರೆ ಇತ್ತೀಚಿನ ಕೆಲವು ನ್ಯೂಟ್ರೀಷಿಯನಿಷ್ಟ್ ಗಳು ಅದರ ಬಗ್ಗೆ ಕೆಲವು ನಕಾರಾತ್ಮಕ ಹೇಳಿಕೆಗಳನ್ನು ನೀಡುವುದರಿಂದ ಕೆಲವರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅದರಿಂದ ಕೆಲವರಿಗೆ  ಇದರ ಬಗ್ಗೆ ಭಿನ್ನವಿಭಿನ್ನ ತರ್ಕಗಳು ಹೇಳುತ್ತಾರೆ, ಆದರೆ ಬಿಳಿ ರೈಸ್ ಗೂ ಬ್ರೌನ್ ರೈಸ್ ಗೂ ತುಲನೆ ಮಾಡಿದಾಗ ಕೆಲವು ಆರೋಗ್ಯದಾಯಕ ಅಂಶಗಳು ಇದರಲ್ಲಿದೆ.

Also read: ಬಿಳಿ ಅಕ್ಕಿ, ಕೆಂಪು ಅಕ್ಕಿ ಬಗ್ಗೆ ಕೇಳಿರುತ್ತೀರಿ; ಇದಕ್ಕಿಂತ ಆರೋಗ್ಯಕ್ಕೆ ಒಳ್ಳೆದಾದ ಕಪ್ಪು ಅಕ್ಕಿ ಬಗ್ಗೆ ಕೇಳಿದ್ದೀರೇ?? ಅಕ್ಕಿಯಲೋಕದ ಅಚ್ಚರಿ….!

ಬ್ರೌನ್ ರೈಸ್ ನಲ್ಲಿ ಫೈಟಿಕ್ ಆಸಿಡ್ ಅಂಶವಿರುತ್ತದೆ ಆದರೆ ಇದು ಬಿಳಿಯ ರೈಸ್ ನಲ್ಲಿರುವುದಿಲ್ಲ. ಫೈಟಿಕ್ ಆಸೀಡ್ ನಿಮ್ಮ ದೇಹಕ್ಕೆ ಅನಾರೋಗ್ಯಕಾರಿಯಾಗಿರುತ್ತದೆ ಬಿಳಿಯ ಅಕ್ಕಿಯನ್ನು ತಯಾರಿಸಬೇಕಾದರೆ ಅದರ ಮೇಲಿನ ಕಂದು ಬಣ್ಣದ ಸಿಪ್ಪೆ ಹೋಗುತ್ತದೆ ಈ ನಿಮ್ಮ ಜೀರ್ಣ ಕ್ರಿಯೆಗೆ ಅಷ್ಟೊಂದು ಒಳ್ಳೆಯದಲ್ಲ. ಫೈಬರ್ ಅಂಶವನ್ನು ಕಳೆದು ಕೊಂಡಿರುವ ಬಿಳಿ ಅಕ್ಕಿ ಜೀರ್ಣ ಕ್ರಿಯೆಗೆ ಸುಲಭವಾಗಿರುತ್ತದೆ.

ಪೋಷಕಾಂಶಗಳಿಂದ ಸಂಪದ್ಭರಿತವಾಗಿರುತ್ತದೆ

ಕೆಲವರು ಹೆಚ್ಚು ಕಂದು ಅಕ್ಕಿಯನ್ನು ಸೇವನೆ ಮಾಡುತ್ತಾರೆ ಏಕೆಂದರೆ? ಅದರಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತದೆ ಎಂದು ಆದರೆ ಇದರಲ್ಲಿ ಬ್ರೌನ್ ಮತ್ತು ಫೈಟಿಕ್ ಆಸಿಡ್ ಗಳನ್ನು ಒಳಗೊಂಡಿರುವುದಿಲ್ಲ. ಇದರಲ್ಲಿ ಮುಗ್ನೀಶಿಯ, ಮಿನಮಿನ್ ಬಿ6, ಕಬ್ಬಿಣಾಂಶ, ಪ್ರೋಟಿನ್, ಪೊಟಾಷಿಯಂ ಇರುತ್ತೆ. ಅಷ್ಟೇ ಅಲ್ಲ ಇದರಲ್ಲಿ ಕಾರ್ಬೋಹೈಟ್ರೇಟ ಇರುತ್ತದೆ.

ಆರ್ಸೆನಿಕ್ ಅಂಶದಿಂದ ಫ್ರೀ ಆಗಿರುತ್ತೆ

ಬಿಳಿ ಅಕ್ಕಿಯಲ್ಲಿ ಯಾವುದೇ ರೀತಿಯ ಟಾಕ್ಸಿಕ್ ಮೆಟಲ್ ಗಳಾದ ಆರ್ಸೆನಿಕ್ ಗಳು ವೈಟ್ ರೈಸ್ ನಲ್ಲಿ ಇರುವುದಿಲ್ಲ. ಆದ್ರೆ ಕಂದು ಅಕ್ಕಿಯಲ್ಲಿ ಆರ್ಸೆನಿಕ್ ಅಂಶವಿರುತ್ತದೆ.

 

ಗ್ಲುಟೀನ್ ಅಂಶವಿರುವುದಿಲ್ಲ

ಕೆಲವರಿಗೆ ಅಕ್ಕಿ ಸೇವನೆ ಮಾಡಿದರೆ ಮೈಯಲ್ಲಿ ಅಲರ್ಜಿ ಯಾಗುತ್ತದೆ. ಆದರೆ ಬಿಳಿ ಅಕ್ಕಿಯಲ್ಲಿ ಕೆಲವರಿಗೆ ಅಲರ್ಜಿ ಉಂಟು ಮಾಡುವ ಗ್ಲುಟೀನ್ ಅಂಶವಿರುವುದಿಲ್ಲ. ಅಷ್ಟೇ ಅಲ್ಲ ಕಾರ್ಬೋಹೈಡ್ರೆಟ ಅಂಶ ಇದರಲ್ಲಿ ಹೆಚ್ಚಾಗಿರುತ್ತದೆ. ಹಾರ್ಮೋನ್ ಬದಲಾವಣೆಗಳಿಂದ ಬಳಲುವವರಿಗೆ ಇದು ಹೇಳಿ ಮಾಡಿಸಿದ್ದು.

ಶಕ್ತಿ ನೀಡುತ್ತೆ

ಬಿಳಿ ಅಕ್ಕಿ ಸೇವನೆ ಮಾಡುವವರಿಗೆ ಶಕ್ತಿ ಬೇಗನೆ ದೊರೆಯುತ್ತದೆ ಏಕೆಂದರೆ? ಅದರಲ್ಲಿ ಕಾರ್ಬೋಹೈಡ್ರೆಟ ಅಂಶ ಅಧಿಕವಾಗಿರುತ್ತದೆ. ಬೇರೆಯ ಕಾರ್ಬೋಹೈಡ್ರೆಟಗಳಿಗೆ ಹೋಲಿಸಿದರೆ ಬಿಳಿ ಅಕ್ಕಿಯಲ್ಲಿರುವ ಕಾರ್ಬೋಹೈಡ್ರೆಟಗಳಿಗೆ ಬೇಗನೆ ಶಕ್ಕಿ ನೀಡಿ ನಿರ್ಶಕ್ಕಿಯಿಂದ ಬಳಲುವವರು ಕೂಡಲೇ ಶಕ್ಕರಾಗುವಂತ್ತೆ ಮಾಡುತ್ತೆ.

Also read: ಅಕ್ಕಿ ತೊಳೆದ ನೀರನ್ನು ಬಿಸಾಡಬೇಡಿ, ಅದರಿಂದ ಏನೇನು ಉಪಯೋಗಗಳಿವೆ ಅಂತ ಹೇಳ್ತಿವಿ ನೋಡಿ!!

ಮಾಂಸಖಂಡಗಳ ಬಲವರ್ಧನೆಗೆ ಸಹಕಾರಿ

ಬಿಳಿಯ ಅಕ್ಕಿಯಲ್ಲಿ ಪೋಟೀನುಗಳಿವೆ ಬಿಳಿಯ ಅಕ್ಕಿಯನ್ನು ಮಾಂಸದೊಂದಿಗೆ ಸೇವನೆ ಮಾಡುವುದರಿಂದ ಅದೊಂದು ಪರಿಪೂರ್ಣವಾದ ಆಹಾರ ಏಕೆಂದರೆ? ಇವೆರಡೂ ಜೊತೆಯಾಗಿ ಶರೀರಿಕ ಪೋಟೀನ್ ಗಳನ್ನು ಬೆಳೆಸುವುದರ ಮೂಲಕ ಮಾಂಸಖಂಡಗಳ ಸಂವರ್ಧನೆಗೆ ಅವಶ್ಯವಿರುವ ಎಲ್ಲಾ ಬಗೆಯ ಅಮೈನೋ ಆಮ್ಲಗಳನ್ನು ಒಳಗೊಂಡಿರುತ್ತದೆ. ಆದರಿಂದ ನಮ್ಮ ದೇಹದ ಮಾಂಸಖಂಡವನ್ನು ಬೆಳೆಸಲು ಸಹಕಾರಿಯಾಗಿರುತ್ತದೆ.

ಜಠರ ಕರುಳಿನ ಆರೋಗ್ಯಕ್ಕೆ ಸಹಕಾರಿ

ಫೈಬರ್ ರಹಿತ ಮತ್ತು ಗ್ಲುಟೀನ್ ರಹಿತವಾಗಿರುವ ವೈಟ್ ರೈಸ್ ಜಠರಗರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಬೆಳಗಿನ ಹೊತ್ತು ಕಾನಿಸ್ಕೊಳ್ಳುವ ಮುಂಜಾನೆಸಿಕ್ ನೆಸ್ ಗಳನ್ನುನಿವಾರಿಸಲು ಕೂಡ ಇದು ಸಹಕಾರಿಯಾಗಿದೆ.

ಮೊದುಳು ಮತ್ತು ರೋಗನಿರೋಧಕ ಶಕ್ಕಿಗೆ ಸಹಕಾರಿ

ಮಿಗ್ನಿಷಿಯಂ ಅಂಶ ಇದರಲ್ಲಿ ಅಧಿಕವಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಕಾರ್ಯಚಟುವತಿಕೆಗೆ ಇದು ಸಹಕರಿಸುತ್ತೆ.

ಹಸಿವನ್ನು ಹೆಚ್ಚಿಸುತ್ತೆ

ಪಚನ ಕ್ರಿಯೆಯ ಶಕ್ತಿಗೆ ಪೂರಕವಾಗುವುದರ ಮೂಲಕ ಬೆಳ್ತಿಗೆ ಅನ್ನವು ಹಸಿವನ್ನು ಹೆಚ್ಚಿಸುತ್ತದೆ. ಹಾಗೂ ಇದು ಹೊಟ್ಟೆಯ ಕಿರಿಕಿರಿಯನ್ನು ನಿವಾರಿಸುತ್ತದೆ. ಬೆಳ್ತಿಗೆ ಅಕ್ಕಿಯ ತಕ್ಕಮಟ್ಟಿಗೆ ಮೂತ್ರವಾರ್ಧಕ ಗುಣಲಕ್ಷಣಗಳನ್ನು ಒಳಗೊಂಡಿವೆ. ಬಿಳಿಯ ಅಕ್ಕಿ ಅತ್ಯುತ್ತಮವಾದ  ಪ್ರಯೋಜನಗಳಲ್ಲಿ ಇದು ಕೊಡ ಒಂದು.