ಡ್ರೈ ಫ್ರೂಟ್ಸ್-ನಿಂದ ಮಾಡಿದ ಪೌಷ್ಟಿಕಾಂಶಯುಕ್ತ, ಗೋಕಾಕ್ ಕರದಂಟು ಮಾಡುವ ವಿಧಾನ..!!

0
1119

ಬೆಳಗಾಂ ಜಿಲ್ಲೆಯ ಗೋಕಾಕ್‌ದಲ್ಲಿ ತಯಾರಾಗುವ ವಿಶಿಷ್ಟ ಸಿಹಿ ತಿನಿಸು ಕರದಂಟು ಇದನ್ನು ಮರದ ಅಂಟಿನಿಂದ ಮಾಡಲಾಗುತ್ತದೆ. ಈ ಅಂಟಿನೊಂದಿಗೆ ಒಣ ಕೊಬ್ಬರಿ, ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ, ಖರ್ಜೂರ, ಪಿಸ್ತಾ ಮುಂತಾದ ಪದಾರ್ಥಗಳೊಂದಿಗೆ ಮತ್ತಷ್ಟು ಒಣ ಹಣ್ಣುಗಳನ್ನು ಸೇರಿಸಿ ದೇಸಿ ತುಪ್ಪದಲ್ಲಿ ಹದವಾಗಿ ತಯಾರಿಸಲಾಗುತ್ತದೆ. ಬಿಳಿಯ ಬಣ್ಣದ ಅತಿ ರುಚಿಕರ ಕರದಂಟು, ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತೆ ಜಾತ್ರೆಯಲ್ಲಿ ಕರದಂಟಿನ ವಿಶೇಷತೆಯೇ ಹೆಚ್ಚು, ಈ ಕರದಂಟು-ನಲ್ಲಿ ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ದೇಹಕ್ಕೆ ಬೇಕಾದ ಶಕ್ತಿ ಮತ್ತು ಎಲ್ಲಾ ಪೌಷ್ಟಿಕಾಂಶಗಳು ದೊರೆಯುತ್ತವೆ. ಒಂದು ರೀತಿ ಆರೋಗ್ಯಕರವಾದ ಉಂಡೆಯಾಗಿದೆ ಹಾಗಾದ್ರೆ ಇಷ್ಟೆಲ್ಲ ವಿಶೇಷತೆ ಹೊಂದಿರುವ ಕರದಂಟು-ನ್ನು ಸರಳವಾಗಿ ನೀವು ಮನೆಯಲ್ಲಿಯೇ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ.

Also read: ದಸರಾ ಆಹಾರ ಮೇಳದ ವಿಶೇಷ ತಿನಿಸು ಬಿದಿರಕ್ಕಿ ಪಾಯಸ

ಬೇಕಾಗುವ ಪದಾರ್ಥಗಳು:

 • ಒಂದು ಬಟ್ಟಲು – ಖರ್ಜೂರ
 • ಒಂದು ಬಟ್ಟಲು – ಬಾದಾಮಿ
 • ಒಂದು ಬಟ್ಟಲು – ಗೋಡಂಬಿ
 • ಒಂದು ಬಟ್ಟಲು – ದ್ರಾಕ್ಷಿ
 • ಒಂದು ಬಟ್ಟಲು – ಒಣ ಕೊಬ್ಬರಿ ತುರಿ

Also read: ದೇಶಾದ್ಯಂತ ಹೆಸರು ಮಾಡಿದ ಬೆಳಗಾಂ ಕುಂದಾ ತಯಾರಿಸುವ ವಿಧಾನ..!!

 • ಎರಡು ದೊಡ್ಡ ಚಮಚ – ಗಸಗಸೆ
 • ಕಾಲು ಬಟ್ಟಲು – ಅಂಟು
 • ರುಚಿಗೆ ತಕಷ್ಟು – ಬೆಲ್ಲ
 • ಸ್ವಲ್ಪ ತುಪ್ಪ

ತಯಾರಿಸುವ ವಿಧಾನ:

Also read: ರುಚಿಕರವಾದ ಬಾಳೆಹಣ್ಣಿನ ಕೋಫ್ತಾ ತಯಾರಿಸುವ ವಿಧಾನ..!!

 • ಖರ್ಜೂರ, ಬಾದಾಮಿ ಮತ್ತು ಗೋಡಂಬಿಯನ್ನು ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ, ಮೊದಲು ಇಷ್ಟನ್ನು ತಯಾರಿಸಿಟ್ಟುಕೊಲ್ಲಬೇಕು.
 • ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ.
 • ನಂತರ ಬಾದಾಮಿ ಹುರಿದು, ಆಮೇಲೆ ದ್ರಾಕ್ಷಿ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ. ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ.
 • ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ, ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲವನ್ನು ಹಾಕಿ, ಚೆನ್ನಾಗಿ ಬೆರೆಸಿ.
 • ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ಬರುವವರಗೆ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ. ಎಲ್ಲವನ್ನು ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಳ್ಳಿ.
 • ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:
 • ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ.
 • ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ.
 • ಈಗ ನಿಮ್ಮ ಇಷ್ಟದ ಗೋಕಾಕ್ ಕರದಂಟು ರೆಡಿ ಯಾಗಿದೆ. ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು ದಿನವಿಡಬಹುದು