ಪೌಷ್ಟಿಕಭರಿತ, ಘಂ ಎನ್ನುವ ಹುರುಳಿ ಸಾರು ಮಾಡುವ ವಿಧಾನ..!!

0
1950

ಸದೃಡ ಆರೋಗ್ಯಕೆ ಮೊಳಕೆ ಕಾಳುಗಳು ಅತಿಮುಖ್ಯ ಇದೆ ಕಾರಣಕೆ ಸಂಸ್ಕೃತದಲ್ಲಿ ಮೊಳಕೆ ಕಾಳಿಗೆ ಮಹತ್ವ ಕೊಟ್ಟಿದ್ದಾರೆ ಇಂತಹ ಮೊಳಕೆ ಕಾಳಿನಿಂದ ಇರುವ ಉಪಯೋಗಳು ಅಂದ್ರೆ ಜೀರ್ಣಶಕ್ತಿ ಹೆಚ್ಚಿಸುತ್ತೆ, ದೇಹದಲ್ಲಿ ಜೀವಕಣಗಳ ಉತ್ಪತ್ತಿ ಮಾಡುತ್ತೆ, ರಕ್ತ ಕಡಿಮೆ ಆಗುವುದರಿಂದ ಅನೀಮಿಯಾ ಬರುತ್ತೆ ಇದನ್ನು ಬರದಂತೆ ತಡೆಯಿತ್ತೆ, ಹೃದಯಕೆ ಬೇಕಾದ ಒಮೇಗಾ ಫ್ಯಾಟೀ ಆಸಿಡ್ ಸಿಗುತ್ತೆ, ಗರ್ಬಿಣಿಯರಿಗೆ ಮತ್ತು ಮಗುವಿನ ಬೇಕಾದ ಪೋಷಕಾಂಶ ಸಿಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ, ಕಣ್ಣಿನ ದೃಷ್ಟಿ ಹೆಚ್ಚಿಸುತ್ತೆ ಹೀಗೆ ನೂರಾರು ಉಪಯೋಗ ಇರುವ ಮೊಳಕೆ ಕಾಳುಗಳನ್ನು ಭಾರತೀಯರು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಮತ್ತು ಮೊಳಕೆ ಮಾಡಿದ ಕಾಳುಗಳಿಂದ ಸಾಂಬಾರು ಮಾಡಿದರೆ ರುಚಿಯ ಜತೆಗೆ ಆರೋಗ್ಯವು ಉತ್ತಮವಾಗಿರುತ್ತೆ ಇಷ್ಟೆಲ್ಲ ಗುಣವಿರುವ ಕಾಳುಗಳಲ್ಲಿ ಹುರುಳಿಕಾಳು ಪ್ರಮುಖ್ಯವಾಗಿದೆ. ಹಾಗಾದ್ರೆ ಈ ಮೊಳಕೆ ಹುರುಳಿ ಕಾಳಿನ ಸಾರುನ್ನು ತಯಾರಿಸುವ ರೆಸಿಪೆ ಇಲ್ಲಿದೆ ನೋಡಿ.

Also read: ಕೇವಲ ರುಚಿಯ ವಿಷಯವಲ್ಲ, ಆರೋಗ್ಯವರ್ಧಕ ಖಾದ್ಯಗಳಲ್ಲಿ ಒಂದಾದ ಹೆಸರುಕಾಳು ಹುಸುಳಿ ಮಾಡುವ ವಿಧಾನ..!!!!

ಬೇಕಾಗುವ ಪದಾರ್ಥಗಳು:

 • ಒಂದು ಕಪ್ ಹುರುಳಿಕಾಳು
 • ಒಂದು ಕಪ್ ತೆಂಗಿನ ತುರಿ
 • 4 ಚಮಚ ಸಾರಿನ ಪುಡಿ
 • 100 ಗ್ರಾಂ ಬೆಲ್ಲ
 • ಸ್ವಲ್ಪ ಹುಣಸೆ ಹುಳಿಕಾಲು ಚಮಚ ಅರಿಶಿನ
 • ಸ್ವಲ್ಪ ಕರಿಬೇವು ಒಗ್ಗರಣೆಗೆ
 • ಎರಡು ಚಮಚ ತುಪ್ಪ
 • ಕಾಲು ಚಮಚ ಜೀರಿಗೆ, ಸಾಸಿವೆ
 • 6-8 ಬೆಳ್ಳುಳ್ಳಿ ಬೆಳೆ
 • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

 • ಮೊಳಕೆ ಬಂದ ಕಾಳುಗಳನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿ, ಸುಮಾರು 2 ಲೀಟರ್ ನೀರನ್ನು ಹಾಕಿ ಒಂದೆರಡು ಹನಿ ಎಣ್ಣೆ ಎರಡು ಚಿಟಕಿ ಅರಿಶಿಣ ಹಾಕಿ ಕುಕ್ಕರ್‍ನಲ್ಲಿಟ್ಟು 3 ವಿಷಲ್ ಮಾಡಿ ಮತ್ತೆ ಸಣ್ಣ ಉರಿಯಲ್ಲಿ 30 ನಿಮಿಷವಿಟ್ಟು ಬೇಯಿಸಿ.
 • ನಂತರ ಕುಕ್ಕರ್-ರಲ್ಲಿ ಬೆಂದ ಹುರುಳಿಯನ್ನು ಹೊರ ತೆಗೆದು, ಫಿಲ್ಟರ್ ಮಾಡಿಕೊಳ್ಳಿ. ಬೆಂದ ಹುರುಳಿಯನ್ನು ಬದಿಯಲ್ಲಿಟ್ಟಿರಿ.
 • ಮಿಕ್ಸರ್-ಗೆ ತೆಂಗಿನ ತುರಿ, ಸಾರಿನ ಪುಡಿ ಮತ್ತು ಹುಳಿ ಹಾಕಿ, ನೀರು ಸೇರಿಸಿಕೊಂಡು ರುಬ್ಬಿ.
 • ಕೊನೆಯಲ್ಲಿ 5-6 ಚಮಚದಷ್ಟು ಬೆಂದಿರುವ ಹುರುಳಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
 • ಈಗ ಹುರುಳಿಯನ್ನು ಬೇಯಿಸಿದ ನೀರಿಗೆ ಬೆಲ್ಲ, ಉಪ್ಪು, ಕರಿಬೇವಿನ ಎಲೆಗಳನ್ನು ಹಾಕಿ ಕುದಿಯಲು ಇಡಿ.
 • ಅದು ಕುದಿಯುತ್ತಿರುವಾಗ ರುಬ್ಬಿದ ಮಸಾಲೆ ಮತ್ತು ಅರಿಶಿನವನ್ನೂ ಹಾಕಿ ಚೆನ್ನಾಗಿ ಕುದಿಸಿ.
 • ಈಗ ಒಗ್ಗರಣೆಯ ಬಟ್ಟಲಿಗೆ ತುಪ್ಪ, ಜೀರಿಗೆ, ಸಾಸಿವೆ ಕಾಳು ಹಾಕಿ ಜಜ್ಜಿದ ಬೆಳ್ಳುಳ್ಳಿಯ ಬೇಳೆಗಳನ್ನು ಹಾಕಿ ಒಗ್ಗರಣೆ ಮಾಡಿ, ಸಾರಿಗೆ ಹಾಕಿ. ಈಗ ಹುರುಳಿ ಸಾರು ರೆಡಿ.

ಇಂತಹ ಹುರುಳಿ ಕಾಲುಗಳಿಂದ ಮಾಡಿದ ಆಹಾರದಿಂದ ಪ್ರೊಟೀನ್ ಮತ್ತು ಪೋಷಕಾಂಶಗಳು ಸಿಗುತ್ತೆ, ಸ್ವಾಭಾವಿಕ ಹುರುಳಿಕಾಳನ್ನು ಮೊಳಕೆ ಬರಿಸುವುದರಿಂದ ಅತ್ಯಧಿಕ ಖನಿಜಗಳು, ವಿಟಮಿನ್‍, ಪೋಷಕಾಂಶ, ಪ್ರೊಟೀನ್‍ಗಳು ಆಹಾರ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತವೆ. ಮೊಳಕೆ ಕಾಳುಗಳಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುವುದಲ್ಲದೆ, ರಕ್ತವನ್ನು ಶುದ್ಧೀಕರಿಸುವುದರಲ್ಲಿ ಸಹಾಯ ಮಾಡುತ್ತದೆ.