ಮೀನಿನ ಪ್ರಭೇದಕ್ಕೆ ಒಬಾಮ ಹೆಸರು..!

0
619

ಅಮೆರಿಕದ ವಿಜ್ಞಾನಿಗಳು ಹೊಸದಾಗಿ ಸಂಶೋಧಿಸಲ್ಪಟ್ಟ ಮೀನುಗಳ ಪ್ರಭೇದ ಒಂದಕ್ಕೆ ಬರಾಕ್ ಒಬಾಮ ಹೆಸರಿಟ್ಟಿದ್ದಾರೆ. ಪೆಸಿಫಿಕ್ ಸಮುದ್ರದ ಮೀನಿನ ಪ್ರಭೇದಕ್ಕೆ ವಿಜ್ಞಾನಿಗಳು ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

*ಪಪಹಾನೌ ಮೊಕಕಿ ಕಡಲ ರಾಷ್ಟ್ರೀಯ ಸ್ಮಾರಕವನ್ನು ವಿಸ್ತರಿಸುವ ಮೂಲಕ ಪ್ರಕೃತಿ ರಕ್ಷಣೆಯಲ್ಲಿ ಒಬಾಮ ಅವರ ಕಾಳಜಿಯನ್ನು ಮನಗೊಂಡು ಮೀನಿಗೆ ಅವರ ಹೆಸರನ್ನು ಇಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

*ಟೊಸನಾಯಿಡ್ಸ್ ಜಾತಿಗೆ ಸೇರಿದ ಕಡುಗೆಂಪು ಮತ್ತು ಚಿನ್ನದ ಬಣ್ಣ ಹೊಂದಿರುವ ಈ ಮೀನಿನ ಪ್ರಭೇದಗಳು ಕರಾವಳಿಯಲ್ಲಿ 300 ಅಡಿ ಆಳದಲ್ಲಿ ಪತ್ತೆಯಾಗಿದೆ.

*ಕೊರಲ್ ರೊಫ್ಸ್ ಸೇರಿದಂತೆ ಹಲವು ಜಲಚರ ಪ್ರಾಣಿಗಳು ವಾಸಿಸುವ ಪ್ರದೇಶದಲ್ಲಿರುವ ಏಕೈಕ ಮೀನು ಇದಾಗಿದೆ. ಈ ಮೀನಿನ ಬಣ್ಣ ಒಬಾಮ ಪ್ರಚಾರದ ಲೋಗದಲ್ಲಿರುವ ಬಣ್ಣಗಳನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ.

*ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾದ ಸುಮಾರು ಹವಾಯಿ ದ್ವೀಪಗಳ ಕುರ್ ಪ್ರದೇಶದ ಹವಳ ದಿಬ್ಬದಲ್ಲಿ ಈ ಮೀನಿನ ಪ್ರಭೇದ ಕಂಡು ಹಿಡಿಯಲಾಯಿತು.

*ಕುರ್ ಪ್ರದೇಶ ಲಕ್ಷಾಂತರ ಕಡಲ ಹಕ್ಕಿಗಳು, ಅಳಿವಿನಂಚಿನಲ್ಲಿರುವ ಆಮೆಗಳು, ಸೀಲ್ ಗಳು ಸೇರಿದಂತೆ 7 ಸಾವಿರಕ್ಕೂ ವಿವಿಧ ಜೀವವೈವಿಧ್ಯಗಳನ್ನು ಇಲ್ಲಿ ನೋಡಬಹುದು.

2012ರ ಪ್ರಭೇದಕ್ಕೂ ಒಬಾಮ ಹೆಸರು

2012ರಲ್ಲಿ ಸಿಹಿನೀರಿನ ಬಣ್ಣದ ಮೀನಿನ ಪ್ರಭೇದಕ್ಕೆ ಬರಾಕ್ ಒಬಾಮ ಹೆಸರನ್ನು ಇಡಲಾಗಿತ್ತು. ಉತ್ತರ ಅಮೆರಿಕ ಪೂರ್ವ ಭಾಗದಲ್ಲಿರುವ ನದಿಯಲ್ಲಿ ಪತ್ತೆಹಚ್ಚಲಾದ ಡಾರ್ಟರ್ ಮೀನುಗಳ ಪ್ರಭೇದ ಇದಾಗಿದೆ. ಇದುವರೆಗೆ ಡಾರ್ಟರ್ ಮೀನಿನ 200 ಪ್ರಭೇದಗಳನ್ನು ಪತ್ತೆಹಚ್ಚಲಾಗಿತ್ತು. ಈ ಮೀನುಗಳು ಉತ್ತರ ಅಲಬಾಮ ಮತ್ತು ಪೂರ್ವ ಟೆನ್ನೆಸಿಯಾ ನದಿಗಳು ಮತ್ತು ಕೊಲ್ಲಿಗಳಲ್ಲಿ ವಾಸಿಸುತ್ತಿವೆ.