ಚುನಾವಣೆ ಗೆಲ್ಲಲ್ಲು ಕೋಟಿ ಕೋಟಿ ಹಣ ಬೇಕು ಅನ್ನುವುದನ್ನು ಸುಳ್ಳು ಮಾಡಿದ ಸಂಸ್ಕೃತ ಪಂಡಿತನ ಬಳಿ ಇರುವುದು ಬರೀ ಒಂದು ಚಿಕ್ಕ ಗುಡಿಸಲು, ಒಂದು ಸೈಕಲ್ ಮತ್ತೆ ಒಂದು ಬ್ಯಾಗು!!

0
380

ರಾಜಕಾರಣಿ ಎಂದರೆ ಅಬ್ಬರದ ಮನೆ, ಕೋಟಿ ಗಂಟಲೆ ಬೆಲೆಬಾಳುವ ಹತ್ತಾರು ವಾಹನ, ನೂರಾರು ಎಕರೆ ಆಸ್ತಿ, ಕೆಜಿ ಗಂಟಲೆ ಬಂಗಾರ, ಹೀಗೆ ನೂರಾರು ಕೋಟಿಯ ಒಡೆಯರಾಗಿ ರಾಜಕೀಯದಲ್ಲಿ ನಾಯಕರಾಗಿ ಇರುವುದು ಸಾಮಾನ್ಯ ಬರಿ ಒಂದು ಪಂಚಾಯಿತಿ ಸದಸ್ಯರಾದರು ಕೂಡ ಊರಿನ ತುಂಬೆಲ್ಲ ಆಸ್ತಿ ಗಳಿಸುವುದು ರಾಜರಂತೆ ಮೆರೆಯಿವುದು ಎಲ್ಲ ಕಡೆಯಲ್ಲೂ ನಡೆಯಿತ್ತಿರುವ ನಿದರ್ಶನವಾಗಿದೆ. ಇಂತಹ ಕಾಲದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶ್ರೀಮಂತ ವ್ಯಕ್ತಿಯನ್ನು ಸೋಲಿಸಿ ಸಂಸದರಾದ ವ್ಯಕ್ತಿಯ ಆಸ್ತಿ ಕೇಳಿದರೆ ನಂಬಲು ಬಲು ಕಷ್ಟವಾಗುತ್ತೆ.

ಹೌದು ಒಡಿಶಾದ ಮೋದಿ’ ಎಂದೇ ಪ್ರಶಿದ್ದಿ ಪಡೆದಿರುವ ಒಡಿಶಾದ ಬಲಾಸೋರ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಾರಂಗಿ ಅವರ ಆಸ್ತಿ ವಿವರ ಕೇಳಿದರೆ, ಈ ವ್ಯಕ್ತಿಯ ಸರಳತೆ ಜಗ್ಗತ್ತಿನ ಯಾರಲ್ಲಿ ಇರಲು ಸಾಧ್ಯವಿಲ್ಲ ಅನಿಸುತ್ತೆ. ಇವರು ಒಂದು ಬಾರಿ MLA ಆಗಿ ಆಯ್ಕೆಯಾಗಿ ಈಗ ಸಂಸದರಾಗಿದ್ದಾರೆ. ಬಿಳಿ ಬಣ್ಣದ ಜುಬ್ಬಾ, ಹೆಗಲಿಗೊಂದು ಜೋಳಿಗೆ, ಓಡಾಡುವುದಕ್ಕೊಂದು ಸೈಕಲ್ ಇಟ್ಟುಕೊಂಡು ಇಡಿ ಜೀವನವನ್ನೇ ಸಮಾಜ ಸೇವೆಗಾಗಿ ಮುಡಿಪಾಗಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಪ್ರತಾಪ್ ಸಾರಂಗಿ ಅವರಿಗೆ ಇಡೀ ದೇಶವೇ ಕುಟುಂಬ ಎಂದು ಜೀವನ ಸಾಗಿಸುತ್ತಿದ್ದಾರೆ. ಇವರ ಬಳಿ ಇರುವ ಆಸ್ತಿ ಎಂದರೆ ಒಂದು ಗುಡಿಸಲು ಮನೆ, ಸೈಕಲ್, ಒಂದು ಬ್ಯಾಗ್ ಇದೇ ಅವರ ದೊಡ್ಡ ಆಸ್ತಿಯಾಗಿದೆ.

ಇವರು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸಂಸ್ಕೃತ ಪಂಡಿತರಾಗಿರುವ ಸಾರಂಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದವರು. ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿ ಸಂಸದರಾದ ಸಾರಂಗಿ ಬಡ ಸಂಸದರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ! ಇನ್ನೂ ಇವರ ವಯಕ್ತಿಕ ಜೀವನ ನೋಡಿದರೆ. ಮದುವೆ ಮಕ್ಕಳ ಆಸೆಯನ್ನೇ ತೊರೆದ ಇವರು ಇಡಿ ದೇಶವೇ ನನ್ನ ಕುಟುಂಬವೆಂದು ಜೀವನ ಸಾಗಿಸುತ್ತಿದ್ದಾರೆ. ಕಳೆದ ವರ್ಷ ತಮ್ಮ ತಾಯಿಯನ್ನು ಕಳೆದುಕೊಂಡ ಅವರು ತಮ್ಮ ಇಡೀ ಬದುಕನ್ನೂ ಸಮಾಜ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಅವರು ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆಯೇ ಅವರ ಸರಳ ಬದುಕನ್ನು ತೋರಿಸುವ ಅವರ ಹಲವು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಚುನಾವಣೆಯಲ್ಲಿ ಹಣವಿಲ್ಲದೆ ಸ್ಪರ್ಧೆಮಾಡಿದ ಅವರು ಕಾಲ್ನಡಿಗೆಯಲ್ಲೇ ಪ್ರಚಾರ ಮಾಡಿ ಹಣ ಮತ್ತು ಅದ್ಧೂರಿ ಪ್ರಚಾರವೇ ಚುನಾವಣೆಯ ಗೆಲುವಿಗೆ ಮುಖ್ಯವಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ನಾನಾ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಕಷ್ಟ ಅರಿತಿದ್ದಾರೆ. ಅವರ ನೈಜ ಕಾಳಜಿಗೆ ಮತದಾರ ಒಲಿದು, ಅವರನ್ನು ಸಂಸತ್ತಿಗೆ ಕಳಿಸಲು ಅಣಿಗೊಳಿಸಿದ್ದಾನೆ. ಆಧ್ಯಾತ್ಮಿಕ ಸಾಧನೆ ಅಧ್ಯಾತ್ಮಿಕ ಬದುಕಿನ ಬಗ್ಗೆ ಸಾಕಷ್ಟು ಆಸ್ಥೆ ಹೊಂದಿರುವ ಸಾರಂಗಿ ಸಮಯ ಸಿಕ್ಕಾಗಲೆಲ್ಲ ಭಗವಂತನ ಸ್ಮರಣೆ, ಧ್ಯಾನದಲ್ಲಿ ಕಳೆಯುತ್ತಾರೆ.

2004 ಮತ್ತು 2009 ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಸಂಸ್ಕೃತ ಬಲ್ಲ ಏಕೈಕ ಸಂಸದ ಸಂಸ್ಕೃತ ಪಂಡಿತರಾಗಿರುವ ಸಾರಂಗಿ, ಸಂಸ್ಕೃತ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಬಲ್ಲ ಏಕೈಕ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೊದಿ ಅವರೂ ಸಾರಂಗಿ ಅವರ ಮೇಲೆ ವಿಶೇಷ ಅಕ್ಕರೆ ಹೊಂದಿದ್ದು, ಒಡಿಶಾಕ್ಕೆ ಬಂದರೆ ಸಾರಂಗಿ ಅವರನ್ನು ಭೇಟಿ ಮಾಡದೆ ಇರುವುದಿಲ್ಲ. ಬಾಲಸೋರ್ ನಲ್ಲಿ ಹದಿನೈದು ವರ್ಷದ ನಂತರ ಬಿಜೆಪಿ ಗೆಲುವು ಸಾಧಿಸಿದೆ 1998, 1999 ಮತ್ತು 2004 ಈ ಮೂರು ಅವಧಿಯನ್ನು ಬಿಟ್ಟರೆ ಬಿಜೆಪಿ ಮತ್ತೆಂದೂ ಗೆಲುವು ಸಾಧಿಸಿರಲಿಲ್ಲ. 2014 ರಲ್ಲಿ ರಬೀಂದ್ರ ಜೈನ್ ಅವರ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಸಾರಂಗಿ ಈ ಬಾರಿ ಗೆಲುವು ಸಾಧಿಸಿದ್ದಾರೆ.

Also read: ಇದನ್ನು ಓದಿದ ಮೇಲೆ ನಿಮಗೇ ಅನ್ನಿಸುತ್ತೆ ಯಾಕೆ ಕಾಂಗ್ರೆಸ್-ನ ಸರ್ದಾರ್ ವಲಭ ಭಾಯ್ ಪಟೇಲ್ ಅವರನ್ನ Iron Man of India ಅಂತ ಕರೆಯುತ್ತೇವೆ!!