ಹೇಡಿ ಪಾಕ್ ಬಂಧಿಸಿರುವ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಿ ಎಂಬ ಕೂಗು ಪಾಕ್-ನಲ್ಲೆ ವ್ಯಾಪಕವಾಗಿ ಕೇಳಿ ಬರುತ್ತಿದೆ..

0
488

ಪುಲ್ವಾಮ ದಾಳಿಯ ನಂತರ ಭಾರತ -ಪಾಕ್ ನಡುವೆ ಚಕಮಕಿಗಳು ನಡೆಯುತ್ತಾನೆ ಇದೆ. ಗಡಿಯಲ್ಲಿ ಪಾಕ್ ನಿತ್ಯವೂ ಕಧನ ವಿರಾಮದ ರೇಖೆಯನ್ನು ದಾಟುತಲ್ಲೇ ಇದೆ. ಇದಕ್ಕೆ ಭಾರತವು ಪ್ರತ್ತುತರವಾಗಿ 300 ಉಗ್ರರನ್ನು ಕೊಂದು ಬುದ್ಧಿ ಕಲಿಸಿದರು ನಾಚಿಕೆಯಿಲ್ಲದ ಪಾಕ್ ಮತ್ತೆ ತನ್ನ ಹೇಡಿತನವನ್ನು ಮೆರೆಯುತ್ತಿದೆ. ಇದೆಲ್ಲವನ್ನು ಹೊಸದು ಹಾಕುವ ವೇಳೆ ಮಿಗ್‌- 21 ವಿಮಾನ ಪತನವಾದ ಬಳಿಕ ಪಾಕಿಸ್ತಾನದ ಪ್ರದೇಶದಲ್ಲಿ ಇಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಅರಣ್ಯವೊಂದರಲ್ಲಿ ಬಿದ್ದ ಅಭಿನಂದನ್‌ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಅವರನ್ನು ಸೇನಾ ಯೋಧರು ಪ್ರಾಣಿಗಳಂತೆ ಕಲ್ಲುಬಂಡೆಗಳ ಮೇಲೇ ಎಳೆದುಕೊಂಡು ಬಂದಿದ್ದಾರೆ.

Also read: ಭಾರತ-ಪಾಕ್ ಯುದ್ಧ ಫಿಕ್ಸ್..! ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ; ರಜೆಯ ಮೇಲೆ ತೆರಳಿದ ಸೈನಿಕರಿಗೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ..

ಅಷ್ಟೇಅಲ್ಲದೆ ಪಾಕ್‌ ಯೋಧರು ಅಭಿನಂದನ್‌ ಅವರ ಕಣ್ಣಿಗೆ ಬಟ್ಟೆಕಟ್ಟಿ, ಕೈಗಳನ್ನು ಹಿಂದಕ್ಕೆ ಕಟ್ಟಿವಾಹನದಲ್ಲಿ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರ ಬಳಿ ಇದ್ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಾನು ಭಾರತದ ಪೈಲಟ್‌ ಅನ್ನು ಸರೆ ಹಿಡಿದಿರುವುದಾಗಿ ತೋರಿಸಲು ಪಾಕಿಸ್ತಾನ ಈ ಬಿಡುಗಡೆ ಮಾಡಿತ್ತು. ವಿಡಿಯೋಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಡಿಯೋವನ್ನು ಡಿಲೀಟ್‌ ಮಾಡಲಾಗಿದೆ. ಭಾರತೀಯ ಸೈನಿಕನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಾಕ್-ನಲ್ಲಿ ಭಾರತ ಪರ ಬ್ಯಾಟಿಂಗ್?

Also read: ಉಗ್ರರ ಮೇಲಿನ ದಾಳಿಗೆ ತತ್ತರಿಸಿದ ಪಾಕ್ ಭಾರತಕ್ಕೆ ಚಾಲೆಂಜ್; ಸೂಕ್ತ ಸ್ಥಳ ಗುರುತಿಸಿ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ ಎಂದ ಇಮ್ರಾನ್ ಖಾನ್..

ಈ ಮಧ್ಯೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಕೂಡಲೇ ಭಾರತಕ್ಕೆ ಕಳುಹಿಸಿ ಎಂಬ ಕೂಗೂ ಪಾಕಿಸ್ತಾನದಲ್ಲಿ ವ್ಯಾಪಕವಾಗುತ್ತಿದೆ. ಇದೀಗ ದೇಶಾದ್ಯಂತ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಬರಲಿ ಎಂಬ ಕೂಗು ಜೋರಾಗಿದೆ. ಇದೇ ವೇಳೆ ಪಾಕಿಸ್ತಾನದಲ್ಲೂ ಸಹ ಸ್ಥಳೀಯರು ಸಾಮಾಜಿಕಾ ಜಾಲತಾಣಗಳಲ್ಲಿ ಅಭಿನಂದನ್ ರನ್ನು ಭಾರತಕ್ಕೆ ಕಳುಹಿಸಿ ಎಂಬ ಸಂದೇಶಗಳನ್ನು ಹಾಕುವ ಮೂಲಕ ಬಹಿರಂಗವಾಗಿ ಭಾರತಕ್ಕೆ ನೆರವಾಗುತ್ತಿದ್ದಾರೆ. ಏಕೆಂದರೆ ಜಿನೆವಾ ಒಪ್ಪಂದ ಮೀರಿದ ಪಾಕ್ ಅಭಿನಂದನ್ ಮೇಲೆ ಹಲ್ಯೇ ನಡೆಸುತ್ತಿದೆ.

ಒಪ್ಪದದ ಪ್ರಕಾರ?

ಒಪ್ಪದದ ಪ್ರಕಾರ ಯುದ್ಧ ಕೈದಿಗಳನ್ನು ಹಿಂಸಿಸಬಾರದು, ಅವರ ಮೇಲೆ ಹಲ್ಲೆ ನಡೆಸಬಾರದು, ಗಾಯಗೊಂಡಿದ್ದರೆ ಉತ್ತಮ ಚಿಕಿತ್ಸೆ ಕೊಡಿಸಬೇಕು, ಸೌಮ್ಯವಾಗಿ ವಿಚಾರಣೆಗೆ ಒಳಪಡಿಸಬೇಕು, ಕೈದಿಯ ದೇಶಕ್ಕೆ ಆತನ ಬಂಧನದ ಬಗ್ಗೆ ಮಾಹಿತಿ ನೀಡಬೇಕು, ಆತನ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು, ಆತನ ಸೇನಾ ರಾರ‍ಯಂಕಿಂಗ್‌ಗೆ ತಕ್ಕಂತೆ ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ವಿಚಾರಣೆಯ ನಂತರ ಆತನನ್ನು ಮಾತೃದೇಶಕ್ಕೆ ವಾಪಸ್‌ ನೀಡಬೇಕು ಎಂದು ಜಿನೆವಾ ಒಪ್ಪಂದದಲ್ಲಿ ಹೇಳಲಾಗಿದೆ. ಅದನ್ನು ಲೆಕ್ಕಿಸದೆ ಪಾಪಿಗಳು ಮಾಡಿದ ಕೃತ್ಯಕ್ಕೆ ಸರಿಯಾದ ಬೆಲೆಯನ್ನು ತೆರೆಯಬೇಕಾಗುತ್ತೆ ಪಾಕ್. ಎಂದು ಭಾರತೀಯ ಸೈನ್ಯೆ ತಿಳಿಸಿದೆ.

ಹಿಂಸೆ ನೀಡಿ ಅಭಿನಂದನ್ ಅವರಿಂದ ಮಾಹಿತಿ ಕಲೆ;

Also read: 300 ರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಲು ಏರ್ ಸರ್ಜಿಕಲ್ ಸ್ಟ್ರೈಕ್ ದಾಳಿಯ ಪ್ಲಾನ್ ಹೀಗಿತ್ತು ಗೊತ್ತಾ?

ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಐಎಎಫ್ ಪೈಲಟ್ ನಚಿಕೇತರಂತೆಯೇ ಪಾಕಿಸ್ತಾನ ಅಭಿನಂದನ್ ರನ್ನೂ ಬಿಡುಗಡೆ ಮಾಡುತ್ತದೆ ಎಂಬ ನಿರೀಕ್ಷೆಯನ್ನಂತೂ ನಾವು ಇಟ್ಟುಕೊಳ್ಳುವಂತಿಲ್ಲ. ಕಾರಣ ಈಗಾಗಲೇ ಭಾರತದ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಗಳ ಹೊಡೆತದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ ಭಾರತದ ಮುಂದಿನ ನಡೆ ಏನಿರಬಹುದು ಎಂಬ ವಿಚಾರದ ಕುರಿತು ತಲೆ ಕೆಡಿಸಿಕೊಂಡಿದೆ. ಇದೇ ಕಾರಣಕ್ಕೆ ಪ್ರಸ್ತುತ ಬಂಧನಕ್ಕೀಡಾಗಿರುವ ಪೈಲಟ್ ಅಭಿನಂದನ್ ಮೂಲಕ ಮಾಹಿತಿ ಹೊರತೆಗೆಯುವ ಕೆಲಸ ಮಾಡಲಿದೆ. ಇದೇ ಕಾರಣಕ್ಕೆ ಅಭಿನಂದನ್ ಅವರು ಜೀವಂತವಾಗಿರುವುದು ಪಾಕಿಸ್ತಾನಕ್ಕೂ ಮುಖ್ಯ ಎಂದು ಮೂಲಗಳು ತಿಳಿಸಿವೆ.