ಪ್ರವಾಹದಲ್ಲಿ ಜೀವ ಉಳಿಸಿಕೊಂಡು ಮನೆ ಕಾಗದ ಪತ್ರಗಳನ್ನೆ ಕಳೆದುಕೊಂಡ ಸಂತ್ರಸ್ತರಿಗೆ ಆಧಾರ್ ಇದ್ರೇನೆ ರೇಷನ್, ಪರಿಹಾರ ಚೆಕ್ ಕೊಡ್ತಾರಂತೆ! ಇದ್ಯಾವ ನ್ಯಾಯ??

0
184

ಕರ್ನಾಟಕದಲ್ಲಿ ಪ್ರವಾಹದಿಂದ ಜನರು ಎಲ್ಲವನ್ನೂ ಕಳೆದುಕೊಂಡು ಪರದಾಡುತ್ತಿದ್ದಾರೆ. ತಿನ್ನಲೂ ಊಟಕ್ಕೂ ಕಷ್ಟವಾಗಿದ್ದು. ನೀರಲ್ಲಿ ಮನೆಗಳೇ ಕೊಚ್ಚಿಹೋಗಿದ್ದು ಇಡಿ ದೇಶಕ್ಕೆ ಗೊತ್ತಿದೆ ಆದರೆ ಪರಿಹಾರ ನೀಡುತ್ತಿರುವ ಅಧಿಕಾರಿಗಳಿಗೆ ಮಾತ್ರ ತಿಳಿಯದೆ ಸಂತ್ರಸ್ತರಿಗೆ ರೇಷನ್ ಮತ್ತು ಪರಿಹಾರ ನೀಡಲು ಆಧಾರ್ ಕಾರ್ಡ್ ಬೇಕೇಬೇಕು ಎಂದು ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು. ಸಂತ್ರಸ್ತರು ಕಣ್ಣಿರಿನಲ್ಲಿ ಕೈತೊಳೆಯುತಿದ್ದಾರೆ.

ಹೌದು ಉತ್ತರ ಕರ್ನಾಟಕದ ಜನರು ಕೈ ಯತ್ತಿ ಬಿಕ್ಷೆ ಬೇಡುವಂತೆ ಆಗಿದ್ದು, ತಿನ್ನೋಕೆ ಆಹಾರವಿಲ್ಲದೆ, ಬದುಕೋಕೆ ಮನೆಯಿಲ್ಲದೆ ಬೀದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದರ ಮಧ್ಯೆ ಚೆಕ್ ಹಾಗೂ ರೇಷನ್ ಪಡೆಯೋಕೆ ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಸಂತ್ರಸ್ತರಿಗೆ ಗೋಳಾಡಿಸುತ್ತಿದ್ದು, ಇದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡಿಯೂರಿನಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಜನರು ಬೇಸತ್ತು ಪರಿಹಾರವೂ ಬೇಡ ನಿಮ್ಮ ರೇಷನ್ ಬೇಡ ಎನ್ನುವಂತ ಪರಿಸ್ಥಿತಿ ಬಂದಿದ್ದು. ನೀರಿನಲ್ಲಿ ದಾಖಲಾತಿಗಳು ಕೊಚ್ಚಿಕೊಂಡು ಹೋಗಿದ್ದು ತಿಳಿದರು ಅಧಿಕಾರಿಗಳು ಸಂತ್ರಸ್ತರಿಗೆ ತೊಂದರೆ ಮಾಡುತ್ತಿದ್ದಾರೆ.

ಎಲ್ಲಾದರೂ ಹೋಗಿ ಆಧಾರ್ ಕೊಡಿ

ರೇಶನ್ ಮತ್ತು ಪರಿಹಾರ ನೀಡುತ್ತಿರುವ ಅಧಿಕಾರಿಗಳು ಸಂತ್ರಸ್ತರಿಗೆ ಎಲ್ಲಾದರೂ ಹೋಗಿ ಏನಾದರೂ ಮಾಡಿ, ಆಧಾರ್ ತಗೆದುಕೊಂಡು ಬಂದರೇನೆ ನಿಮಗೆ ಚೆಕ್ ಕೊಡುತ್ತೇವೆ ಎಂದು ಅಧಿಕಾರಿಗಳು ಸಂತ್ರಸ್ತರನ್ನು ಪೀಡಿಸುತ್ತಿದ್ದಾರೆ. ಪ್ರವಾಹಕ್ಕೆ ಕೆಲವರ ರೇಷನ್ ಕಾರ್ಡ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ರೇಷನ್ ಸಿಗದೆ, ಕೆಲಸವೂ ಇಲ್ಲದೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಈ ನೋವಿನಲ್ಲೂ ಅಸಾಹಯಕರ ಜೀವ ಹಿಂಡುತ್ತಿರುವ ಅಧಿಕಾರಿಗಳ ಈ ಕಿರುಕುಳದಿಂದ ಸಂತ್ರಸ್ತರು ಕಣ್ಣೀರು ಹಾಕುವಂತಾಗಿದೆ. ಪ್ರವಾಹದಿಂದ ಏನೆಲ್ಲಾ ಅನಾಹುತಗಳಾಗಿವೆ ಅನ್ನೋದು ರಾಜ್ಯದ ಜನತೆಗೆ ತಿಳಿದಿದೆ. ಪ್ರವಾಹ ಪೀಡಿತ ಪ್ರದೇಶದ ಜನರ ಬದುಕಿನ ಬಂಡಿಯ ಚಕ್ರಗಳೇ ಕಳಚಿಕೊಂಡಿವೆ. ಈಗ ಮತ್ತೆ ಆರಂಭದಿಂದ ಅವರು ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಒಂದು ಹೊತ್ತಿನ ಊಟಕ್ಕೂ ಬೇಡಿ ತಿನ್ನೋ ಪರಿಸ್ಥಿತಿ ಬಂದಿದೆ. ಹಾಕೋಳೋಕೆ ಇರೋ ಒಂದೇರಡು ಬಟ್ಟೆಯಲ್ಲೆ ಕಂಡವರ ಮನೆಯಲ್ಲಿ ಜೀವನ ನಡೆಸುವ ಹಾಗಾಗಿದೆ. ಆದರೆ ಇದರ ಮಧ್ಯೆ ಸ್ಥಳೀಯ ಅಧಿಕಾರಿಗಳ ಕಾಟ ಸಹಿಸುವುದು ಕಷ್ಟವಾಗಿದ್ದು, ಈ ಬಗ್ಗೆ ಸರ್ಕಾರ ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡಲೇ ಅಧಿಕಾರಿಗೆ ತಿಳಿ ಹೇಳಿ ಬದಕನ್ನೇ ಕಳೆದುಕೊಂಡವರಿಗೆ ನೆರವನ್ನು ನೀಡಲು ಚೆಕ್ ಕೊಟ್ಟಿದ್ದೀವಿ ಎಂದು ಸಾಧನೆ ಮಾಡಿರುವ ರೀತಿ ಹೇಳಿಕೊಳ್ಳುವ ನಾಯಕರು ಇತ್ತ ಗಮನಕೊಡಿ. ಪ್ರವಾಹದಲ್ಲಿ ಎಲ್ಲಾ ಕಳೆದುಕೊಂಡವರ ಬಳಿ ಆಧಾರ ಕಾರ್ಡ್ ಎಲ್ಲಿರುತ್ತೆ? ನಿಮ್ಮ ಅಧಿಕಾರಿಗಳಿಗೆ ಚೆಕ್ ಕೊಡೋಕೆ ಆಧಾರ್ ಬೇಕಂತೆ, ರೇಷನ್ ತಗೋಕೆ ರೇಷನ್ ಕಾರ್ಡ್ ಬೇಕಂತೆ. ಇದು ಯಾವ ನ್ಯಾಯ ಎನ್ನುವ ಪ್ರಶ್ನೆಗಳನ್ನು ರಾಜ್ಯದ ಜನರು ಕೇಳುತ್ತಿದ್ದಾರೆ.

Also read: ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಕರ್ನಾಟಕದ ಜಾನುವಾರು ಹತ್ಯಾ ನಿಷೇಧ ಮಸೂದೆಯ ಬಗ್ಗೆ ದ್ವನಿ ಎತ್ತಿದ ಬಿಜಿಪಿ ಸರ್ಕಾರ; 2010 ರ ಮಸೂದೆಯನ್ನು ಜಾರಿಗೆ ತರುತ್ತ?