10ನೇ ತರಗತಿ ಪಾಸಾದವರಿಗೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಉದ್ಯೋಗ ಅವಕಾಶ..

0
539

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ 309 ಅಸಿಸ್ಟೆಂಟ್ ಟೆಕ್ನಿಶಿಯನ್, ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ. ಜನವರಿ 27 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಗೆ ಸಂಬಧಪಟ್ಟ ಮಾಹಿತಿ:

ಸಂಸ್ಥೆ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ.

ಹುದ್ದೆಯ ಹೆಸರು: ಅಸಿಸ್ಟೆಂಟ್ ಟೆಕ್ನಿಶಿಯನ್, ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್

ವಿದ್ಯಾರ್ಹತೆ: ಅಸಿಸ್ಟೆಂಟ್ ಟೆಕ್ನಿಶಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರು 3 ವರ್ಷದ ಡಿಪ್ಲೊಮಾವನ್ನು ಮೆಕಾನಿಕಲ್ ಇಂಜನಿಯರಿಂಗ್/ಕೆಮಿಕಲ್ ಇಂಜಿನಿಯರಿಂಗ್/ಪೆಟ್ರೋಲಿಯಂ ಇಂಜನಿಯರಿಂಗ್‌ನಲ್ಲಿ ಪಡೆದಿರಬೇಕು.

ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸೈನ್ಸ್ ಮತ್ತು ಟ್ರೇಡ್ ಪ್ರಮಾಣ ಪತ್ರವನ್ನು ಫಿಟ್ಟಿಂಗ್ ಅಥವ ಮೆಕಾನಿಕ್‌ ಟ್ರೇಡ್ ಅನ್ನು ಹೊಂದಿರಬೇಕು.

ವಯೋಮಿತಿ: ಜನವರಿ 27, 2019ಕ್ಕೆ ಅನ್ವಯವಾಗುವಂತೆ. ಸಾಮಾನ್ಯ ವರ್ಗದವರಿಗೆ 18 ರಿಂದ 30 ವರ್ಷ SC-ST, OBC ಅಭ್ಯರ್ಥಿಗಳಿಗೆ 18 ರಿಂದ 33 ವರ್ಷ, ಎಸ್‌ಸಿ/ಎಸ್‌ಟಿ 18 ರಿಂದ 35 ವರ್ಷ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಓಬಿಸಿ ವರ್ಗದವರಿಗೆ 370 ರೂ., ಎಸ್‌ಸಿ/ಎಸ್‌ಟಿ/ಅಂಗವಿಕಲ/ನಿವೃತ್ತ ಯೋಧರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ವೇತನ ಶ್ರೇಣಿ : ಅಸಿಸ್ಟೆಂಟ್ ಟೆಕ್ನಿಶಿಯನ್ 12000-27000 ಪ್ರತಿ ತಿಂಗಳು. ಜ್ಯೂನಿಯರ್ ಅಸಿಸ್ಟೆಂಟ್ ಟೆಕ್ನಿಶಿಯನ್ 11000-24000 ಪ್ರತಿ ತಿಂಗಳು.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಕಂಪ್ಯೂಟರ್ ಪರೀಕ್ಷೆ, ದೈಹಿಕ ಪರೀಕ್ಷೆ, ಸ್ಕಿಲ್ ಟೆಸ್ಟ್‌ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: https://goo.gl/VmMqw ಕ್ಲಿಕ್ ಮಾಡಿ