ಹಳೇ 500 ಮತ್ತು 1000ರ ನೋಟುಗಳನ್ನು ವಾಪಸ್ ತೆಗೆದುಕೊಂಡು ಹೋದ ಮೇಲೆ ಏನು ಮಾಡ್ತಾರೆ ??

0
882

ತುಂಬಾ ಜನಕ್ಕೆ ಇಂಥದ್ದೊಂದು ಅನುಮಾನವಿದೆ, ನಮ್ಮ ಬಳಿ ಇರುವ ಹಳೇ 500 ಮತ್ತು 1000ರ ನೋಟುಗಳನ್ನು ವಾಪಸ್ ತೆಗೆದುಕೊಂಡು ಹೋದ ಮೇಲೆ ಏನು ಮಾಡ್ತಾರೆ ಅಂತ. ಇದಕ್ಕೆ ಉತ್ತರ ಸಿಕ್ಕಿದೆ. ಆರ್ ಬಿ ಐ ನಿಮ್ಮಲ್ಲಿದ್ದ ಹಣ ವಾಪಸ್ ಪಡೆದ ಮೇಲೆ ಅದನ್ನು ಸುಡಲ್ಲ, ಆದರೆ ಅದನ್ನು ಪೀಸ್ ಪೀಸ್ ಗಳಾಗಿ ಮಾಡಿ, ಫ್ಲೈವುಡ್ ಮಾಡುವವರಿಗೆ ಕೊಟ್ಟು ಬಿಡುತ್ತದೆ. ಹೀಗಂತ ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.

ಕೇರಳದ ಕಣ್ಣೂರಿನಲ್ಲಿರುವ ಫ್ಲೈವುಡ್ ಫ್ಯಾಕ್ಟರಿಗೆ ಈ ಚೂರು ಮಾಡಿರುವ ನೋಟಿನ ಪೀಸುಗಳು ಹೋಗುತ್ತವೆ. ಅಲ್ಲಿ ಇದನ್ನು ಇನ್ನಷ್ಟು ಸಂಕುಚಿತಗೊಳಿಸಿ ಅವುಗಳಿಂದಲೇ ಫ್ಲೈವುಡ್ ಮಾಡಲಾಗುತ್ತದೆ. 1962 ರಿಂದಲೂ ಈ ಫ್ಯಾಕ್ಟರಿ ನಡೆಯುತ್ತಿದ್ದು, ಇದು ಶೇ.5 ರಷ್ಟು ಪೇಪರ್ ಮತ್ತು ಶೇ. 95 ರಷ್ಟು ಮರದ ಪೀಸುಗಳನ್ನು ಬಳಸಿ ಫ್ಲೈವುಡ್ ಮತ್ತು ಕಾರ್ಡ್ ಬೋರ್ಡ್ ಗಳನ್ನು ಮಾಡುತ್ತದೆ.

ಕಳೆದ ಮೂರು ವಾರಗಳಲ್ಲಿ ಈ ರೀತಿ ನಾಶವಾದ 80 ಮೆಟ್ರಿಕ್ ಟನ್ ನಷ್ಟು ನೋಟಿನ ಪೀಸುಗಳು ಫ್ಯಾಕ್ಟರಿಗೆ ಬಂದಿವೆ. ಇವುಗಳನ್ನು ಮರದ ಪೀಸಿನ ಜೊತೆ ಸೇರಿಸಿ ಹುಶಾರಾಗಿ ಫ್ಲೈವುಡ್ ಮಾಡುತ್ತೇವೆ ಎಂದು ಫ್ಯಾಕ್ಟರಿ ಹೇಳಿಕೊಂಡಿದೆ.