2 ಲಕ್ಷ ವರ್ಷ ಹಳೆಯ ನಿಗೂಢ ನಗರ ಪತ್ತೆ 

0
2545

ಅಟ್ಲಾಂಟಿಕ್ ಗರ್ಭದಲ್ಲಿ ಅಡಗಿದೆ ಪುರಾತನ ನಗರ

ಭೂಮಿಗೆ ದಶಲಕ್ಷ ವರ್ಷಗಳ ಇತಿಹಾಸ ಇದೆ. ಪೂರ್ವಜರು ತಮ್ಮ ಪರಂಪರೆ, ಆಚರಣೆಯ ಮಹತ್ವ ತಿಳಿಸಲು ಭವ್ಯ ಕಟ್ಟಡ ನಿರ್ಮಿಸಿದ್ದರು. ಇಂತಹದೇ ಒಂದು ಭವ್ಯ ನಗರಿ ಸಮುದ್ರಾಳದಲ್ಲಿ ಶೋಧವಾಗಿದೆ.

ಹೌದು.. ಅಟ್ಲಾಂಟಿಕಾ ಮಹಾಸಾಗಾರದಲ್ಲಿ ಪಿರಾಮಿಡ್ ಆಕಾರದಲ್ಲಿರುವ ಕಟ್ಟಡ, ನಗರ ಬೆಳಕಿಗೆ ಬಂದಿದೆ. ಕ್ಯೂಬಾ ದೇಶದ ಸನೀಹದಲ್ಲಿ ಪುರಾತನ ನಗರಿಯ ಆವಿಷ್ಕಾರವಾಗಿದೆ. ಸುಮಾರು ೨೦೦,೦೦೦ ವರ್ಷ ಹಳೆಯ ನಗರ ಸಂಚಲವನ್ನೇ ಸೃಷ್ಠಿಸಿದೆ.

ಈ ನಗರ ಅಟ್ಲಾಂಟಿಕಾ ಮಹಾಸಾಗರದ ಮಧ್ಯದಲ್ಲಿ ಸುಮಾರು ೨೦೦೦ ಅಡಿ ಆಳದಲ್ಲಿ ಕಂಡು ಬಂದಿದೆ. ಅಂದಾಜಿನ ಪ್ರಕಾರ ೫೦ ಸಾವಿರ ವರ್ಷಗಳ ಹಿಂದೆ ಈ ನಗರ ನೀರಿನಲ್ಲಿ ಮುಳಗಿರುವ ಬಗ್ಗೆ ತಿಳಿದು ಬಂದಿದೆ. ಕ್ಯೂಬಾ ಸಂಶೋಧಕರ ಅನ್ವೇಷಣೆಯ ಪ್ರತಿಫಲವಾಗಿ ಈ ನಗರ ವಿಶ್ವಕ್ಕೆ ಪರಿಚಯವಾಗಿದೆ. ಬರಮುಡಾ ಟ್ರೈಂಗಲ್ ಅಥವಾ ಡೇವಿಲ್ಸ್ ಟ್ರೈಂಗಲ್ ಸನಿಹದಲ್ಲಿ ಪತ್ತೆಯಾದ ಮಾಯಾನಗರಿ ವಿಜ್ಞಾನಿಗಳ ತರ್ಕವನ್ನು ಹೆಚ್ಚಿಸಿದೆ.

ಈ ನಗರದ ಅಧ್ಯಯನ ಕಾರ್ಯವನ್ನು ಫ್ಲೋರೈಡ್ ಸ್ಟೇಟ್ ಯೂನಿವರ್ಸಿಟಿ ಮಾಡುತ್ತಿದೆ. ಈ ವಿಶ್ವವದ್ಯಾಲಯವು ನೀರಿನಾಳದಲ್ಲಿ ಸಂಶೋಧನೆಗೆ ಹೆಸರುವಾಸಿಯಾಗಿದೆ.

ನೀರಿನಾಳದಲ್ಲಿನ ನಗರವನ್ನು ಪತ್ತೆ ಮಾಡಲು ವಿಜ್ಞಾನಿಗಳು ರೋಬೋಟ್ ಬಳಿಸಿದ್ದಾರೆ. ಇದು ಸೆರೆ ಹಿಡಿದ ಚಿತ್ರಗಳ ಅನುಸಾರ ಸಂಶೋಧಕರು ಕೆಲಸವನ್ನು ಆರಂಭಿಸಿದ್ದಾರೆ. ಈ ನಗರವನ್ನು ಗ್ರ್ಯಾನೆಟ್ ಅಥವಾ ನುಣಪಾದ ಕಲ್ಲಿನಿಂದ ನಿರ್ಮಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ನ್ಯಾಷನಲ್ ಜಿಯಾಗ್ರಾಫಿಕ್ ಹಿರಿಯ ಸಂಪಾದಕರು ಈ ಅನ್ವೇಷಣೆಯ ಕುರಿತು ಕುತೂಹಲ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಯಾರಾದರೂ ಅಷ್ಟು ಆಳದಲ್ಲಿ ಉಳಿಯಲು ಸಾಧ್ಯನಾ ಎಂದು ಕೇಳಿದ್ರೆ, ಅವರು ಸಮುದ್ರಾಳದಲ್ಲಿ ನಗರವನ್ನು ಕಂಡು ಬರಬಹುದು ಎಂದಿದ್ದಾರೆ.