ಆಲಿವ್ ಆಯಿಲ್ ಬಳಕೆ ಆರೋಗ್ಯಕ್ಕೆ ಉತ್ತಮ ಉಪಯೋಗಗಳು

0
2503

ಆಲಿವ್ ಆಯಿಲ್ ಬಳಕೆ ಆರೋಗ್ಯಕ್ಕೆ ಉತ್ತಮ

ಆಲಿವ್‌ ಹಣ್ಣುಗಳು, ಆಲಿವ್‌ ಎಲೆ ಮತ್ತು ಆಲಿವ್‌ ತೈಲಗಳನ್ನು ಸೇವಿಸುವುದರಿಂದ ಲಭಿಸುವ ಆರೋಗ್ಯ ಅನುಕೂಲಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ಪುಷ್ಟಿ ನೀಡುತ್ತವೆ ಔಷಧೀಯ ಚಹಾಗಳಲ್ಲಿ ಆಲಿವ್‌ ಎಲೆಗಳನ್ನು ಬಳಸಲಾಗಿದೆ. ಆಲಿವ್‌ಗಳನ್ನು ಈಗ ನವೀಕರಿಸಬಹುದಾದ ಇಂಧನ ಮೂಲವನ್ನಾಗಿ ಬಳಸುವುದನ್ನು ಕಾಣಲಾಗಿದೆ. ಆಲಿವ್‌ ಗಿಡಗಳಿಂದ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಇಂಧನ ಮೂಲವನ್ನಾಗಿ ಬಳಸಲಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಮರವನ್ನು ಸುಟ್ಟು ಉತ್ಪಾದಿಸುವ ಇಂಧನದ 2.5ರಷ್ಟು ಹೆಚ್ಚು ಪ್ರಮಾಣದ ಇಂಧನವು ಆಲಿವ್‌ ತ್ಯಾಜ್ಯದಿಂದ ಲಭಿಸುವುದು. ಆಲಿವ್‌ ತ್ಯಾಜ್ಯ ಸುಡುವುದರಿಂದ ಬಿಡುಗಡೆಯಾಗುವ ಹೊಗೆಯು ನೆರೆಹೊರೆಯವರು ಅಥವಾ ವಾತಾವರಣಕ್ಕೆ ಯಾವುದೇ ಪ್ರತಿಕೂಲ ಪರಿಣಾಮ ಬೀರದು, ಒಲೆಯಲ್ಲಿ ಉಳಿದುಕೊಂಡ ಬೂದಿಯನ್ನು ತೋಟಗಳು ಮತ್ತು ಸಸ್ಯಗಳನ್ನು ಫಲವತ್ತಾಗಿಲು ಬಳಸಬಹುದು. ಈ ಕಾರ್ಯವಿಧಾನವು ಮಧ್ಯಪ್ರಾಚ್ಯ ಹಾಗೂ ಅಮೆರಿಕಾ ದೇಶದಲ್ಲಿ ಹಕ್ಕುಸ್ವಾಮ್ಯ ಹೊಂದಿದೆ

ಆಲಿವ್ ಆಯಿಲ್ ಬಳಕೆಯ ಉಪಯೋಗಗಳು:-

*ಗ್ಲೋಯಿಂಗ್ ತ್ವಚೆ ಪಡೆಯಲು ಮಹಿಳೆಯರು ಏನೆಲ್ಲಾ ಮಾಡುತ್ತಾರೆ. ಆಲಿವ್‌ ಆಯಿಲ್‌ ಬೆಸ್ಟ್‌. ಆಲಿವ್ ಆಯಿಲ್‌ನ್ನು ಮುಖದ ಮೇಲೆ ಹಚ್ಚುವುದರಿಂದ ಮುಖಕ್ಕೆ ಮತ್ತಷ್ಟು ಹೊಳೆಯುತ್ತದೆ.

olive-oil3

*ಈ ತೈಲ ಆ್ಯಂಟಿಆಕ್ಸಿಡೆಂಟ್‌, ಮಿನರಲ್‌ ಮತ್ತು ನ್ಯಾಚುರಲ್‌ ಫ್ಯಾಟಿಆಸಿಡ್‌ನಿಂದ ತುಂಬಿದೆ. ಇವು ತ್ವಚೆಗೆ ಅತ್ಯಂತ ಯೋಗ್ಯವಾಗಿದೆ. ಆದುದರಿಂದ ಆಲಿವ್‌ ಆಯಿಲ್‌ ಸ್ಕ್ರಬ್‌ ತಯಾರಿಸಿ ತ್ವಚೆಗೆ ಮತ್ತಷ್ಟು ಹೊಳಪು ನೀಡಿ.

olive-oil4

*ಕಣ್ಣಿಗೆ ಹೊಳಪು: ಮಲಗುವ ಮೊದಲು ಕಣ್ಣಿನ ಸುತ್ತ ಆಲಿವ್ ಎಣ್ಣೆ ಹಚ್ಚಿ. ವಿಟಮಿನ್ ತುಂಬಿದ ಎಣ್ಣೆ ನಿಮ್ಮ ಕಣ್ಣಿಗೆ ಹೊಳಪು ನೀಡುತ್ತದೆ.

olive-oil7

*ಕೂದಲಿಗೆ ಆಲಿವ್: ಎರಡು ಟೇಬಲ್ ಸ್ಪೂನ್ ಆಲಿವ್ ಆಯಿಲ್‌ಗೆ ಒಂದು ಮೊಟ್ಟೆ ಹಾಗೂ ನಿಂಬೆ ರಸ ಹಾಕಿ ಕದಡಿ. ಇದನ್ನು ತಲೆಗೆ ಅಪ್ಲೈ ಮಾಡಿ ಹದಿನೈದು ನಿಮಿಷ ಬಿಡಿ. ನಂತರ ಚೆನ್ನಾಗಿ ತೊಳೆಯಿರಿ. ಕೂದಲು ನಯವಾಗಿ ಹೊಳಪು ಬರುತ್ತದೆ.

olive-oil-1

* ಬಾಡಿ ಲೋಷನ್: ಕೃತಕ ಬಾಡಿ ಲೋಷನ್‌ಗಳ ಬದಲಿಗೆ ಆಲಿವ್ ಆಯಿಲ್ ಬಳಸಿದರೆ ತ್ವಚೆ ಸುಕೋಮಲವಾಗುತ್ತದೆ.

olive-oil2

* ಆಲಿವ್ ಸ್ನಾನ : ಸ್ನಾನದ ನೀರಿಗೆ 5 ಚಮಚ ಆಲಿವ್ ಆಯಿಲ್ ಹಾಕಿ ಸ್ನಾನ ಮಾಡಿದರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.

olive-oil-6

*ಆಲಿವ್ ಆಯಿಲ್ ಒಮೆಗಾ 3 ಫ್ಯಾಟಿ ಆಸಿಡುಗಳಿರುತ್ತವೆ. ಅದರಲ್ಲಿ ಪೌಷ್ಠಿಕಾಂಶ ಇರುವುದು ಸುಳ್ಳಲ್ಲ.  ಆದರೆ ಅತೀ ಉಷ್ಣತೆಯಲ್ಲಿ ಅಡುಗೆಯಾಗುವಾಗ ಈ ಗುಣ ಒಡೆದು ಹೋಗುತ್ತದೆ. ಹಸಿಯಾದ ಆಯಿಲನ್ನು ಹಾಕಿ ಸೇವಿಸುವುದರಿಂದ ಉತ್ತಮ.

olive-oil-5

ಈ ಸ್ಕ್ರಬ್‌ನ್ನು ನೀವು ಒಡೆದ ಹಿಮ್ಮಡಿಯನ್ನು ಸರಿಪಡಿಸಲು ಸಹ ಬಳಕೆ ಮಾಡಬಹುದು. ರಾತ್ರಿ ಮಲಗುವ ಮುನ್ನ ಈ ಸ್ಕ್ರಬ್‌ ಬಳಕೆ ಮಾಡಿ ಮಾಯಿಶ್ಚರೈಸರ್‌ ಹಚ್ಚಿ. ಇದರ ತೇವಾಂಶ ಹಾಗೆ ಉಳಿಸಿಕೊಳ್ಳಲು ಸಾಕ್ಸ್‌ ಧರಿಸಿ ಮಲಗಿ ಸುಕೊಮಲ ತ್ವಚೆ ನಿಮ್ಮದಾಗಿಸಿಕೊಳ್ಳಿ.