ರಜೆಯಲ್ಲಿ ಗೋವಾಕ್ಕೆ ಹೋಗೋದಕ್ಕೆ ಆಗಲಿಲ್ಲ ಅಂದ್ರೆ ನಮ್ಮ ರಾಜ್ಯದ್ದೇ ಆದ ಓಂ ಬೀಚ್-ಗೆ ಹೋಗಿ!!

0
1791

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು ಗೋಕರ್ಣ. ಇದು ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸಂಗಮ ತಟದಲ್ಲಿದೆ. ಎರಡು ನದಿಗಳು ಸೇರುವ ಆಕಾರವು ಗೋವಿನ ಕಿವಿಯನ್ನು ಹೋಲುವಂತಿದೆ. ಇದೇ ಕಾರಣದಿಂದ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ.

ಈ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ.

ಗೋಕರ್ಣ ಬೀಚ್ ಸೇರಿದಂತೆ ಅರ್ಧ ಚಂದ್ರಾಕೃತಿಯ ಬೀಚ್, ಓಂ ಬೀಚ್, ಪ್ಯಾರಾಡೈಸ್ ಬೀಚ್, ಕುಡ್ಲೆ ಬೀಚ್‌ಗಳನ್ನು ನೋಡಬಹುದು. ಗೋಕರ್ಣ ಬೀಚ್ ಗೋಕರ್ಣದ ಉತ್ತರ ಭಾಗಕ್ಕಿದೆ. ಉಳಿದ ನಾಲ್ಕು ಬೀಚ್‌ಗಳು ಗೋಕರ್ಣದ ದಕ್ಷಿಣ ಭಾಗಕ್ಕಿದೆ.

ಓಂ ಬೀಚ್‌

ತಾಜಾ ನೀರಿನಿಂದ ಎರಡು ಭಾಗವಾಗಿರುವ ಈ ಬೀಚ್‌ ಓಂ ನಂತೆ ಕಂಡು ಬರುವುದರಿಂದ ಇದನ್ನು ಓಂ ಬೀಚ್‌ ಎಂದು ಕರೆಯಲಾಗುತ್ತದೆ. ಈ ಬೀಚ್‌ನ ಸುತ್ತಮುತ್ತಲು ಹಸಿರು ಸಿರಿಯಿಂದ ತುಂಬಿದೆ. ಇಲ್ಲಿ ನಿಮಗೆ ಉಡುಗೆಯಿಂದ ಸಂಪೂರ್ಣ ಬಿಡುಗಡೆಯೂ ಸಿಗುತ್ತದೆ.

ಗೋಕರ್ಣ ಸಮೀಪದ ಓಂ ಬೀಚ್. ದೇವನಾಗರಿಲಿಪಿಯ ಓಂಕಾರದ ರೂಪವನ್ನು ಹೊಂದಿರುವ ಈ ಕಡಲತೀರದ ಹಿಂದಿನ ಹೆಸರು ದೋಣಿಬಯಲು. ಜಾಗತಿಕ ಪ್ರವಾಸಿ ಭೂಪಟದಲ್ಲಿ ಗುರುತಿಸಲ್ಪಟ್ಟ ಈ ಸಾಗರತೀರವು ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಗೋಕರ್ಣದಲ್ಲಿ ಆತ್ಮಲಿಂಗ ಮುಟ್ಟಿದ ಮೇಲೆ ಅನೇಕ ಭಕ್ತರು ಮರೆಯದೆ ಭೇಟಿ ಕೊಡುವ ಸ್ಥಳ ಓಂ ಬೀಚ್. ಓಂ ಆಕಾರದಲ್ಲಿ ಇಲ್ಲಿ ಸಮುದ್ರ ತೀರ ಇರುವುದರಿಂದ ಅದೇ ಹೆಸರು ಬಂದಿದೆ. ಯಾವುದೇ ಕಾಲದಲ್ಲಿ ಬೇಕಾದರೂ ನೋಡಬಹುದಾದ ತಾಣ ಇದು. ಒಂದೆಡೆ ಪಶ್ಚಿಮ ಘಟ್ಟದ ಹಸಿರು ಇನ್ನೊಂದೆಡೆ ತಿಳಿ ನೀರಿನ ಕಣಿವೆ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಕಡಲ ಸೌಂದರ್ಯ ವರ್ಣಿಸಲಸಾಧ್ಯ. ಓಂ ಬೀಚ್ ಗೋಕರ್ಣ ನಗರದಿಂದ 6ಕಿಮೀ ದೂರದಲ್ಲಿದೆ. ಇಲ್ಲಿಗೆ ಕಾಲ್ನಡಿಗೆ ಅಥವಾ ಆಟೋ ರಿಕ್ಷಾದ ಮೂಲಕ ಭೇಟಿ ನೀಡಬಹುದು. ರಷ್ಯಾ, ಇಸ್ರೇಲ್ ಮೊದಲಾದ ೮೦ಕ್ಕೂ ಹೆಚ್ಚಿನ ರಾಷ್ಟ್ರಗಳ ವಿದೇಶೀ ಪ್ರವಾಸಿಗಳು ಇಲ್ಲಿಗೆ ಪ್ರತಿವರ್ಷ ಭೇಟಿನೀಡುಇಟಲಿತ್ತಾರೆ.