ಬಹುಭಾಷಾ ನಟ ಓಂಪುರಿ ಹೃದಯಾಘಾತದಿಂದ ನಿಧನ

0
661

ಮುಂಬೈ: ಬಹುಭಾಷಾ ನಟ ಓಂಪುರಿ ಇನ್ನಿಲ್ಲ. 66 ವರ್ಷದ ಓಂಪುರಿ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಬೈನ ಅಂಧೇರಿಯಲ್ಲಿರುವ ನಟ ಓಂಪುರಿ ಅವರ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬುದ ಮೂಲಗಳು ತಿಳಿಸಿವೆ. ಖ್ಯಾತ ಚಿತ್ರ ನಿರ್ದೇಶಕ/ನಿರ್ಮಾಪಕ ಅಶೋಕ್ ಪಂಡಿತ್ ಅವರು ಓಂಪುರಿ ನಿಧನ ಸುದ್ದಿಯನ್ನು ಸ್ಪಷ್ಟಪಡಿಸಿದ್ದು, ಮನೆಯಲ್ಲೇ ಅವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ompuri

ಓಂಪುರಿ ಅವರು 1950 ಅಕ್ಟೋಬರ್ 18ರಂದು ಹರ್ಯಾಣದ ಅಂಬಾಲದಲ್ಲಿ ಜನಿಸಿದ್ದರು. 1976ರಲ್ಲಿ ಮರಾಠಿ ಚಿತ್ರ ಘಾಶಿರಾಮ್ ಕೋತ್ವಾಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಫ್ರೆಂಚ್ ಸೇರಿದಂತೆ ಸುಮಾರು 7ಕ್ಕೂ ಅಧಿಕ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

om-modi-story_647_010617102240

ಓಂಪುರಿ ದಿಢೀರ್ ನಿಧನಕ್ಕೆ ಭಾರತೀಯ ಚಿತ್ರರಂಗ ದಿಗ್ಭ್ರಮೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ವಿವಿಧ ರಂಗಗಳ ಗಣ್ಯರು, ನಟ ನಟಿಯರು ಕಂಬನಿ ಮಿಡಿದಿದ್ದಾರೆ.

ak-47

ಕನ್ನಡದಲ್ಲಿ 1977ರಲ್ಲಿ ‘ತಬ್ಬಲಿಯು ನೀನಾದೆ ಮಗನೇ’ 1999ರಲ್ಲಿ  ಶಿವಣ್ಣ ಅಭಿನಯದ ಎಕೆ 47, 2002ರಲ್ಲಿ ದರ್ಶನ್ ಜೊತೆ ದೃವ, ಇತ್ತೀಚಿನ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಗಳಲ್ಲಿ ಓಂಫುರಿ ನಟಿಸಿದ್ದರು. ಇನ್ನು ಬಿಡುಗಡೆಯಾದ ಟೈಗರ್‌ ಚಿತ್ರದಲ್ಲಿ ಓಂಪುರಿ ನಟಿಸಿದ್ದಾರೆ. ಮರಾಠಿ. ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಿತ್ರಗಳಲ್ಲಿ ನಟಿಸಿರುವ ಓಂಪುರಿ ಶ್ರೇಷ್ಠ ನಟರಾಗಿ ಜನಮನ ಗೆದ್ದಿದ್ದಾರೆ.