ಪ್ರಧಾನಿ ಮೋದಿ ಅವರ ಮೊದಲ ಕ್ಯಾಬಿನೆಟ್‍ನಲ್ಲೇ ದೇಶದ ರೈತರಿಗೆ, ಶ್ರಮಿಕ ವರ್ಗದವರಿಗೆ ಭರ್ಜರಿ ಗಿಫ್ಟ್..

0
312

ಎರಡನೇ ಬಾರಿ ಪ್ರಧಾನಿಯಾದ ನರೇಂದ್ರ ಮೋದಿಯವರು ಈ ಬಾರಿ ರೈತರ ಮೇಲೆ ಹೆಚ್ಚು ಕಾಳಜಿವಹಿಸುವ ಲಕ್ಷಣಗಳು ಕಂಡು ಬರುತ್ತಿದ್ದು, ಮೊದಲ ಕ್ಯಾಬಿನೆಟ್‍ನಲ್ಲೇ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದು ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಂತೆ ಪಿಎಂ-ಕಿಸಾನ್ ಯೋಜನೆಯನ್ನು ದೇಶದ ಎಲ್ಲಾ ರೈತರಿಗೂ ಕೊಡಲು ಸಂಪುಟ ಅನುಮೋದನೆ ಮಾಡಿದೆ.

Also read: ಟ್ವೀಟ್‌ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ಗೆ ವ್ಯಂಗ್ಯವಾಗಿ ಶುಭ ಹಾರೈಸಿರುವ ರಮ್ಯಾಗೆ ಚಳಿ ಬಿಡಿಸಿದ ಟ್ವಿಟ್ಟಿಗರು..

ಹೌದು ಪ್ರಧಾನಿ ಮೋದಿ ಅವರು ಮೊದಲ ಕ್ಯಾಬಿನೆಟ್‍ನಲ್ಲೇ ದೇಶದ ಜನತೆಗೆ ಅದರಲ್ಲೂ ಶ್ರಮಿಕ ವರ್ಗವಾದ ರೈತರು, ಕಾರ್ಮಿಕರು, ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಪ್ರಣಾಳಿಕೆಯ ಸಂಕಲ್ಪ ಪತ್ರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿರುವ ನರೇಂದ್ರ ಮೋದಿಯವರು. ಈ ಹಿಂದೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ. ಸಹಾಯಧನ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಇದೀಗ ಎಲ್ಲಾ ರೈತರಿಗೂ ವಿಸ್ತರಣೆ ಮಾಡಲು ಮೋದಿ ನೇತೃತ್ವದ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಇದರಿಂದ ದೇಶದ ಸುಮಾರು 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಒಟ್ಟು ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಏನಿದು ಕ್ಯಾಬಿನೆಟ್ ?

Also read: ಎರಡನೇ ಬಾರಿಗೆ ಪ್ರಧಾನಿಯಾದ ಮೋದಿಯವರ ಗೆಲುವನ್ನು ಸಾರ್ವಜನಿಕರ ಶೂ ಪಾಲಿಷ್ ಮಾಡಿ ಸಂಭ್ರಮಿಸಿದ ಬಿಜೆಪಿಗರು..

ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಯೋಜನೆ ಎಲ್ಲಾ ರೈತರಿಗೂ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಎಲ್ಲಾ ರೈತರಿಗೂ ವಾರ್ಷಿಕ 6 ಸಾವಿರ ರೂ. ಜಮೆ ಆಗಲಿದೆ. ಈ ಹಿಂದೆ 4.94 ಎಕ್ರೆ(2 ಹೆಕ್ಟೇರ್) ಹೊಂದಿದ ರೈತರಿಗೆ ಮಾತ್ರ ಈ ಯೋಜನೆ ಅನ್ವಯವಾಗುತಿತ್ತು. ಈ ಯೋಜನೆ ಮೂಲಕ ವರ್ಷಕ್ಕೆ ಮೂರು ಕಂತುಗಳಲ್ಲಿ 2 ಸಾವಿರ ರೂ. ಹಣ ರೈತರ ಖಾತೆಗೆ ಜಮೆಯಾಗಲಿದೆ. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ, 14.5 ಕೋಟಿ ರೈತರಿಗೆ ಅನುಕೂಲವಾಗಲಿದೆ. 15 ಸಾವಿರ ರೂ. ಮಾಸಿಕ ವೇತನ ಇರುವ ಅಸಂಘಟಿತ ವಲಯದ ಕಾರ್ಮಿಕರು ಮಾಸಿಕ 300 ರೂ. ಪಾವತಿಸಿದರೆ 60 ವರ್ಷದ ಬಳಿಕ ತಿಂಗಳಿಗೆ 3000 ರೂ. ಪಿಂಚಣಿ ಸಿಗಲಿದೆ. 1.5 ಕೋಟಿ ವಹಿವಾಟಿನ ಸಣ್ಣಕೈಗಾರಿಕೆಗಳನ್ನು ಜಿಎಸ್‍ಟಿಯಿಂದ ಹೊರಕ್ಕೆ ಇಡಲಾಗಿದೆ.

ರೈತರಿಗೆ ಪಿಂಚಣಿ ಯೋಜನೆ

Also read: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಈ ಸಂಸದ ತಮಗೆ ಹೂವಿನ ಬುಕ್ಕೆ, ಸಿಹಿತಿಂಡಿ ಬದಲು ನೋಟ್ಸ್ ಬುಕ್ಸ್ ನೀಡಿ ಎಂದು ಮನವಿ ಮಾಡಿದ್ದಾರೆ..

ಇದರ ಜತೆಗೆ ಎಲ್ಲ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಲು ಹಾಗೂ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಅಲ್ಪಾವಧಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳನ್ನು ನೀಡಲು ಉದ್ದೇಶಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಪೆನ್ಷನ್ ಯೋಜನಾ ಅಡಿ 18ರಿಂದ 40 ವರ್ಷದವರೆಗಿನ ನೋಂದಾಯಿತ ಸಣ್ಣ ಹಾಗೂ ಅತಿ ಸಣ್ಣ ರೈತರು 60 ವರ್ಷ ಕ್ರಮಿಸಿದ ಬಳಿಕ ಕನಿಷ್ಠ 3 ಸಾವಿರ ರೂ. ನಿಗದಿತ ಪಿಂಚಣಿ ಪಡೆದುಕೊಳ್ಳುವ ಯೋಜನೆ ಇದಾಗಿದೆ ಎಂದು ತಿಳಿಸಲಾಗಿದೆ. ಇದರಂತೆ ಜೂನ್ 17 ರಿಂದ ಜುಲೈ 26ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದ್ದು, ಜೂನ್ 19ಕ್ಕೆ ಹೊಸ ಸ್ಪೀಕರ್ ಆಯ್ಕೆ ಮಾಡಲಾಗುತ್ತದೆ. ಜೂನ್ 20ಕ್ಕೆ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದು, ಜುಲೈ 5ಕ್ಕೆ ಬಜೆಟ್ ಅಧಿವೇಶನ ನಡೆಯಲಿದೆ.