30 ವರ್ಷದಿಂದ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದ ಹುತಾತ್ಮ ಯೋಧನ ಪತ್ನಿಗೆ ಸ್ವಾತಂತ್ರ್ಯ ದಿನಾಚರಣೆಗೆ ಸಿಕ್ತು ಊರಿನವರಿಂದ ಸರ್ಪ್ರೈಸ್ ಗಿಫ್ಟ್!

0
147

ಇಡಿ ದೇಶದ ತುಂಬೆಲ್ಲ ನಿನ್ನೆ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ನಡೆಯುತು. ಈ ವೇಳೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರನ್ನು ನೆನೆದು ಅವರ ಕೊಡುಗೆಯನ್ನು ಸ್ಮರಿಸಿದರು. ಆದರೆ ಕೆಲವು ಹುತಾತ್ಮ ಯೋಧರ ಕುಟುಂಬಗಳು ಯಾವ ಮಟ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವುದು ಯಾರಿಗೂ ಅರಿವಿಗೆ ಬರಲಿಲ್ಲ, ಏಕೆಂದರೆ ಕೆಲವು ಯೋಧರ ಕುಟುಂಬಗಳು ಸರ್ಕಾರ ನೀಡಿದ ಪರಿಹಾರದಲ್ಲಿ ಜೀವನವನ್ನು ಕಲ್ಪಿಸಿಕೊಂಡು ಹೇಗೆ ಬದುಕುತ್ತಿವೆ. ಆದರೆ ಇನ್ನೂ ಕೆಲವರ ಪರಿಸ್ಥಿತಿ ನೋಡಿದರೆ ದೇಶ ಸೇವೆ ಮಾಡಿದ ಯೋಧ ಮನೆ ಪರಿಸ್ಥಿತಿ ಹೇಗೆ ಇದೆ ಎಂದು ಮನಕರಗುತ್ತೆ. ಇಂತಹದ ಒಂದು ಕುಟುಂಬಕ್ಕೆ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ ಊರಿನ ಜನರು ಒಂದು ಸರ್ಪ್ರೈಸ್ ಗಿಫ್ಟ್ ನೀಡಿದ್ದು ಇಡಿ ದೇಶದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು ಹುತಾತ್ಮ ಯೋಧನ ಪತ್ನಿ ಕುಡಿಸಲ್ಲಿ ವಾಸಿಸುತ್ತಿದ್ದು ಕಂಡು ಹೊಸ ಮನೆ ಉಡುಗೊರೆ ನೀಡುವ ಮೂಲಕ ಮಾನವೀಯತೆ ಹಾಗೂ ದೇಶಪ್ರೇಮ ಮೆರೆದಿದ್ದಾರೆ. ಮೋಹನ್ ಸಿಂಗ್ ಹುತಾತ್ಮರಾಗಿ 3 ದಶಕಗಳಾಗುತ್ತಾ ಬಂದರೂ ಸರ್ಕಾರ ಯಾವುದೇ ರೀತಿಯ ಸಹಾಯ ನೀಡದ ಕಾರಣಕ್ಕೆ ಆ ಊರಿನವರು ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಿ ರಾಜು ಬಾಯಿ ಅವರಿಗೆ ಮನೆಯನ್ನು ಕಟ್ಟಿಕೊಡಲು ಮುಂದಾದರು. ಆ ಕನಸು ನಿನ್ನೆ ನನಸಾಗಿದ್ದು, ಮುರುಕಲು ಗುಡಿಸಲಿನಲ್ಲಿದ್ದ ರಾಜು ಬಾಯಿ ಕುಟುಂಬಕ್ಕೆ 11 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್​ ಮನೆ ಕಟ್ಟಿಕೊಟ್ಟಿದ್ದಾರೆ.

Also read: ನೆರೆಪೀಡಿತ ಗ್ರಾಮಕ್ಕೆ 10 ಕೋಟಿ ದೇಣಿಗೆ ನೀಡಿದರೆ ಗ್ರಾಮಕ್ಕೆ ದಾನಿಯ ಹೆಸರು ನಾಮಕರಣ; ಈ ನಿರ್ಧಾರ ಸರಿನಾ??

1992ರಲ್ಲಿ ದಕ್ಷಿಣ ತ್ರಿಪುರ ಜಿಲ್ಲೆಯ ದಳಪತಿಪುರದಲ್ಲಿ ನಡೆದ ಹಠಾತ್​ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದರು. ಅವರಲ್ಲಿ ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹವಾಲ್ದಾರ್ ಮೋಹನ್ ಸಿಂಗ್ ಎಂಬ ಸೈನಿಕ ಕೂಡ ಒಬ್ಬರು. ಅಂದಿನಿಂದ ಮೋಹನ್ ಸಿಂಗ್ ಅವರ ಪತ್ನಿ ರಾಜು ಬಾಯಿ, ಇಬ್ಬರು ಮಕ್ಕಳು ಮುರಿದ ಗುಡಿಸಲಿನಲ್ಲಿಯೇ ಜೀವನ ಸಾಗಿಸುತ್ತಿದ್ದರು. ಸರ್ಕಾರ ಕೂಡ ಅವರಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ. ಸರ್ಕಾರದಿಂದ ಬರುತ್ತಿದ್ದ 700 ರೂ. ಮಾಸಿಕ ವೇತನದಲ್ಲೇ ಅವರು ಜೀವನ ನಡೆಸಬೇಕಾಗಿತ್ತು. ತೀವ್ರ ಬಡತನದ ಜೀವನ ಸಾಗಿಸುತ್ತಿದ್ದ ಹುತಾತ್ಮ ಸೈನಿಕನ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದ ಊರಿನವರು ಅವರಿಗಾಗಿ ಮನೆಯೊಂದನ್ನು ಕಟ್ಟಿಕೊಡಲು ಮುಂದಾದರು.

Also read: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದು ಏನು ಗೊತ್ತಾ??

ಸುಮಾರು 30 ವರ್ಷವಾದರೂ ಸರಕಾರ ಸಹ ಆ ಕುಟುಂಬಕ್ಕೆ ಯಾವುದೇ ಸಹಾಯ ಮಾಡಿರಲಿಲ್ಲ. ಈ ಹಿನ್ನೆಲೆ ‘ಒಂದು ಚೆಕ್ ಒಂದು ಸಹಿ’ ಎಂಬ ಚಳುವಳಿ ಆರಂಭಿಸಿ 11 ಲಕ್ಷ ರೂ. ಹಣ ಸಂಗ್ರಹ ಮಾಡಿದ್ದರು. ಆಗಸ್ಟ್ 15ರಂದು ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಹೊಸ ಮನೆಯ ಬೀಗವನ್ನು ಹುತಾತ್ಮ ಯೋಧನ ಪತ್ನಿಗೆ ಹಸ್ತಾಂತರಿಸಲಾಗಿದೆ. ಈ ವೇಳೆ. ಹುತಾತ್ಮ ಯೋಧನ ಪತ್ನಿ ಅವರಿಗೆ ರಾಖಿ ಕಟ್ಟಿದ್ದಾರೆ. ಇನ್ನು, 10 ಲಕ್ಷ ರೂ ಯಲ್ಲಿ ಮನೆಗೆ ವೆಚ್ಚ ಮಾಡಲಾಗಿದ್ದು, ಹುತಾತ್ಮ ಯೋಧ ಮೋಹನ್‌ ಸಿಂಗ್ ಪ್ರತಿಮೆಗೆ 1 ಲಕ್ಷ ರೂ. ಖರ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರತಿಮೆ ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲೇ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿದುಬಂದಿದೆ. ಜತೆಗೆ, ಯೋಧ ಓದಿದ ಸರಕಾರಿ ಶಾಲೆಗೆ ಅವರ ಹೆಸರನ್ನಿಡಲು ಸಹ ಚಿಂತನೆ ನಡೆದಿದೆ. ಎಂದು ಊರಿನ ಜನರು ಹೇಳಿದ್ದಾರೆ.