ಯೂನಿಫಾರಂ ಧರಿಸಿಕೊಂಡೆ ಯುವಕನ ಪಾದ ಮಸಾಜ್ ಮಾಡಿದ ಐಪಿಎಸ್ ಅಧಿಕಾರಿ; ಪೊಲೀಸ್ ಅಧಿಕಾರಿಗಳ ಮಾನವಿತೆಗೆ ಭಾರಿ ಮೆಚ್ಚುಗೆ..

0
301

ಪೊಲೀಸ್ ಅಧಿಕಾರಿಗಳು ಎಂದರೆ ಬರಿ ಭದ್ರತೆ ಕಾಪಾಡುವರು ಎನ್ನುವುದು ಎಲ್ಲರು ತಿಳಿದುಕೊಂಡ ವಿಚಾರವಾಗಿದೆ. ಆದರೆ ಕೆಲವು ಅಧಿಕಾರಿಗಳು ಸಮಾಜದ ಒಳ್ಳೆಯ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಹಲವು ಅಧಿಕಾರಿಗಳು ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕೂಡ ಪೊಲೀಸ್​ ಅಧಿಕಾರಿ ಹರಿದ್ವಾರಕ್ಕೆ ಹೊರಟಿದ್ದ ಯಾತ್ರಾರ್ಥಿಯ ಪಾದಕ್ಕೆ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಈ ವಿಡಿಯೋ ಅನ್ನು ಶಾಮ್ಲಿ ಪೊಲೀಸ್​ ಅಧಿಕಾರಿಯ ಅಧಿಕೃತ ಟ್ವಿಟ್ಟರ್​ನಿಂದಲೇ ಪೋಸ್ಟ್​ ಮಾಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು ಹರಿದ್ವಾರಕ್ಕೆ ಹೊರಟಿದ್ದ ಯಾತ್ರಾರ್ಥಿಯ ಪಾದಕ್ಕೆ ಶಾಮ್ಲಿ ಜಿಲ್ಲೆಯ ಪೊಲೀಸ್​ ಅಧಿಕಾರಿ ಮಸಾಜ್ ಮಾಡಿದ್ದಾರೆ. ಇದನ್ನು ಅಧಿಕಾರಿಗಳೇ ಪೋಸ್ಟ್ ಮಾಡಿದ್ದು, ‘ಸುರಕ್ಷತೆಯ ಜೊತೆ ಜೊತೆಗೆ ಸೇವೆಯನ್ನೂ ಮಾಡುತ್ತೇವೆ’ ಎಂದು ಈ ವಿಡಿಯೋವನ್ನು ಶಾಮ್ಲಿ ಪೊಲೀಸ್​ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಯಾತ್ರಾರ್ಥಿಗಳಿಗೆ ಡಯಾಗ್ನಾಸ್ಟಿಕ್ ಕ್ಯಾಂಪ್​ ಏರ್ಪಡಿಸುವುದಾಗಿ ಉತ್ತರಪ್ರದೇಶದ ಸೂಪರಿಂಟೆಂಡ್​ ಆಫ್​ ಪೊಲೀಸ್​ ಘೋಷಿಸಿದ್ದಾರೆ. ಹಾಗೇ, ಈ ವೇಳೆ ಯಾತ್ರಾರ್ಥಿಯೊಬ್ಬನ ಕಾಲಿಗೆ ಯೂನಿಫಾರಂ ಧರಿಸಿಕೊಂಡೇ ಎಸ್​ಪಿ ಅಜಯ್ ಕುಮಾರ್ ಪಾಂಡೆ ಮಸಾಜ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೆಡಿಕಲ್ ಕ್ಯಾಂಪ್​ಗೆ ಭೇಟಿ ನೀಡಿದ್ದ ಎಸ್​ಪಿ ಅಜಯ್ ಕುಮಾರ್ ಪಾಂಡೆ ಅಲ್ಲಿನ ಯುವ ಯಾತ್ರಾರ್ಥಿಯೊಬ್ಬನ ಕಾಲನ್ನು ಮಸಾಜ್ ಮಾಡುತ್ತಿರುವ ವಿಡಿಯೋ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಯೂನಿಫಾರಂ ಧರಿಸಿಕೊಂಡು ಬೇರೆಯವರ ಕಾಲು ಒತ್ತುತ್ತಿರುವುದು ಸರಿಯಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಪ್ರಚಾರಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ. ಇದು ನಿಜವಾದ ಕಾಳಜಿಯಲ್ಲ, ಪ್ರಚಾರದ ಗಿಮಿಕ್ ಎಂದು ಕೂಡ ಅನೇಕರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಪಾಂಡೆ, ನಾನು ಯಾವುದೇ ಅಹಂಕಾರವಿಲ್ಲದೆ, ನಿಸ್ವಾರ್ಥದಿಂದ ಆ ಬಾಲಕನ ಕಾಲನ್ನು ಒತ್ತಿದ್ದೆ. ಆತ ಬಹಳ ಸುಸ್ತಾದಂತೆ ಕಾಣುತ್ತಿದ್ದ. ಹೀಗಾಗಿ, ಕಾಲಿಗೆ ಮಸಾಜ್ ಮಾಡಿದ್ದೇನೆ.

Also read: ಹಿಂದೂ ಮತ್ತು ಮುಸ್ಲಿಂ ಕಲ್ಮಾ- ಮಂತ್ರಗಳ ಮಹತ್ವವನ್ನು ತಿಳಿಸುತ್ತಿರುವ ಯುಪಿ ಮದರಸಾ; ಗಾಯತ್ರಿ ಮಂತ್ರ ಪಠಿಸುತ್ತಿರುವ ಮುಸ್ಲಿಂ ಮಕ್ಕಳು..

ಅಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲಿದ್ದು ಕೆಲಸ ಮಾಡಬೇಕಾದ್ದರಿಂದ ಜನರೊಂದಿಗೆ ಆದಷ್ಟು ಬೆರೆಯಬೇಕಾಗುತ್ತದೆ. 200ರಿಂದ 300 ಕಿ.ಮೀ. ದೂರ ಹಸಿವು ಮತ್ತು ಬಾಯಾರಿಕೆಯಿಂದ ನಡೆಯಬೇಕೆಂದರೆ ಅದು ಸುಲಭವಲ್ಲ. ಹೀಗಾಗಿ, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾವು ಮೆಡಿಕಲ್ ಕ್ಯಾಂಪ್ ಮಾಡಿದ್ದೆವು’ ಎಂದು ಹೇಳಿದ್ದಾರೆ. ಎಸ್​ಪಿ ಅಜಯ್ ಕುಮಾರ್ ಪಾಂಡೆ ಅವರ ಕಾರ್ಯಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಶಾಮ್ಲಿ ಜಿಲ್ಲೆಯ ಕೆಲವು ಪೊಲೀಸರು ಯಾತ್ರಾರ್ಥಿಗಳಿಗೆ ಹಣ್ಣು, ನೀರು ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗೆ ಚಿಕಿತ್ಸೆ ಖುದ್ದಾಗಿ ಕರೆದುಕೊಂಡು ಹೋದವರಿದ್ದಾರೆ. ಅದೇರೀತಿ ಅಜಯ್ ಸಿಂಗ್ ಆ ಬಾಲಕನ ಪಾದ ಮಸಾಜ್ ಮಾಡಿ ಮಾನವಿತೆ ಮೆರೆದಿದ್ದಾರೆ.