ಈ ಕನ್ನಡದ ಬಸ್ ಹೇಗಿದೆ ಗೊತ್ತ? ಇದರಲ್ಲಿ ಒಮ್ಮೆ ನೀವು ಪ್ರಯಾಣ ಮಾಡಲೇ ಬೇಕು!!

0
717

 

ಕೆಲವು ಬಸ್ ಎಂದರೇ ಇರಿಸು ಮುರಿಸು ಸಹಜ.. ಏಕೆಂದರೇ ಸ್ವಚ್ಛತೆಯ ಕೊರತೆ.. ಆದರೇ ಇಲ್ಲೊಂದು ಬಸ್ ಇದೆ ನಮ್ಮ ಸ್ವಂತ ಮನೆಗಿಂತ ಹೆಚ್ಚು ಸ್ವಚ್ಛವಾಗಿದೆ.. ಜೊತೆಗೆ ಯಾವ ಬಸ್ ನಲ್ಲೂ ಸಿಗದ ಸೌಕರ್ಯ ಉಚಿತವಾಗಿ ಇಲ್ಲಿ ಸಿಗುತ್ತಿದೆ..
ಯಾವುದು ಈ ಬಸ್??  ಈ ಬಸ್ ಬೇರೆಲ್ಲೂ ಇಲ್ಲ ನಮ್ಮ ರಾಜ್ಯದಲ್ಲೇ ಇದೆ.. ದಿನ ನಿತ್ಯ ಹುಬ್ಬಳಿಯಿಂದ ಅಲ್ಲಾಪುರಕ್ಕೆ ಸಂಚರಿಸುತ್ತದೆ..

ಈ ಬಸ್ ನಲ್ಲಿ ಯಾರೂ ಕೂಡ ಅಸಭ್ಯವಾಗಿ ವರ್ತಿಸುವ ಹಾಗಿಲ್ಲ.. ಇಷ್ಟೇ ಅಲ್ಲಾ.. ಈ ಬಸ್ಸಿನಲ್ಲಿ ಎಲ್ಲಾ ಹಬ್ಬಗಳ ಆಚರಣೆ ನಡೆಯುತ್ತದೆ.. ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಗಣ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಗಾಂಧಿ ಜಯಂತಿ.. ಸ್ವಾತಂತ್ರ್ಯ ದಿನಾಚರಣೆಗೆ ಕೇಸರಿ ಬಿಳಿ ಹಸಿರಿನಲ್ಲಿ ಕಂಗೊಳಿಸುವ ಬಸ್.. ಕನ್ನಡ ರಾಜ್ಯೋತ್ಸವ ಬಂತೆಂದರೆ ಕೆಂಪು ಮತ್ತು ಹಳದಿ ಬಣ್ಣದಿಂದ ಅಲಂಕಾರಗೊಂಡಿರುತ್ತದೆ..

 

ಹಾಗೆಯೇ ಬಸ್ ನಲ್ಲಿ ಪ್ರತಿ ನಿತ್ಯ ಭಕ್ತಿ ಗೀತೆಗಳು ಕೇಳುತ್ತವೆ.. ಶ್ರಾವಣ ಮಾಸದ ಗೀತೆಗಳು.. ಹುಬ್ಬಳ್ಳಿಯ ಸಿದ್ದಾರೂಡರ ಜಾತ್ರೆಯ ಹಾಡುಗಳು ಇತ್ಯಾದಿ ಜನರ ಕಿವಿಗೆ ಇಂಪನ್ನು ಕೊಡುತ್ತವೆ. ಪ್ರಯಾಣಿಕರಿಗೆ ಪ್ರತಿ ದಿನ ದಿನಪತ್ರಿಕೆಗಳು, ಶುದ್ದ ಕುಡಿಯುವ ನೀರಿನ ವ್ಯವಸ್ಥೆಯೂ ಸಹ ಇಲ್ಲಿ ಇದೆ.. ಡಿಜಿಟಲ್ ಗಡಿಯಾರವನ್ನೂ ಕೂಡ ಬಸ್ಸಿನಲ್ಲಿ ಅಳವಡಿಸಿದ್ದಾರೆ..

ಇಷ್ಟೆಲ್ಲಾ ವ್ಯವಸ್ಥೆಯನ್ನು ಸರ್ಕಾರ ಒದಗಿಸುತ್ತಿಲ್ಲ ಬದಲಾಗಿ ಈ ಬಸ್ ನ ಚಾಲಕ ನಿರ್ವಾಹಕರಾದ ಶಿವಾನಂದ ಪೂಜಾರ, ಪ್ರಕಾಶ್ ಮಂಜುನಾಥ, ಶಿವನಗೌಡ ಭರಮಗೌಡ, ಅಭಿ ತಡಸದ, ಚನ್ನಪ್ಪ ಪೂಜಾರ ರವರು ತಮ್ಮ ಸ್ವಂತ ದುಡ್ಡಿನಿಂದ ಪ್ರಯಾಣಿಕರಿಗೆ ಒದಗಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

ನೀವು ಹುಬ್ಬಳ್ಳಿ ಕಡೆ ಹೋದರೇ ಈ ಬಸ್ಸಿನಲ್ಲಿ ಒಮ್ಮೆ ಪ್ರಯಾಣಿಸಿ ಬನ್ನಿ..
ಶುವಾಗಲಿ ಭಶೇರ್ ಮಾಡಿ..