ಈ ಒಂದೆಲಗ ಸೊಪ್ಪಿನ ತಂಬುಳಿ ಮಾಡಿ ತಿನ್ನಿ, ಸರ್ವ ರೋಗ ಪರಿಹಾರ ಕಂಡುಕೊಳ್ಳಿ..!!

0
2435

ಬ್ರಾಹ್ಮಿ/ ಒಂದೆಲಗ ನೋಡಲು ಪುಟ್ಟದಾದರೂ ಅದರ ಆರೋಗ್ಯಕಾರಿ ಗುಣಗಳು ಬೆಟ್ಟದಷ್ಟಿವೆ. ಇದರ ಎಲೆಗಳ ಬಳಕೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೇಧಾಶಕ್ತಿಯನ್ನು ಬೆಳೆಸುತ್ತದೆ. ಹೃದಯಕ್ಕೆ ಹಿತಕಾರಿ, ಚರ್ಮರೋಗಗಳಲ್ಲಿ ಬಹು ಪರಿಣಾಮಕಾರಿ. ಅಷ್ಟೇ ಅಲ್ಲ ಊತ, ಅರುಚಿ, ಜ್ವರ, ಕೆಮ್ಮು, ದಮ್ಮು, ರಕ್ತಹೀನತೆ, ರಕ್ತವಿಕಾರಗಳಲ್ಲಿ ಇದರ ಬಳಕೆಗೆ ಬಹುಮಹತ್ವವಿದೆ.

ಸರ್ವ ರೋಗ ಪರಿಹಾರ ನೀಡುವ ಶಕ್ತಿ ಇರುವುದರಿಂದ ಇದನ್ನು ತಂಬುಳಿ ಮಾಡಿ ಸೆವೆಸುವುದರಿಂದ ತುಂಬಾ ಉತ್ತಮ.

ಬೇಕಾಗುವ ಸಾಮಗ್ರಿಗಳು

 • ಒಂದೆಲಗ
 • ತೆಂಗಿನ ತುರಿ
 • ಮಜ್ಜಿಗೆ
 • ಜೀರಿಗೆ
 • ಸ್ವಲ್ಪ ಎಣ್ಣೆ
 • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

 • ಮೊದಲಿಗೆ ಒಂದೆಲಗವನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
 • ನಂತರ ಸ್ವಲ್ಪ ಜೀರಿಗೆ ಜೊತೆ ಒಂದೆಲಗದ ಎಲೆಗಳನ್ನು ಹುರಿಯಿರಿ.
 • ಇದಕ್ಕೆ ತೆಂಗಿನ ತುರಿ ಹಾಕಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ.

ಸೂಚನೆ:

 • ಈ ತಂಬುಳಿಯನ್ನು ರಾತ್ರಿ ಸೇವಿಸಬಾರದು.
 • ಈ ತಂಬುಳಿಯನ್ನು ನಿರಂತರ ಮೂರು ದಿನ ತೆಗೆದು ಕೊಳ್ಳಬಹುದೇ ವಿನಃ ಹೆಚ್ಚು ದಿನ ಸೇವಿಸಬಾರದು.
 • ರೆಫ್ರಿಜರೇಟರ್ ನಲ್ಲಿಟ್ಟ ತಂಬುಳಿಯಲ್ಲಿ ಅದರ ಮೂಲ ಗುಣ (ಜೀರ್ಣಕಾರಿ) ಕಡಿಮೆಯಾಗಿ ತಾಮಸ ಗುಣ ಜಾಸ್ತಿಯಾಗುತ್ತದೆ.
 • ತಂಬುಳಿಯನ್ನು ಮಾಡಿದ ಮೇಲೆ ಕುದಿಸಿಡಬಾರದು.