ದೇಶಾದ್ಯಂತ ಒಂದೇ ಮಾದರಿಯ ಡ್ರೈವಿಂಗ್ ಲೈಸೆನ್ಸ್‌ ಜಾರಿ; ಒನ್ ಎಲೆಕ್ಷನ್, ಒನ್ ರೇಷನ್, ಒನ್ ಡ್ರೈವಿಂಗ್ ಲೈಸೆನ್ಸ್‌, ಕೇಂದ್ರ ಸರ್ಕಾರದ ಚಿಂತನೆ!!

0
143

ದೇಶದಲ್ಲಿ ಇನ್ಮುಂದೆ ಎಲ್ಲವೂ ಒಂದೇ ರೀತಿಯಲ್ಲಿರಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಯೋಚನೆಯಾಗಿದೆ. ಅದರಂತೆ ಈಗಾಗಲೇ ಒಂದೇ ಒನ್ ನೇಷನ್, ಒನ್ ಎಲೆಕ್ಷನ್, ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೆ ಚಿಂತನೆ ನಡೆಸಿದ್ದಾರೆ. ಅದರಂತೆ ಕೇಂದ್ರ ಸರ್ಕಾರ ಈಗ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್, ಜಾರಿಗೆ ತರಲಿದೆ.

ಏನಿದು ಒಂದೇ ಲೈಸನ್ಸ್?

Also read: LPG ಗ್ರಾಹಕರಿಗೆ ಸಿಹಿ ಸುದ್ದಿ; ಎಲ್‍ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ, ಯಾವ ಸಿಲಿಂಡರ್ ಗೆ ಎಷ್ಟು ಇಳಿಕೆ? ಇಲ್ಲಿದೆ ನೋಡಿ ಮಾಹಿತಿ..

ಹೌದು ಇನ್ನು ಮುಂದೆ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್ ನಿಯಮ ಜಾರಿಗೆ ಬರಲಿದ್ದು, ಒಂದೇ ಮಾದರಿಯ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನಗಳ ಪ್ರಮಾಣ ಪತ್ರ(ಆರ್.ಸಿ.) ನೀಡಲಾಗುವುದು. ಸ್ಮಾರ್ಟ್ ರಿಯಲ್ ಕಾರ್ಡ್ ಮತ್ತು ಆರ್.ಸಿ. ಗಳು ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್ ಗಳನ್ನು ಹೊಂದಿರಲಿದೆ. ಇವುಗಳ ಸಹಾಯದಿಂದ ಸಂಚಾರ ಪೊಲೀಸರು ತಮ್ಮಲ್ಲಿರುವ ಡಿವೈಸ್ ಗೆ ಆರ್.ಸಿ., ಡಿ.ಎಲ್. ಹಿಡಿದಾಗ ಮಾಹಿತಿ ಸಿಗಲಿದೆ. ಈ ಹೊಸ ನಿಯಮದಿಂದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪದೇಶಗಳ ಡ್ರೈವಿಂಗ್‌ ಲೈಸನ್ಸ್‌ ಮತ್ತು ವಾಹನಗಳ ಪ್ರಮಾಣ ಪತ್ರ (ಆರ್‌ಸಿ) ಒಂದೇ ರೀತಿಯ ವಿನ್ಯಾಸದಿಂದ ಕೂಡಿರಲಿದೆ. ಈ ಹೊಸ ವ್ಯವಸ್ಥೆಯಲ್ಲಿ ಲೈಸನ್ಸ್​ಗಳ ಬಣ್ಣ , ಮಾದರಿ ಮತ್ತು ಭದ್ರತಾ ವ್ಯವಸ್ಥೆಗಳು ಒಂದೇ ರೀತಿಯಲ್ಲಿರಲಿವೆ.

ಡಿಎಲ್ ಮಾದರಿ ಹೇಗೆ?

Also read: ಇನ್ಮುಂದೆ ನಿಮ್ಮ ವಾಹನಕ್ಕೆ PRESS, POLICE, ARMY, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಝ್ ಪಕ್ಕಾ; ಯಾಕೆ ಅಂತ ಈ ಮಾಹಿತಿ ನೋಡಿ..

ಈ ಸ್ಮಾರ್ಟ್​ ಡಿಎಲ್​ ಕಾರ್ಡ್ ಮತ್ತು ಆರ್​.ಸಿಗಳು ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್​ಗಳನ್ನು ಹೊಂದಿರುತ್ತವೆ. ಇವುಗಳಿಗೆ ಎಟಿಎಂ ಕಾರ್ಡ್‌ ಮತ್ತು ಮೆಟ್ರೋ ಕಾರ್ಡ್​ಗಳಲ್ಲಿರುವ ನಿಯರ್‌ ಫೀಲ್ಡ್‌ ಫೀಚರ್‌ ಅನ್ನು ಅಳವಡಿಸಲಾಗಿದ್ದು, ಇದರ ಸಹಾಯದಿಂದ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಅವರ ಬಳಿ ಅಭ್ಯವಿರುವ ಡಿವೈಸ್​ಗೆ ನಿಮ್ಮ ಡಿಎಲ್-ಆರ್​ಸಿ ಕಾರ್ಡ್​ನ್ನು ಹಿಡಿದಾಗ ಸಂಪೂರ್ಣ ಮಾಹಿತಿ ಸಿಗಲಿದೆ.

ಮರು ನವೀಕರಣದ ಹೇಗೆ?

ನಿಮ್ಮ ಹಳೆ ಡ್ರೈವಿಂಗ್‌ ಲೈಸನ್ಸ್​ನ ಮರು ನವೀಕರಣದ ಸಂದರ್ಭದಲ್ಲಿ ಹೊಸ ಮಾದರಿಯ ಸ್ಮಾರ್ಟ್​ ಡಿ.ಎಲ್‌.ಗಳನ್ನು ನೀಡಲಾಗುತ್ತದೆ. ಈ ಹೊಸ ಡ್ರೈವಿಂಗ್ ಲೈಸನ್ಸ್​ ಪಡೆಯಲು ಕೇವಲ 15 ರೂ.ಗಳಿಂದ 20 ರೂ. ಶುಲ್ಕ ವಿಧಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೊಸ ಮಾದರಿಯ ಡ್ರೈವಿಂಗ್ ಲೈಸೆನ್ಸ್​ ಜಾರಿಯಿಂದ ನಿಯಮ ಉಲ್ಲಂಘನೆ, ಅಪರಾಧ ಕಡಿಮೆಯಾಗಲಿದೆ. ಹಾಗೆಯೇ ನಿಯಮವನ್ನು ಮೀರಿ ವಾಹನ ಚಲಾಯಿಸಿದ್ದರೆ ಈ ಸ್ಮಾರ್ಟ್​ಕಾರ್ಡ್​ ಮೂಲಕ ಮಾಹಿತಿ ಪಡೆಯಬಹುದು. ಹಾಗೆಯೇ ಈ ಸ್ಮಾರ್ಟ್​ ಲೈಸೆನ್ಸ್​ನಲ್ಲಿ ಮತ್ತಷ್ಟು ಮಾಹಿತಿಗಳನ್ನು ಶೇಖರಿಸಿಟ್ಟುಕೊಳ್ಳುವ ವ್ಯವಸ್ಥೆಯನ್ನೂ ನೀಡಲಾಗಿರುತ್ತದೆ ಎಂದು ತಿಳಿಸಿದೆ.

ಅಂಗಾಂಗ ದಾನ ಮಾಡಲು ಅವಕಾಶ:

Also read: ಒನ್ ನೇಷನ್ ಒನ್ ಎಲೆಕ್ಷನ್, `ಒನ್ ನೇಷನ್ ಒನ್ ರೇಷನ್’ ಯೋಚನೆಯಲ್ಲಿರುವ ನರೇಂದ್ರ ಮೋದಿ 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿ?

ಹೊಸ ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಚಾಲಕನ ಮರಣಾನಂತರ ಅಂಗಾಂಗ ದಾನ ಮಾಡಿಕೊಳ್ಳುವ ಬಗ್ಗೆ ಘೋಷಿಸಬಹುದಾಗಿದೆ. ಸ್ಮಾರ್ಟ್​ ಡ್ರೈವಿಂಗ್ ಲೈಸನ್ಸ್​ನಲ್ಲಿ ದಿವ್ಯಾಂಗರಿಗೆ ಮೀಸಲಾಗಿರುವ ವಾಹನದ ಕುರಿತು ಮತ್ತು ಚಾಲನೆ ಬಗ್ಗೆ ಸಂಬಂಧಿಸಿದ ಮಾಹಿತಿಗಳನ್ನು ಸಹ ಒಳಗೊಂಡಿರುತ್ತದೆ. ಇದರ ಜತೆಗೆ ವಾಹನದಿಂದ ಹೊರ ಸೂಸುವ ಮಾಲಿನ್ಯದ ಅಂಶಗಳ ಬಗ್ಗೆಯು ಹೊಸ ಮಾದರಿಯ ಚಾಲನಾ ಪರವಾನಗಿಯಿಂದ ಮಾಹಿತಿ ಪಡೆಯಬಹುದು ಎಂದು ತಿಳಿಸಲಾಗಿದೆ. ಹೀಗೆ ಒನ್ ಎಲೆಕ್ಷನ್, ಒನ್ ನೇಷನ್ ಒನ್ ರೇಷನ್, ಒನ್ ಡಿಎಲ್ ಮಾದರಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ.