ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಫೋಟೋ ತೆಗೆದಿದಕ್ಕೆ ಕೈ ಕಾರ್ಯಕರ್ತರಿಂದ ಪತ್ರಕರ್ತರ ಮೇಲೆ ಹಲ್ಲೆ..

0
154

ದೇಶದಲ್ಲಿ ಲೋಕಸಭಾ ಚುನಾವಣೆ ಈ ಸಲ ಬಾರಿ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ಬಿಜೆಪಿ ನಡುವೆ ಪೈಪೋಟಿಯ ಬಿರುಸಿನ ಪ್ರಚಾರಗಳು, ಸಭೆಗಳು ನಡೆದಿವೆ. ಕೆಲವು ಕಡೆಗಳಲ್ಲಿ ಸಭೆಗಳು ಬಾರಿ ಜನರಿಂದ ತುಂಬಿದ್ದು ಇನ್ನು ಕೆಲವು ಕಡೆ ಖಾಲಿ ಸಭೆಗಳು ನಡೆದು ಕಾರ್ಯಕರ್ತರಲ್ಲಿ ಕಿಚ್ಚು ಮೂಡಿಸುತ್ತಿದೆ. ಇದರಿಂದ ಎರಡು ಪಕ್ಷಗಳ ನಡುವೆ ಕಿತ್ತಾಟಗಳು ಮತ್ತು ಮಾದ್ಯಮದವರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದಕ್ಕೆ ನಿದರ್ಶನವಾಗಿ ತಮಿಳುನಾಡಿನಲ್ಲಿ ಖಾಲಿ ಕುರ್ಚಿಗಳ ಫೋಟೋ ತೆಗೆದಿದಕ್ಕೆ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ.
ಹೌದು ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಫೋಟೋ ತೆಗೆದಿದಕ್ಕೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿದ್ದು ದೇಶದ ತುಂಬೆಲ್ಲ ಕೈ ನಾಯಕರ ಗುಂಡಾಗಿರಿಗೆ ವಿರೋಧಗಳು ವ್ಯಕ್ತವಾಗಿದೆ. ವಾರಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್ ಕಾಂಗ್ರೆಸ್ ಸಮಾವೇಶದಲ್ಲಿ ಜನರು ಭಾಗವಹಿಸದೆ ಖಾಲಿ ಉಳಿದಿದ್ದ ಕುರ್ಚಿಗಳ ಫೋಟೋ ತೆಗೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

@publictv.in

Also read: ಲೋಕ ಚುನಾವಣೆಗೆ ಕಾಂಚಾಣದ ಸದ್ದು; ಕುಮಾರಸ್ವಾಮಿ ಕಾರನ್ನೇ ತಡೆದು ತಪಾಸಣೆ ಮಾಡಿದ ವೇಳೆ ಸಿಕ್ಕಿದ್ದು ಏನು ಗೊತ್ತೇ..

ಏನಿದು ಘಟನೆ?

ಕಾಂಗ್ರೆಸ್ ಕಾರ್ಯಕರ್ತರು ಫೋಟೊ ಜರ್ನಲಿಸ್ಟ್​​ಗಳನ್ನು ಹಿಡಿದು ಮನಬಂದಂತೆ ಥಳಿಸಿರುವ ಘಟನೆ ತಮಿಳುನಾಡಿನ ವಿರುಧುನಗರದನಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ವಿರುಧುನಗರದಲ್ಲಿ ಕಾಂಗ್ರೆಸ್​ ಪಕ್ಷದ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದ್ರೆ ಸಮಾವೇಶಕ್ಕೆ ಜನ ಆಗಮಿಸದ ಕಾರಣ ಖುರ್ಚಿಗಳೆಲ್ಲಾ ಖಾಲಿ ಹೊಡೆಯುತ್ತಿದ್ದವು. ಈ ವೇಳೆ ಫೋಟೊ ಜರ್ನಲಿಸ್ಟ್​​ಗಳು ಆ ಖಾಲಿ ಖುರ್ಚಿಗಳ ಫೋಟೊ ತೆಗೆಯುತ್ತಿದ್ದರು. ಅದಕ್ಕೆ ರೊಚ್ಚಿಗೆದ್ದ ಸ್ಥಳೀಯ ಕಾಂಗ್ರೆಸ್​ ಕಾರ್ಯಕರ್ತರು ಜರ್ನಲಿಸ್ಟ್​​ಗಳನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಘಟನೆಗೆ ಮುಖ್ಯ ಆರೋಪಿಯಾದ ಆರ್.ಎಂ. ಮುತ್ತುರಾಜ್ ಎಂದು ಗುರುತಿಸಲಾಗಿದ್ದು, ಸಮಾವೇಶದಲ್ಲಿ ತಮಿಳುನಾಡು ಕಾಂಗ್ರೆಸ್‍ನ ಅಧ್ಯಕ್ಷ ಕೆಸ್ ಅಳಗಿರಿ ಭಾಗವಹಿಸಿದ್ದರು. ಘಟನೆ ಕುರಿತು ಪತ್ರಕರ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತೀಯ ಜನತಾ ಪಾರ್ಟಿ ಘಟನೆಯನ್ನು ಖಂಡಿಸಿದೆ. ಅಲ್ಲದೇ ಕೈ ಕಾರ್ಯಕರ್ತರನ್ನು ಗೂಂಡಾಗಳು ಎಂದು ಆರೋಪಿಸಿದೆ. ಈ ತರಹದ ಘಟನೆಗಳು ಚುನಾವಣೆಯಲ್ಲಿ ನಡೆಯುವುದು ಸಾಮಾನ್ಯವಾಗಿದ್ದು ಕರ್ನಾಟಕದ ಮಂಡ್ಯದಲ್ಲಿ ಕೂಡ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಕೇಳಿ ಬರುತ್ತಿದ್ದು, ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಗುರುದೇವನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗುರುದೇವನಹಳ್ಳಿಯಲ್ಲಿ ಪ್ರಚಾರಕ್ಕೆ ಬರಬೇಕಾಗಿತ್ತು. ಅವರಿಗಾಗಿ ಜನ ಕಾಯುತ್ತಿದ್ದರು. ಈ ವೇಳೆ ಕಾರ್ತಿಕ್ ಹಾರ್ನ್‌ ಮಾಡುತ್ತಾ ಬೈಕ್‌ನಲ್ಲಿ ಬಂದಿದ್ದಾರೆ. ನಿಧಾನವಾಗಿ ತೆರಳುವಂತೆ ಸ್ಥಳದಲ್ಲಿದ್ದ ಜನರು ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಘರ್ಷಣೆ ಉಂಟಾಗಿದೆ. ಘಟನೆಯಲ್ಲಿ ಅನಿಲ್‌ ಮತ್ತು ಕಾರ್ತಿಕ್‌ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಘಟನೆ ನಡೆದ ಬಗ್ಗೆ ಮಾಹಿತಿ ಪಡೆದುಕೊಂಡ ಕೂಡಲೇ ಆಸ್ಪತ್ರೆಗೆ ಆಗಮಿಸಿದ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಭಾರತೀನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.